30 ದಿನ ಸಕ್ಕರೆ ತೊರೆದರೆ ಏನಾಗುತ್ತದೆ?

ಸಾಂದರ್ಭಿಕ ಚಿತ್ರ | Photo Credit : freepik
ದೈನಂದಿನ ಜೀವನದಿಂದ ಸಕ್ಕರೆಯನ್ನು ತೊರೆಯುವುದು ಸುಲಭದ ಕೆಲಸವಲ್ಲ. ಸಿಹಿ ತಿನಿಸುಗಳನ್ನು ತಿನ್ನುವ ಆಸೆ ಮೂಡುತ್ತಲೇ ಇರುತ್ತದೆ. ಆದರೆ ಸಕ್ಕರೆ ತೊರೆದರೆ ಸಿಗುವ ಬದಲಾವಣೆ ಏನು?
ಸಕ್ಕರೆ ದೈನಂದಿನ ಬದುಕಿನಲ್ಲಿ ಅತ್ಯಗತ್ಯ ವಸ್ತು. ಬೆಳಗಿನ ಚಹಾ, ಮಧ್ಯಾಹ್ನದ ತಿನಿಸು, ರಾತ್ರಿ ಭೋಜನದ ಡೆಸರ್ಟ್ಗಳು ಮತ್ತು ಆರೋಗ್ಯಕರ ಎಂದು ತಿಳಿಯಲಾಗಿರುವ ಆಹಾರಗಳಲ್ಲೂ ಸಕ್ಕರೆ ಬಳಸುತ್ತೇವೆ. ಬಹುಶಃ ನಾವೆಲ್ಲರೂ ಎಷ್ಟು ಸಕ್ಕರೆ ಬಳಸುತ್ತೇವೆ ಎನ್ನುವ ಬಗ್ಗೆ ಗಮನಿಸುವುದೇ ಇಲ್ಲ. ಒಂದು ತಿಂಗಳ ಮಟ್ಟಿಗೆ ಸಕ್ಕರೆಯನ್ನು ಸಂಪೂರ್ಣವಾಗಿ ತೊರೆದರೆ ಏನಾಗುತ್ತದೆ? : India Today ಗೆ ಲೇಖಕಿ ಸ್ಮಾರಿಕಾ ಪಂತ್ ತಮ್ಮ ಸಕ್ಕರೆ ತೊರೆದಿರುವ ಅನುಭವ ಬರೆದಿದ್ದಾರೆ.
ವೈದ್ಯರು ಆಗಾಗ್ಗೆ ಅತಿ ಸಕ್ಕರೆ ಸೇವಿಸಬಾರದು, ಮಧುಮೇಹ, ಹೃದಯಾಘಾತ, ಉರಿಯೂತ ಮತ್ತು ಹಾರ್ಮೋನಲ್ ಅಸಮತೋಲನದ ಅಪಾಯವಿದೆ ಎಂದು ಹೇಳುತ್ತಾರೆ. ಆದರೆ ತಮ್ಮ ಆಹಾರದಿಂದ 30 ದಿನಗಳ ಕಾಲ ಸಕ್ಕರೆ ಹೊರಗಿಟ್ಟ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ.
ಮೊದಲ ವಾರ ಬಹಳ ಕಷ್ಟ
ಮೊದಲ ಕೆಲವು ದಿನಗಳು ಸಕ್ಕರೆ ತೊರೆದಾಗ ಬಹಳ ಕಷ್ಟವಾಗುತ್ತದೆ. ತಲೆನೋವು, ಶಕ್ತಿಗುಂದಿದ ಅನುಭವವಾಗಬಹುದು. ಸಿಹಿ ತಿನ್ನಲೇಬೇಕು ಎನ್ನುವ ಆಸೆ ಬಂದುಬಿಡುತ್ತದೆ. ಸಂಜೆಯ ಹೊತ್ತಿಗೆ ಕಿರಿಕಿರಿ ಅನಿಸಲು ಆರಂಭಿಸುತ್ತದೆ. ದೇಹ ಮತ್ತು ಮೆದುಳು ಸಕ್ಕರೆಯ ಮೇಲೆ ಅಷ್ಟೊಂದು ಅವಲಂಬಿಸಿರುತ್ತದೆ. ನಾಲ್ಕೈದು ದಿನಗಳು ಕಳೆದ ಮೇಲೆ ಸಕ್ಕರೆ ಮೇಲಿನ ವ್ಯಾಮೋಹ ಕಡಿಮೆಯಾಗುತ್ತದೆ. ನೀರು ಕುಡಿಯುವುದು, ಹಣ್ಣುಗಳನ್ನು ತಿನ್ನುವುದರಿಂದ ಆಹಾರದಲ್ಲಿ ಅಗತ್ಯವಾದ ಪ್ರೊಟೀನ್ಗಳನ್ನು ಬೆರೆಸಬಹುದು.
ಎರಡನೇ ವಾರ ಸ್ಥಿರವಾದ ಅನುಭವ
ಒಂದು ವಾರದ ನಂತರ ಶಕ್ತಿ ಸ್ಥಿರವಾಗಲು ಆರಂಭಿಸಿತ್ತು. ಇಡೀದಿನದ ಶಕ್ತಿಯಲ್ಲಿ ದೊಡ್ಡ ಬದಲಾವಣೆಯಾದಂತೆ ತೋರಿತ್ತು. ಮಧ್ಯಾಹ್ನದ ನಂತರ ಚಹಾ ಅಥವಾ ಬಿಸ್ಕತ್ತು ತಿನ್ನುವ ಆಸೆಯೂ ಬಿಟ್ಟು ಹೋಯಿತು. ಬೆಳಗಿನ ಸಮಯದಲ್ಲಿ ಹೆಚ್ಚು ಜಾಗೃತನಾಗಿದ್ದ ಅನುಭವವಾಯಿತು. ಕೆಫೈನ್ ಮೇಲೆ ಅತಿಯಾದ ಅವಲಂಬನೆ ಇರಲಿಲ್ಲ. ಶಕ್ತಿ ಸಾಕಷ್ಟು ಇದೆ ಎಂದು ಅನಿಸಿರಲಿಲ್ಲ, ಆದರೆ ಸ್ಥಿರವಾದ ಅನುಭವವಾಯಿತು.
ಮೂರನೇ ವಾರ ಸಿಹಿಯ ಆಸೆ ಇರಲಿಲ್ಲ
ಎರಡು-ಮೂರನೇ ವಾರದಲ್ಲಿ ಸಿಹಿ ತಿನ್ನಬೇಕು ಎನ್ನುವ ಆಸೆ ಕಡಿಮೆಯಾಗುತ್ತ ಹೋಯಿತು. ದೀರ್ಘ ಸಮಯದವರೆಗೆ ಹೊಟ್ಟೆ ತುಂಬಿದ ಅನುಭವವಾಯಿತು. ಸ್ನ್ಯಾಕ್ಗಳನ್ನು ತಿನ್ನಬೇಕು ಎಂದು ಅನಿಸಲಿಲ್ಲ. ಅಚ್ಚರಿ ಎನ್ನುವಂತೆ ಹಣ್ಣುಗಳು ಹಿಂದಿಗಿಂತ ಹೆಚ್ಚು ಸಿಹಿಯಾಗಿದ್ದವು. ನನಗೂ ಹೊಟ್ಟೆಯ ಮೇಲೆ ನಿಯಂತ್ರಣ ಮಾಡುವುದು ಹೇಗೆಂದು ಅರಿವಾಯಿತು. ನಿಜವಾಗಿ ಹಸಿವೆ ಇದ್ದಾಗ ಮಾತ್ರ ಆಹಾರ ತಿಂದೆ.
ಉಬ್ಬಿದ ಭಾಗಗಳು ಹಗುರಾದವು
ಕೆಲವೇ ವಾರಗಳಲ್ಲಿ ನನ್ನ ಸೊಂಟದ ಸುತ್ತಲಿನ ಉಬ್ಬಿದ ಭಾಗಗಳು ಇಳಿಯಲಾರಂಭಿಸಿದವು. ಹೊಟ್ಟೆ ಹೆಚ್ಚು ಹಗುರವಾಯಿತು. ಮುಖ್ಯವಾಗಿ ಬೆಳಗಿನ ಜಾವದಲ್ಲಿ ಹಗುರವಾದ ಅನುಭವವಾಯಿತು. ಅತಿಯಾಗಿ ತೂಕ ಇಳಿಯಲಿಲ್ಲ. ಆದರೆ ಸ್ವಲ್ಪ ತೂಕ ಇಳಿಸಿದೆ. ತೂಕ ಇಳಿಸಿರುವುದಕ್ಕಿಂತ ಹೆಚ್ಚಾಗಿ ಉಬ್ಬರಿಸಿದ ಅನುಭವ ಕಡಿಮೆಯಾಯಿತು. ಸಂಸ್ಕರಿತ ಆಹಾರ ತಿನ್ನುವ ಆಸೆ ಕಡಿಮೆಯಾಯಿತು.
ಆಮ್ಲೀಯತೆ ಕಡಿಮೆಯಾಯಿತು
ತಿಂಗಳ ಅಂತ್ಯದಲ್ಲಿ ಜೀರ್ಣಾಂಗವ್ಯೂಹಗಳು ಹೆಚ್ಚು ಶಾಂತವಾದ ಅನುಭವವಾಯಿತು. ಅಮ್ಲೀಯತೆಯ ಸಮಸ್ಯೆ ಕಡಿಮೆಯಾಯಿತು. ಆಹಾರ ಸೇವಿಸಿದ ನಂತರದ ಅಹಿತಕರ ಭಾವನೆ ಇಲ್ಲವಾಯಿತು. ಚರ್ಮ ಸ್ವಚ್ಛವಾದಂತೆ ಅನಿಸಿತು. ಭಾವನಾತ್ಮಕವಾಗಿ ಹೆಚ್ಚು ಸಮತೋಲನದ ಅನುಭವವಾಯಿತು. ಸಕ್ಕರೆ ಅಧಿಕವಾಗಿರದ ಕಾರಣ ನನ್ನ ಮನೋಸ್ಥಿತಿ ಸ್ಥಿರವಾಯಿತು. ಕಿರಿಕಿರಿ ಕಡಿಮೆಯಾಯಿತು.
ತಿಂಗಳ ಕಾಲ ಸಕ್ಕರೆ ತಿನ್ನದೆ ಇರುವುದು ಸುಲಭವಲ್ಲ. ಆರಂಭದಲ್ಲಿ ತುಂಬಾ ಕಷ್ಟವಾಗುತ್ತದೆ. ಆದರೆ ಲಾಭಗಳು ನೈಜವಾಗಿವೆ. ಹೆಚ್ಚು ಶಕ್ತಿ ಬಂದ ಹಾಗೆ ಅನಿಸಿದೆ. ಕಡಿಮೆ ಹೊಟ್ಟೆ ಉಬ್ಬರಿಸಿದೆ. ತಿನ್ನುವ ಅಭ್ಯಾಸದಲ್ಲಿ ನಿಯಂತ್ರಣ ಬಂದಿದೆ. ಜಾದೂ ರೀತಿಯ ಬದಲಾವಣೆ ಆಗದೆ ಇದ್ದರೂ ಶಕ್ತಿಯುತವಾದ ಬದಲಾವಣೆ ಕಂಡೆ. ದೀರ್ಘಕಾಲ ಸಕ್ಕರೆ ತೊರೆಯುವ ನಿರ್ಧಾರ ಮಾಡಿರದೆ ಇದ್ದರೂ ಈಗ ಅನಗತ್ಯ ಸಕ್ಕರೆ ಸೇವನೆ ತೊರೆದಿದ್ದೇನೆ.
ಕೃಪೆ: India Today







