18ಗ್ರಾಂ ಪ್ರೊಟೀನ್, 8 ಗ್ರಾಂ ಫೈಬರ್ ಮತ್ತು ಎಲ್ಲಾ 9 ಅಮಿನೋ ಆಮ್ಲಗಳನ್ನು ಹೊಂದಿರುವ ಸಸ್ಯ ಯಾವುದು ಗೊತ್ತೆ?

ಸಾಂದರ್ಭಿಕ ಚಿತ್ರ | Photo Credit : freepik
ಸಿಲ್ಕ್ ಅವರೆ ಸಂಪೂರ್ಣ ಪ್ರೊಟೀನ್ನ ಮೂಲವಾಗಿದ್ದು, ಎಲ್ಲಾ ಒಂಭತ್ತು ಅಗತ್ಯ ಅಮೈನೋ ಆಮ್ಲಗಳನ್ನು ಹೊಂದಿರುತ್ತವೆ
ಸಾಮಾನ್ಯವಾಗಿ ಪ್ರಾಣಿಜನ್ಯ ಪ್ರೊಟೀನ್ಗೆ ಹೋಲಿಸಿದರೆ ಸಸ್ಯಜನ್ಯ ಪ್ರೊಟೀನ್ ಅನ್ನು ಕೀಳಂದಾಜು ಮಾಡಲಾಗುತ್ತದೆ. ಆದರೆ ಈ ಭಾವನೆ ನಿಧಾನವಾಗಿ ಬದಲಾಗುತ್ತಿದೆ. ನಿರ್ದಿಷ್ಟ ಸಸ್ಯಜನ್ಯ ಆಹಾರಗಳು ಅತ್ಯುತ್ತಮ ಪ್ರಮಾಣದ ಪ್ರೊಟೀನ್ ಅನ್ನು ಒದಗಿಸುತ್ತವೆ. ಅಲ್ಲದೆ, ಹೆಚ್ಚುವರಿ ಪೋಷಕಾಂಶದ ಲಾಭಗಳನ್ನೂ ತರುತ್ತವೆ.
ಬಹುತೇಕ ಪ್ರಾಣಿಜನ್ಯ ಪ್ರೊಟೀನ್ಗಳು ಸ್ಯಾಚುರೇಟೆಡ್ ಕೊಬ್ಬುಗಳ ಜೊತೆಗೆ ಬರುತ್ತವೆ. ಆದರೆ ಸಸ್ಯ ಪ್ರೊಟೀನ್ಗಳ ಜೊತೆಗೆ ಫೈಬರ್, ಆಂಟಿ ಆಕ್ಸಿಡಂಟ್ಗಳು ಮತ್ತು ಕರುಳಿ ಸ್ನೇಹಿ ಸಂಯುಕ್ತಗಳನ್ನು ಹೊಂದಿವೆ. ಹೀಗಾಗಿ ಸಸ್ಯಜನ್ಯ ಪ್ರೊಟೀನ್ಗಳು ಆಹಾರಕ್ಕೆ ಹೆಚ್ಚು ಸಮತೋಲಿತ ಮತ್ತು ಸಂಪೂರ್ಣ ಸೇರ್ಪಡೆಯಾಗಿರುತ್ತವೆ. ಇಂತಹ ಶಕ್ತಿಯುತ ಪ್ರೊಟೀನ್ ಬೇಕೆಂದರೆ ನೀವು ಸಸ್ಯಪ್ರೊಟೀನ್ ಅನ್ನು ನೋಡುವ ರೀತಿಯೇ ಬದಲಾಗಲಿದೆ.
ಯುನೈಟೆಡ್ ಕಿಂಗ್ಡಂ ಮೂಲದ ಸರ್ಜನ್ ಡಾ ಕರಣ್ ರಾಜನ್ ಅವರು ಎಪ್ರಿಲ್ 16ರಂದು ಇನ್ಸ್ಟಾಗ್ರಾಂನಲ್ಲಿ ಹಾಕಿರುವ ವೀಡಿಯೋದಲ್ಲಿ ಸಸ್ಯ ಪ್ರೊಟೀನ್ ಬಗ್ಗೆ ವಿವರಿಸಿದ್ದಾರೆ. “ಎಡಮೇಮ್ ಅಥವಾ ಸಿಲ್ಕ್ ಅವರೆ ಅಧಿಕ ಪ್ರೊಟೀನ್ ಜೊತೆಗೆ ಅಧಿಕ ಫೈಬರ್ ಅಂಶಗಳನ್ನೂ ಹೊಂದಿದೆ. ಒಂದು ಕಪ್ ಸಿಲ್ಕ್ ಅವರೆ 18 ಗ್ರಾಂಗಳಷ್ಟು ಪ್ರೊಟೀನ್ ಮತ್ತು ಎಂಟು ಗ್ರಾಂಗಳಷ್ಟು ಫೈಬರ್ ಹೊಂದಿವೆ. ಆದರೆ 190 ಕ್ಯಾಲರಿಗಳಷ್ಟೇ ಇವೆ. ಸಿಲ್ಕ್ ಅವರೆಯಲ್ಲಿರುವ ಶಕ್ತಿಗಳ ಸಂಖ್ಯೆಯಷ್ಟೇ ಮುಖ್ಯವಲ್ಲ. ಅವುಗಳ ಒಳಗೆ ಯಾವ ವಿಧದ ಫೈಬರ್ಗಳು, ಯಾವ ವಿಧದ ಪ್ರೊಟೀನ್ಗಳು ಮತ್ತು ಬಯೋ ಆ್ಯಕ್ಟಿವ್ ಸಂಯುಕ್ತಗಳು ಇವೆ ಎನ್ನುವುದು ಮುಖ್ಯವಾಗುತ್ತದೆ” ಎಂದು ಹೇಳಿದ್ದಾರೆ.
ಫೈಬರ್
ಡಾ. ರಾಜನ್ ಪ್ರಕಾರ ಸಿಲ್ಕ್ ಅವರೆಯು ವೈವಿಧ್ಯಮಯ ಫೈಬರ್ ಅಥವಾ ಸಸ್ಯನಾರುಗಳನ್ನು ಹೊಂದಿವೆ. ಅದರಲ್ಲಿ ನಿಧಾನವಾಗಿ ಹುದುಗುವ ಫೈಬರ್ಗಳು ಮತ್ತು ನಿರೋಧಕ ಗುಣವಿರುವ ಪಿಷ್ಟ ಸೇರಿವೆ. ಇದು ದೊಡ್ಡ ಕರುಳಿನ ಅಂಚಿನಲ್ಲಿ ಒಡೆಯುತ್ತವೆ. ಈ ಹುದುಗುವಿಕೆಯ ಪ್ರಕ್ರಿಯೆಯಲ್ಲಿ ಅವು ಉರಿಯೂತ ವಿರೋಧಿ ಶಾರ್ಟ್ ಚೈನ್ ಕೊಬ್ಬಿನಾಮ್ಲಗಳನ್ನು ಉತ್ಪಾದಿಸುತ್ತವೆ.
ಸಸ್ಯನಾರುಗಳು ಮತ್ತು ಪಿಷ್ಟಗಳು ದೊಡ್ಡ ಕರುಳಿನ ಕೆಳಗಿನ ಭಾಗಕ್ಕೆ ಹೋಗಿ ಪ್ರೊಪಿಯಿನೇಟ್ ಮತ್ತು ಬ್ಯುಟರೈಟ್, ಶಾರ್ಟ್ ಚೈನ್ ಕೊಬ್ಬಿನಾಮ್ಲಗಳನ್ನು ಉತ್ಪಾದಿಸಲು ಒಡೆದು ಹೋಗುತ್ತವೆ. ಆದರೆ ಬಹುತೇಕ ಫೈಬರ್ಗಳು ಇಷ್ಟು ಆಳಕ್ಕೆ ಸಾಗುವುದಿಲ್ಲ.
ಪ್ರೊಟೀನ್
ಡಾ. ರಾಜನ್ ಹೇಳುವ ಪ್ರಕಾರ ಸಿಲ್ಕ್ ಅವರೆ ಸಂಪೂರ್ಣ ಪ್ರೊಟೀನ್ನ ಮೂಲವಾಗಿದೆ. ಅಂದರೆ ಎಲ್ಲಾ ಒಂಭತ್ತು ಅಗತ್ಯ ಅಮೈನೋ ಆಮ್ಲಗಳನ್ನು ಹೊಂದಿರುತ್ತವೆ. ಸಸ್ಯ ಆಧಾರಿತವಾಗಿದ್ದರೂ ಅತ್ಯುನ್ನತ ಪ್ರೊಟೀನ್ ಒದಗಿಸುತ್ತದೆ. ಇದು ಸ್ನಾಯುಗಳ ನಿರ್ಮಾಣ ಬೆಂಬಲಿಸುವ ಮತ್ತು ಅತ್ಯಧಿಕತೆಯನ್ನು ಉತ್ತೇಜಿಸುವ ಉತ್ತಮ ಗುಣಮಟ್ಟದ ಪ್ರೊಟೀನ್ ಆಗಿರುತ್ತದೆ. ಅವು ಪ್ರಾಣಿ ಪ್ರೊಟೀನ್ಗಳು ಹೊಂದಿರದ ಫೈಬರ್ನೊಂದಿಗೆ ಬರುತ್ತದೆ.,
ಸಿಲ್ಕ್ ಅವರೆ ಸಂಪೂರ್ಣ ಪ್ರೊಟೀನ್ ಆಗಿದ್ದು, ಒಂಭತ್ತು ಅಗತ್ಯ ಅಮೈನೋ ಆಮ್ಲಗಳನ್ನು ಹೊಂದಿದೆ. ಸಸ್ಯ ಪ್ರೊಟೀನ್ ಪೂರ್ಣವಾಗಿರುವುದಿಲ್ಲ ಎನ್ನುವ ಹಳೆಯ ದೃಷ್ಟಿಕೋನದ ಹೊರತಾಗಿಯೂ ನೀವು ಸೇವಿಸುವ ಸಿಲ್ಕ್ ಅವರೆ ಪ್ರೊಟೀನ್ಗಳು ಸ್ನಾಯುಗಳನ್ನು ನಿರ್ಮಿಸಲು ಮತ್ತು ಹಸಿವೆ ಪೂರ್ಣಗೊಳಿಸಲು ನೆರವಾಗುತ್ತದೆ. ಪ್ರಾಣಿ ಜನ್ಯ ಪ್ರೊಟೀನ್ಗಳಲ್ಲಿ ಇಲ್ಲದ ಫೈಬರ್ ಜೊತೆಗೆ ಈ ಪ್ರೊಟೀನ್ಗಳು ಬರುತ್ತವೆ.
ಪಾಲಿ ಫೀನಾಲ್ಗಳು
ಕರಣ್ ರಾಜನ್ ಅವರು ಹೇಳುವ ಪ್ರಕಾರ, ಸಿಲ್ಕ್ ಅವರೆಗಳಲ್ಲಿ ಐಸೋಫ್ಲೇವೋನ್ಗಳು ಎಂದು ಕರೆಯಲಾಗುವ ಸಸ್ಯ ಸಂಯುಕ್ತಗಳಿವೆ. ಈ ಪಾಲಿಫೀನಾಲ್ಗಳು ಪ್ರಯೋಜನಕಾರಿ ಕರುಳಿನ ಬ್ಯಾಕ್ಟೀರಿಯವನ್ನು ಪೋಷಿಸುತ್ತವೆ. ಹೀಗಾಗಿ ಆರೋಗ್ಯಕರ ಮೈಕ್ರೋಬಯಾಮ್ ಅನ್ನು ಪ್ರಾಯೋಜಿಸುತ್ತದೆ. ಹೀಗೆ ಇದು ಬಲವಾದ ಕರುಳಿನ ತಡೆಗೋಡೆಯನ್ನು ಬೆಂಬಲಿಸುತ್ತದೆ ಮತ್ತು ಉರಿಯೂತ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಅಧ್ಯಯನಗಳು ಹೇಳಿರುವ ಪ್ರಕಾರ, ಸಿಲ್ಕ್ ಅವರೆಯಲ್ಲಿರುವ ಐಸೋಫ್ಲೇವೋನ್ಗಳೆಂಬ ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯವನ್ನು ಪೋಷಿಸುವ ಮೂಲಕ ಅಕ್ಕರ್ಮ್ಯಾನ್ಸಿಯದಂತಹ ಉಪಯುಕ್ತ ಬ್ಯಾಕ್ಟೀರಿಯ ಹೆಚ್ಚಾಗಲು ನೆರವಾಗುತ್ತವೆ.
ಕೃಪೆ: hindustantimes.com






