ಊಟ ಮಾಡಿದ ತಕ್ಷಣ ನಿದ್ರೆಗೆ ಜಾರಿದರೆ ಕರುಳಿನ ರೋಗ ಬರಬಹುದು!

ಸಾಂದರ್ಭಿಕ ಚಿತ್ರ | Photo Credit : Freepik
ರಾತ್ರಿ ಭೋಜನದ ತಕ್ಷಣ ನಿದ್ರೆಗೆ ಜಾರಿದರೆ ಆಮ್ಲವು ಆಹಾರ ನಾಳಕ್ಕೆ ಹಿಮ್ಮುಖವಾಗಿ ಹರಿಯಬಹುದು. ಇದು ಎದೆಯುರಿ, ನಿಷ್ಕಾಸ ಮತ್ತು ಎದೆಯ ಅಸ್ವಸ್ಥತೆಗೆ ಕಾರಣವಾಗಲಿದೆ.
ಜಠರ ಶಸ್ತ್ರಚಿಕಿತ್ಸಕರು ಆಗಾಗ್ಗೆ ಆಮ್ಲೀಯತೆ, ಹೊಟ್ಟೆ ಉಬ್ಬರಿಸುವಿಕೆ, ಎದೆಯಲ್ಲಿ ಅಹಿತಕರ ಭಾವನೆ, ನಿದ್ರೆಯ ಸಮಸ್ಯೆ ಅಥವಾ ನಿರಂತರವಾಗಿ ಒಂದು ರೀತಿ ಹೊಟ್ಟೆ ಭಾರವಾದ ಅನುಭವವಿರುವ ರೋಗಿಗಳನ್ನು ಭೇಟಿಯಾಗುತ್ತಾರೆ. ಬಹಳಷ್ಟು ಮಂದಿಯ ಪ್ರಕಾರ ಇಂತಹ ಚಿಹ್ನೆಗಳಿಗೆ ಖಾರದ ಆಹಾರ ತಿನ್ನುವುದು ಅಥವಾ ಒತ್ತಡ ಕಾರಣವಾಗಿರುತ್ತದೆ. ಆದರೆ ವಾಸ್ತವದಲ್ಲಿ ಬಹುತೇಕ ಭಾರತೀಯರು ಮಾಡುವ ದೊಡ್ಡ ತಪ್ಪೆಂದರೆ ಊಟ ಮಾಡಿದ ತಕ್ಷಣ ನಿದ್ರೆಗೆ ಜಾರುವುದು. ದೇಹಕ್ಕೆ ಜೀರ್ಣವಾಗಲು ಅವಕಾಶ ಕೊಡದೆಯೇ ನಿದ್ರೆಗೆ ಜಾರುತ್ತಾರೆ!
ಬಹುತೇಕ ಭಾರತೀಯ ಮನೆಗಳಲ್ಲಿ ಊಟ ತಡವಾಗಿ ಮಾಡಲಾಗುತ್ತದೆ ಮತ್ತು ಬಹಳ ಹೆಚ್ಚು ತಿನ್ನುತ್ತಾರೆ. ಅದಾದ ಕೂಡಲೇ ಮೊಬೈಲ್/ಟಿವಿ ನೋಡುತ್ತಾರೆ ಅಥವಾ ನಿದ್ರೆ ಮಾಡುತ್ತಾರೆ. ಆದರೆ ಇದರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೆ ಬಹುದೊಡ್ಡ ಹೊಡೆತ ಬೀಳುತ್ತದೆ.
ಊಟದ ನಂತರದ ಭಂಗಿ ಏಕೆ ಮುಖ್ಯವಾಗುತ್ತದೆ?
ಜೀರ್ಣಕ್ರಿಯೆ ಎಂದರೆ ಕಿಣ್ವಗಳು ಮಾತ್ರವಲ್ಲ, ಅದು ಗುರುತ್ವಾಕರ್ಷಣೆಯನ್ನೂ ಅವಲಂಬಿಸಿರುತ್ತದೆ. ಊಟದ ನಂತರ ನೇರವಾಗಿ ನಿಂತರೆ ಗುರುತ್ವಾಕರ್ಷಣೆಯು ಹೊಟ್ಟೆಯ ಆಮ್ಲವನ್ನು ಅದರ ಸ್ಥಳದಲ್ಲಿರಿಸಲು ನೆರವಾಗುತ್ತದೆ. ಆದರೆ ತಕ್ಷಣ ನಿದ್ರೆಗೆ ಜಾರಿದರೆ ಆಮ್ಲವು ಆಹಾರ ನಾಳಕ್ಕೆ ಹಿಮ್ಮುಖವಾಗಿ ಹರಿಯಬಹುದು. ಇದು ಎದೆಯುರಿ, ನಿಷ್ಕಾಸ ಮತ್ತು ಎದೆಯ ಅಸ್ವಸ್ಥತೆಗೆ ಕಾರಣವಾಗಲಿದೆ.
ಹೀಗೆ ದೀರ್ಘಕಾಲ ಆಮ್ಲಕ್ಕೆ ಒಡ್ಡಿಕೊಳ್ಳುವುದರಿಂದ ಆಹಾರನಾಳದ ಒಳಪದರಕ್ಕೆ ಹಾನಿಯಾಗುತ್ತದೆ. ಮಾತ್ರವಲ್ಲದೆ, ಗ್ಯಾಸ್ಟ್ರೊಎಸೋಫೇಜಿಯಲ್ ರಿಫ್ಲಕ್ಸ್ (ಹಿಮ್ಮುಖ ಹರಿವಿನ) ರೋಗಕ್ಕೆ (ಜಿಇಆರ್ಡಿ) ಕಾರಣವಾಗುತ್ತದೆ. ನಿರಂತರ ಹಿಮ್ಮುಖ ಹರಿವು ಅನನುಕೂಲ ತರುವುದಲ್ಲದೆ ನಿದ್ರೆಯ ಸಮಸ್ಯೆ ಒಡ್ಡಬಹುದು, ಮಾರಕ ಕೆಮ್ಮಿಗೆ ಕಾರಣವಾಗಬಹುದು ಮತ್ತು ಗಂಟಲು ಕಿರಿಕಿರಿ ಅಥವಾ ಆಸ್ತಮಾದಂತಹ ರೋಗ ಚಿಹ್ನೆಗಳಿಗೂ ಕಾರಣವಾಗಬಹುದು. ಗಂಭೀರ ಪ್ರಕರಣಗಳಲ್ಲಿ ಶಸ್ತ್ರಚಿಕಿತ್ಸೆಯ ಅಗತ್ಯವಿರುವಂತೆ ಆಹಾರನಾಳಕ್ಕೆ ದೀರ್ಘಕಾಲೀನ ಹಾನಿಯನ್ನು ಉಂಟುಮಾಡಬಹುದು.
ತಡವಾಗಿ ಊಟ ಮಾಡುವುದರಿಂದ ಜೀರ್ಣಕ್ರಿಯೆ ಸಮಸ್ಯೆ
ಜೀರ್ಣಾಂಗದ ಆರೋಗ್ಯವನ್ನು ಹಾಳು ಮಾಡುವ ಮತ್ತೊಂದು ಅಭ್ಯಾಸವೆಂದರೆ ತಡವಾಗಿ ಊಟ ಮಾಡುವುದು. ಬಹಳಷ್ಟು ಮಂದಿ ರಾತ್ರಿ 9ರಿಂದ 10ರ ನಡುವೆ ಊಟ ಮಾಡುತ್ತಾರೆ. ಒಂದು ಗಂಟೆಯೊಳಗೆ ಮಲಗುತ್ತಾರೆ. ಹೀಗಾಗಿ ಹೊಟ್ಟೆಗೆ ಖಾಲಿ ಮಾಡಿಕೊಳ್ಳಲು ಸಾಕಷ್ಟು ಸಮಯ ಸಿಗುವುದಿಲ್ಲ. ಇದರಿಂದಾಗಿ ಜಠರದ ಮೇಲೆ ಒತ್ತಡ ಬೀಳುತ್ತದೆ ಮತ್ತು ಆಮ್ಲದ ಉತ್ಪಾದನೆ ಹೆಚ್ಚಾಗುತ್ತದೆ. ಫಲಿತಾಂಶವಾಗಿ ಹೊಟ್ಟೆ ಉಬ್ಬರಿಸುವಿಕೆ, ಆಮ್ಲೀಯತೆ ಮತ್ತು ಸರಿಯಾಗಿ ನಿದ್ರೆ ಬಾರದೆ ಇರುವ ಸಮಸ್ಯೆ ಕಂಡು ಬರುತ್ತದೆ.
ನಿದ್ರೆಯ ಸಮಸ್ಯೆಯಿಂದ ಕಾರ್ಟಿಸೋಲ್ನಂತಹ ಒತ್ತಡದ ಹಾರ್ಮೋನ್ಗಳ ಸ್ರವಿಸುವಿಕೆ ಹೆಚ್ಚಾಗುತ್ತದೆ. ಅದು ಕರುಳಿನ ಚಲನಶೀಲತೆಯನ್ನು ನಿಧಾನಗೊಳಿಸುತ್ತದೆ. ಇದರಿಂದಾಗಿ ನಿದ್ರೆಗೆ ತೊಂದರೆಯಾಗುತ್ತದೆ ಮತ್ತು ನಿದ್ರಾರಾಹಿತ್ಯದಿಂದ ಜೀರ್ಣಕ್ರಿಯೆ ದುರ್ಬಲಗೊಳ್ಳುತ್ತದೆ.
ಏರುತ್ತಿರುವ ಗ್ಯಾಸ್ಟ್ರೋ ರಿಫ್ಲಕ್ಸ್ ಸರ್ಜರಿಗಳು
ಕಳೆದ ಕೆಲವು ವರ್ಷಗಳಲ್ಲಿ ಭಾರತಾದ್ಯಂತ ಜಠರ ತಜ್ಞರು ಗಮನಿಸಿರುವ ಪ್ರಕಾರ ಗಂಭೀರ ರಿಫ್ಲಕ್ಸ್ ರೋಗ, ಹಯಟಲ್ ಹರ್ನಿಯ ರೋಗ (ನಿಮ್ಮ ಹೊಟ್ಟೆಯ ಮೇಲ್ಭಾಗವು ಡಯಾಫ್ರಮ್ನ ತೆರೆಯುವಿಕೆಯ ಮೂಲಕ ನಿಮ್ಮ ಎದೆಯೊಳಗೆ ಉಬ್ಬಿದಾಗ ಆಗಾಗ್ಗೆ ಎದೆಯುರಿ, ಹಿಮ್ಮುಖ ಹರಿವಿನಿಂದ ನುಂಗಲು ತೊಂದರೆ ಉಂಟಾಗುವುದು) ಮತ್ತು ಇತರ ಆಮ್ಲ ಸಂಬಂಧಿತ ಸಮಸ್ಯೆಗಳು ಕಂಡುಬರುತ್ತವೆ.
ತಡರಾತ್ರಿ ತಿನ್ನುವುದು, ದೈಹಿಕ ಚಟುವಟಿಕೆಯ ಕೊರತೆ, ಆಲ್ಕೋಹಾಲ್ ಸೇವನೆ, ಧೂಮಪಾನ ಮತ್ತು ಇತರ ಬೊಜ್ಜು ಸಂಬಂಧಿತ ಜೀವನಶೈಲಿ ಅಂಶಗಳು ಇಂತಹ ಸಮಸ್ಯೆಗಳಿಗೆ ಮುಖ್ಯ ಕಾರಣವಾಗಿವೆ. ಅಪರೂಪಕ್ಕೆ ಒಮ್ಮೆ ಬರುವ ಅಸಿಡಿಟಿಯು ಬದಲಾಗಿ ನಿತ್ಯವೂ ಕಂಡುಬರುತ್ತದೆ. ದೀರ್ಘಕಾಲ ಔಷಧಿ ಬಳಸುವುದರಿಂದ ಸಮಸ್ಯೆ ಮುಂದಿನ ಹಂತಕ್ಕೆ ತಲುಪಿದರೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಾಗಿ ಬರಬಹುದು. ಇವುಗಳಲ್ಲಿ ಬಹುತೇಕವನ್ನು ಸರಳ ಜೀವನಶೈಲಿ ಬದಲಾವಣೆಗಳಿಂದ ತಪ್ಪಿಸಬಹುದು.
ನಿಮ್ಮ ಕರುಳನ್ನು ರಕ್ಷಿಸುವ ಸರಳ ಹವ್ಯಾಸಗಳು
- ಮಲಗುವ 2-3 ಗಂಟೆಗಳ ಮೊದಲೇ ರಾತ್ರಿ ಭೋಜನ ಮುಗಿಸಬೇಕು
- ಊಟದ ನಂತರ ನಿಲ್ಲಬೇಕು. ರಾತ್ರಿ ಭೋಜನದ ನಂತರ ಸಣ್ಣಗೆ ನಡೆದರೆ ಉತ್ತಮ
- ರಾತ್ರಿ ಅತಿ ಎಣ್ಣೆಮಯ, ಮಸಾಲೆಮಯ ಭೋಜನ ಬೇಡ
- ಕಾಫಿ, ಧೂಮಪಾನ ಮಿತಿಗೊಳಿಸಿ.
ಎಚ್ಚರಿಕೆಯ ಚಿಹ್ನೆಗಳನ್ನು ಅಲಕ್ಷಿಸಬೇಡಿ
ಆಗಾಗ್ಗೆ ಎದೆಯುರಿ, ಬಾಯಲ್ಲಿ ಹುಳಿಯ ಅನುಭವ, ಮಾರಕ ಕೆಮ್ಮು, ಹೊಟ್ಟೆ ಉಬ್ಬರಿಸುವುದು, ಎದೆಯಲ್ಲಿ ಅಹಿತಕರ ಭಾವನೆ ಅಥವಾ ನುಂಗಲು ಕಷ್ಟವಾಗುವುದು ಮೊದಲಾದ ಚಿಹ್ನೆಗಳನ್ನು ‘ಸಹಜ ಅಸಿಡಿಟಿ’ ಎಂದು ತಳ್ಳಿಹಾಕಬಾರದು. ದೀರ್ಘಕಾಲ ಸ್ವಯಂ ಔಷಧಿ ಸೇವಿಸಿದರೆ ರೋಗಪರಿಶೀಲನೆಯನ್ನು ತಡ ಮಾಡಬಹುದು ಮತ್ತು ಸಮಸ್ಯೆಗಳ ಅಪಾಯ ಹೆಚ್ಚಾಗಬಹುದು.
ಕೃಪೆ: ಡಾ ಅಜಯ್ ಮಂಡಲ್ - indiatoday.in







