ಧೂಮಪಾನ ತೊರೆದರೆ ದೇಹದಲ್ಲಿ ಈ ಬದಲಾವಣೆ ಕಾಣಬಹುದು!

ಸಾಂದರ್ಭಿಕ ಚಿತ್ರ | Photo Credit : freepik
ಧೂಮಪಾನ ತೊರೆಯುವುದರಿಂದ ಹೃದಯ ಸ್ತಂಭನದ ಅಪಾಯ ಮತ್ತು ಕ್ಯಾನ್ಸರ್ ಅಪಾಯ ಕಡಿಮೆಯಾಗುತ್ತದೆ.
ಜಾಗತಿಕವಾಗಿ ಅನಾದಿ ಕಾಲದಿಂದಲೂ ಧೂಮಪಾನ ಜನರ ಜೀವನಶೈಲಿಯ ಭಾಗವಾಗಿದೆ. ಹಾನಿಕರ ಪರಿಣಾಮಗಳ ಬಗ್ಗೆ ಚೆನ್ನಾಗಿ ತಿಳಿದಿದ್ದರೂ ಧೂಮಪಾನ ಬಿಡುವುದಿಲ್ಲ. ಅನಿಯಂತ್ರಿತ ಮಾರುಕಟ್ಟೆ ಜನರನ್ನು ಹಾಳು ಕುಣಿಕೆಗೆ ಎಳೆಯುತ್ತಿದೆ.
“ಆದರೆ, ಧೂಮಪಾನ ತೊರೆದ ಮರುದಿನದಿಂದಲೇ ಹೃದಯ ಸ್ತಂಭನದ ಅಪಾಯ ಕಡಿಮೆಯಾಗಲು ಆರಂಭಿಸುತ್ತದೆ” ಎನ್ನುತ್ತಾರೆ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿರುವ ಡಾ. ಅಭಿಜಿತ್ ತಾಯಡೆ.
ಧೂಮಪಾನ ತೊರೆಯುವುದು ಏಕೆ ಅವಶ್ಯಕ?
ಅಮೆರಿಕದ ಶ್ವಾಸಕೋಶ ಸಂಘಟನೆಯ ಪ್ರಕಾರ, ಒಂದು ಸಿಗರೇಟು ಸೇದಿದರೆ 7000 ರಾಸಾಯನಿಕಗಳು ಒಳಹೋಗಿರುತ್ತವೆ. ಅವುಗಳಲ್ಲಿ ಶೇ 69ರಷ್ಟು ಕ್ಯಾನ್ಸರ್ಜನಕಗಳಾಗಿವೆ. ಸಿಗರೇಟು ಚಟ ಹೆಚ್ಚಾಗಲು ಅದರಲ್ಲಿರುವ ನಿಕೋಟಿನ್ ಮುಖ್ಯ ಕಾರಣ. ಧೂಮಪಾನದ ಹವ್ಯಾಸವಿರುವವರು ಈ ನಿಕೋಟಿನ್ ಮೇಲೆ ಅವಲಂಬಿತರಾಗಿರುತ್ತಾರೆ. ಜೊತೆಗೆ ಸಾಮಾಜಿಕ ಚಟುವಟಿಕೆಗಳ ಜೊತೆಗೂ ತಳಕು ಹಾಕಿಕೊಂಡಿರುವುದರಿಂದ ಚಟ ಬಿಡುವುದು ಕಷ್ಟವಾಗುತ್ತದೆ.
ಧೂಮಪಾನ ಕುರಿತ ಪೋಸ್ಟ್ನಲ್ಲಿ ಏನಿದೆ?
ಹೊಸದಿಲ್ಲಿ ಮೂಲದ ಆರ್ತೊಪೆಡಿಕ್ ಸರ್ಜನ್ ಡಾ ಅಭಿಜಿತ್ ತಾಯಡೆ ಜನವರಿ 2ರಂದು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿರಡುವ ಪ್ರಕಾರ, ಧೂಮಪಾನ ತೊರೆಯುವುದರಿಂದ ಅತ್ಯಧಿಕ ಲಾಭಗಳನ್ನು ಪಡೆಯಬಹುದು. “ವ್ಯಕ್ತಿಯೊಬ್ಬರು ಧೂಮಪಾನ ತೊರೆದ ತಕ್ಷಣದಿಂದಲೇ ಧನಾತ್ಮಕ ಪರಿಣಾಮಗಳು ಆಗತೊಡಗುತ್ತವೆ” ಎನ್ನುತ್ತಾರೆ ಅಭಿಜಿತ್.
“ನಿಮ್ಮ ಕೊನೆಯ ಸಿಗರೇಟಿನ 20 ನಿಮಿಷಗಳ ನಂತರ ಹೃದಯದ ದರ ಮತ್ತು ರಕ್ತದೊತ್ತಡ ಸಹಜವಾಗಿಬಿಡುತ್ತವೆ. 24 ಗಂಟೆಗಳ ಒಳಗೆ ಹೃದಯಾಘಾತದ ಅಪಾಯ ಕಡಿಮೆಯಾಗಿಬಿಡುತ್ತದೆ” ಎನ್ನುತ್ತಾರೆ ಅಭಿಜಿತ್.
ಚಟ ಬಿಟ್ಟರೆ ಅಮೂಲಾಗ್ರ ಬದಲಾವಣೆ
ಚಟವನ್ನು ಬಿಡುವುದು ಸುಲಭವಲ್ಲ. ಆದರೆ ಚಟ ಬಿಟ್ಟ ಎರಡು ತಿಂಗಳಲ್ಲಿ ದೇಹದಲ್ಲಿ ಅಮೂಲಾಗ್ರ ಬದಲಾವಣೆಯಾಗುತ್ತದೆ. ಶ್ವಾಸಕೋಶದ ಕಾರ್ಯದಲ್ಲಿ ಸುಧಾರಣೆಯಾಗುತ್ತದೆ. ಉಸಿರಾಟ ಮೊದಲಿನಂತಾಗುತ್ತದೆ. ರುಚಿ ಮತ್ತು ಪರಿಮಳದ ಜ್ಞಾನಗಳು ಮರಳುತ್ತವೆ.
ದೀರ್ಘಕಾಲ ಧೂಮಪಾನ ಬಿಡುವುದರಿಂದ ಹೆಚ್ಚು ಮಹತ್ವಪೂರ್ಣ ಬದಲಾವಣೆ ಕಂಡುಬರುತ್ತದೆ. ಒಂದು ವರ್ಷದಲ್ಲಿ ಹೃದಯಾಘಾತದ ಅಪಾಯ ಶೇ 50ರಷ್ಟು ಕಡಿಮೆಯಾಗುತ್ತದೆ. 10 ವರ್ಷಗಳ ಕಾಲ ಧೂಮಪಾನ ತೊರೆದರೆ ಶ್ವಾಸಕೋಶದ ಕ್ಯಾನ್ಸರ್ನ ಅಪಾಯ ಶೇ 50ರಷ್ಟು ಕಡಿಮೆಯಾಗುತ್ತದೆ.
ಈ ಲೇಖನವನ್ನು ಸಾಮಾಜಿಕ ಜಾಲತಾಣಗಳಿಂದ ಪಡೆಯಲಾಗಿದೆ ಮತ್ತು ವೈದ್ಯರ ಸಲಹೆಗೆ ಪರ್ಯಾಯವಲ್ಲ. ವೈದ್ಯಕೀಯ ಸ್ಥಿತಿಯ ಕುರಿತ ಯಾವುದೇ ಪ್ರಶ್ನೆಗೆ ಸದಾ ನಿಮ್ಮ ವೈದ್ಯರ ಸಲಹೆಯನ್ನೇ ಪಡೆಯಿರಿ.
ಕೃಪೆ: hindustantimes.com







