ಟೈಪ್ 2 ಮಧುಮೇಹ ಇದ್ದವರು ಧೂಮಪಾನಿಗಳಾಗಿದ್ದರೆ ಮರಣದ ಅಪಾಯ ಹೆಚ್ಚು!

ಸಾಂದರ್ಭಿಕ ಚಿತ್ರ | Photo Credit : freepik
ಅಧ್ಯಯನದ ಪ್ರಕಾರ ತಂಬಾಕನ್ನು ಸಂಪೂರ್ಣವಾಗಿ ತ್ಯಜಿಸುವುದು ಟೈಪ್ 2 ಮಧುಮೇಹ ನಿರ್ವಹಣೆಯಲ್ಲಿ ಪ್ರಾಥಮಿಕ ಗುರಿಯಾಗಬೇಕು.
ಟೈಪ್ 2 ಮಧುಮೇಹ (T2D) ಇರುವವವರಲ್ಲಿ ಧೂಮಪಾನವು ಹೃದಯ ಸಂಬಂಧಿ ರೋಗ ಮತ್ತು ಅಕಾಲಿಕ ಮರಣಕ್ಕೆ ಪ್ರಮುಖ ಕಾರಣವಾಗಲಿದೆ ಎಂದು ಇತ್ತೀಚೆಗಿನ ಅಧ್ಯಯನವೊಂದು ತಿಳಿಸಿದೆ. 2026ರಲ್ಲಿ ಜರ್ನಲ್ ಆಫ್ ಡಯಬಿಟೀಸ್ ನಲ್ಲಿ ಪ್ರಕಟವಾದ ಈ ಅಧ್ಯಯನವು ತಂಬಾಕನ್ನು ಸಂಪೂರ್ಣವಾಗಿ ತ್ಯಜಿಸುವುದು ಟೈಪ್ 2 ಮಧುಮೇಹ ನಿರ್ವಹಣೆಯಲ್ಲಿ ಪ್ರಾಥಮಿಕ ಗುರಿಯಾಗಬೇಕು ಎಂದು ಹೇಳಿದೆ. ಅಧ್ಯಯನದ ಪ್ರಕಾರ ಧೂಮಪಾನಿಗಳಿಗೆ ಟೈಪ್ 2 ಮಧುಮೇಹ ಬರುವ ಸಾಧ್ಯತೆ ಶೇ 37ರಷ್ಟು ಹೆಚ್ಚಾಗಿದೆ. ಧೂಮಪಾನಿಗಳಿಗೆ ಹೋಲಿಸಿದರೆ ಧೂಮಪಾನ ತೊರೆದವರಿಗೆ ಟೈಪ್ 2 ಮಧುಮೇಹ ಅಪಾಯ ಕಡಿಮೆ ಇರುವುದು ಕಂಡು ಬಂದಿದೆ.
ಅಧ್ಯಯನದ ಸಹ ಸಂಶೋಧಕರಾಗಿರುವ ಪ್ರೊಫೆಸರ್ ಅನೂಪ್ ಮಿಶ್ರಾ ಹೇಳಿರುವ ಪ್ರಕಾರ, “ಭಾರತದಲ್ಲಿ ಟೈಪ್ 2 ಮಧುಮೇಹಕ್ಕೆ ಸಂಬಂಧಿಸಿದ ನಿರ್ವಹಣೆಯ ಅಂಶಗಳನ್ನು ಚರ್ಚಿಸುವಾಗ ಧೂಮಪಾನ ತ್ಯಜಿಸುವ ಸಲಹೆಗಳನ್ನು ನೀಡಲಾಗುವುದಿಲ್ಲ ಅಥವಾ ಬಲವಾಗಿ ಒತ್ತಿ ಹೇಳುವುದಿಲ್ಲ. ಆದರೆ ಧೂಮಪಾನ ಟೈಪ್ 2 ಮಧುಮೇಹಿಗಳಲ್ಲಿ ಹೃದಯಾಘಾತ ಮತ್ತು ಕೆಳ ಅಂಗಚ್ಛೇದ ಅಪಾಯವನ್ನು ಹೆಚ್ಚಿಸುತ್ತದೆ ಎನ್ನುವುದನ್ನು ಸ್ಪಷ್ಟವಾಗಿ ತಿಳಿ ಹೇಳಬೇಕು.”
2022ರಲ್ಲಿ ಅಂದಾಜು 828 ದಶಲಕ್ಷ ವಯಸ್ಕರು ಮಧುಮೇಹದಿಂದ ಬಳಲುತ್ತಿದ್ದಾರೆ. 1990ರ ಅವಧಿಗೆ ಹೋಲಿಸಿದರೆ ಸುಮಾರು 630 ದಶಲಕ್ಷದಷ್ಟು ಏರಿಕೆಯಾಗಿದೆ. 2023ರ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ-ಭಾರತ ಮಧುಮೇಹ ಅಧ್ಯಯನದ ಪ್ರಕಾರ, 2021ರಲ್ಲಿ ಭಾರತದಲ್ಲಿ ಅಂದಾಜು 101 ದಶಲಕ್ಷ ಜನರು ಮಧುಮೇಹದಿಂದ ಬಳಲುತ್ತಿದ್ದರು. 136 ದಶಲಕ್ಷ ಮಧುಮೇಹ ಪೂರ್ವ ಮತ್ತು 3ಎ15 ದಶಲಕ್ಷ ಜನರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು.
ಟೈಪ್ 2 ಮಧುಮೇಹದ ತ್ವರಿತ ಏರಿಕೆ ಮತ್ತೊಂದು ದೀರ್ಘಕಾಲದ ಸಾಂಕ್ರಾಮಿಕ ರೋಗವಾದ ದಹನಕಾರಿ ತಂಬಾಕು ಬಳಕೆಯ ಜೊತೆಗೂಡಿ ಕಳವಳಕಾರಿ ಸ್ಥಿತಿ ತಂದಿಟ್ಟಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ವಿಶ್ವಾದ್ಯಂತ ಸುಮಾರು 1.3 ಶತಕೋಟಿ ಮಂದಿ ತಂಬಾಕು ಬಳಸುತ್ತಾರೆ ಮತ್ತು ತಂಬಾಕಿನಿಂದಾಗಿ ಪ್ರತಿ ವರ್ಷ 7 ದಶಲಕ್ಷಕ್ಕೂ ಹೆಚ್ಚು ಸಾವುಗಳು ಸಂಭವಿಸುತ್ತವೆ. ಧೂಮಪಾನಿಗಳಲ್ಲಿ ಹೆಚ್ಚಿನವರು ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ನೆಲೆಸಿದ್ದಾರೆ.
ಮೂಲತಃ ಆಟೋ ಇಮ್ಯೂನ್ (ಸ್ವಯಂ ನಿರೋಧಕ) ಆಗಿರುವ ಟೈಪ್ 1 ಮಧುಮೇಹದಂತಲ್ಲದೆ ಟೈಪ್ 2 ಮಧುಮೇಹವು ಧೂಮಪಾನದೊಂದಿಗೆ ಕಳವಳಕಾರಿ ಕೊಂಡಿಯನ್ನು ಹೊಂದಿದೆ. “ಟೈಪ್ 2 ಮಧುಮೇಹ ಧೂಮಪಾನ ಬಾಹ್ಯ ಜೀವನಶೈಲಿಯ ಅಂಶವಲ್ಲ. ವೈದ್ಯಕೀಯವಾಗಿ ರೋಗವರ್ಧಕವಾಗಿರುತ್ತದೆ. ಧೂಮಪಾನವು ಟೈಪ್ 2 ಮಧುಮೇಹ ಬರುವ ಅಪಾಯವನ್ನು ಹೆಚ್ಚಿಸುವುದಲ್ಲದೆ, ಟೈಪ್ 2 ಮಧುಮೇಹದ ರೋಗ ನಿರ್ಧಾರವಾದ ಮೇಲೆ ಆತಂಕ ಇನ್ನಷ್ಟು ಬಲವಾಗುತ್ತದೆ. ಮಧುಮೇಹ ಇರುವ ರೋಗಿಗಳಲ್ಲಿ ಧೂಮಪಾನ ಹೃದಯರಕ್ತನಾಳದ ಸಮಸ್ಯೆಗಳ ಅಪಾಯ ಇನ್ನಷ್ಟು ಹೆಚ್ಚಿರುತ್ತದೆ. ಜೊತೆಗೆ ಬಾಹ್ಯ ಅಪಧಮನಿಯ ರೋಗ ಮತ್ತು ಮರಣದ ಹೆಚ್ಚಿನ ಅಪಾಯವಿರುತ್ತದೆ” ಎಂದು ಅಧ್ಯಯನ ಹೇಳಿದೆ.
ತಂಬಾಕು ಮತ್ತು ಟೈಪ್ 2 ಮಧುಮೇಹದ ನಡುವಿನ ಸಂಬಂಧವು ಒಂದು ರೀತಿಯಲ್ಲಿ ತಡೆಗಟ್ಟಬಹುದಾದ ಮತ್ತು ಮಾರ್ಪಡಿಸಬಹುದಾದ ಹೊರೆಯನ್ನು ಪ್ರತಿನಿಧಿಸುತ್ತದೆ ಎಂದು ಅಧ್ಯಯನದ ಲೇಖಕರು ಹೇಳಿದ್ದಾರೆ. ಅಧ್ಯಯನಕಾರರಲ್ಲಿ ಯುನೈಟೆಡ್ ಕಿಂಗ್ಡಂ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ನಫೀಲ್ಡ್ ಪಾಪ್ಯುಲೇಶನ್ ಹೆಲ್ತ್ ವಿಭಾಗದ ತಜ್ಞರು ಮತ್ತು ಇಟಲಿಯ ಕ್ಯಾಟನಿಯ ವಿಶ್ವವಿದ್ಯಾಲಯದ ಕ್ಲಿನಿಕಲ್ ಮತ್ತು ಎಕ್ಸಪೆರಿಮೆಂಟಲ್ ಮೆಡಿಸಿನ್ ವಿಭಾಗದ ತಜ್ಞರು ಇದ್ದಾರೆ.






