ತೂಕ ಇಳಿಸಲು ನಡಿಗೆ | ಹತ್ತುಸಾವಿರ ಹೆಜ್ಜೆ ಹಾಕದೆ ಇದ್ದರೂ ನಡೆಯುತ್ತದೆ!

ಸಾಂದರ್ಭಿಕ ಚಿತ್ರ | Photo Credit : freepik
ಒಂದು ಗಂಟೆ ನಡೆದಲ್ಲಿ ನಿಮ್ಮ ತೂಕ ಮತ್ತು ವೇಗವನ್ನು ಅನುಸರಿಸಿ 214ರಿಂದ 504ರಷ್ಟು ಕ್ಯಾಲರಿ ಕರಗಿಸಬಹುದು.
ಇತ್ತೀಚೆಗೆ ಹತ್ತುಸಾವಿರ ಹೆಜ್ಜೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ. ಕಳೆದ ಕೆಲವು ವರ್ಷಗಳಿಂದ 10k ಸ್ಟೆಪ್ಸ್ (10ಸಾವಿರ ಹೆಜ್ಜೆ) ಬಗ್ಗೆ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನಡೆದಿವೆ. ಇತ್ತೀಚೆಗೆ ನ್ಯೂರಾಲಜಿ ಜರ್ನಲ್ನಲ್ಲಿ ಪ್ರಕಟಿಸಲಾದ ಒಂದು ಬೃಹತ್ ಅಧ್ಯಯನದ ಪ್ರಕಾರ ಹತ್ತು ಸಾವಿರ ಹೆಜ್ಜೆಗಳನ್ನು ಹಾಕುವುದರಿಂದ ನೇರವಾಗಿ ಹೃದಯಕ್ಕೆ ಲಾಭವಿದೆ. ಹೃದಯ ರೋಗ, ಹೃದಯ ವೈಫಲ್ಯ, ಪಾರ್ಶ್ವವಾಯು, 13 ವಿಧದ ಕ್ಯಾನ್ಸರ್ ಮತ್ತು ಡೈಮೆನ್ಷಿಯಗಳಿಂದ (ಬುದ್ಧಿಮಾಂದ್ಯ) ಮುಕ್ತಿ ಪಡೆಯಲು ಹತ್ತು ಸಾವಿರ ಹೆಜ್ಜೆಗಳನ್ನು ಹಾಕುವುದು ಉತ್ತಮ ದಾರಿಯಾಗಿರುತ್ತದೆ.
2000 ಹೆಜ್ಜೆ ಹಾಕಿದರೂ ಸಾಕು!
ಆದರೆ 10 ಸಾವಿರ ಹೆಜ್ಜೆ ಹಾಕದೆ ಇದ್ದರೂ ನೀವು ಬೇಸರಪಡುವ ಅಗತ್ಯವಿಲ್ಲ. 1000- 2000 ಹೆಜ್ಜೆಗಳಿಂದಲೂ ಆರೋಗ್ಯಕರವಾಗಿ ಇರಬಹುದು. ಆದರೆ ಪ್ರೊಟೀನ್ ಆಹಾರ ಸೇವನೆ, ತೂಕ ಎತ್ತುವುದು, ಸಕ್ಕರೆ ಸೇವನೆ ಪ್ರಮಾಣ ಕಡಿಮೆ ಮಾಡುವುದು ಮತ್ತು ಹೊರಾಂಗಣ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದು ಮತ್ತು ಸಂಸ್ಕರಿತ ಆಹಾರಗಳನ್ನು ತೊರೆಯುವುದರಿಂದ ಹೆಚ್ಚು ಲಾಭವಿದೆ.
“ಇಂಟರ್ನಲ್ ಮೆಡಿಸಿನ್ ಜರ್ನಲ್ನಲ್ಲಿ ಪ್ರಕಟವಾದ ಸಮಗ್ರ ಅಧ್ಯಯನದ ಪ್ರಕಾರ ಪ್ರತಿ ದಿನ ನೀವು ಹಾಕುವ 2000 ಹೆಜ್ಜೆಗಳು ಅವಧಿಗೆ ಮೊದಲೇ ಮರಣ ಹೊಂದುವುದರಿಂದ ಶೇ 8-11ರಷ್ಟು ಕಡಿಮೆಗೊಳಿಸುತ್ತದೆ” ಎನ್ನುತ್ತಾರೆ ವೈದ್ಯರಾದ ಮಾನವ್ ಅರೋರ. “ಅಧ್ಯಯನದಲ್ಲಿ 8000ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದಾರೆ. ಅವರು ಕೈಗಳಿಗೆ ಚಟುವಟಿಕೆ ಟ್ರ್ಯಾಕರ್ ಮಾಡುವ ಸಾಧನಗಳನ್ನು ಧರಿಸಿದ್ದರು. ಅವರ ಆರೋಗ್ಯವನ್ನು 7 ವರ್ಷಗಳವರೆಗೆ ಮೇಲ್ವಿಚಾರಣೆ ಮಾಡಲಾಗಿತ್ತು. ಬಹಳ ವೇಗವಾಗಿ ಮತ್ತು ಹೆಚ್ಚು ತೀವ್ರವಾಗಿ ನಡೆಯುವುದು ಇನ್ನೂ ಉತ್ತಮ ಎಂದು ಅಧ್ಯಯನ ಕಂಡುಕೊಂಡಿದೆ” ಎಂದು ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿವರಿಸಿದ್ದಾರೆ.
ಇನ್ನೊಂದು ಅಧ್ಯಯನದ ಪ್ರಕಾರ ದಿನಕ್ಕೆ 4,400 ಹೆಜ್ಜೆಗಳು ಹಾಕಿದಲ್ಲಿ ಅವಧಿಗೆ ಮುನ್ನ ಸಾಯುವುದು ಶೇ 41ರಷ್ಟು ಕಡಿಮೆಯಾಗಲಿದೆ. ಹೆಚ್ಚುವರಿ ಹೆಜ್ಜೆ ಹಾಕುವುದರಿಂದ ಲಾಭ ಹೆಚ್ಚಾಗುತ್ತಿದೆ ಎನ್ನುವುದು ನಿಜ.
ವಯೋಮಾನಕ್ಕೆ ತಕ್ಕಂತೆ ಹೆಜ್ಜೆ
ವಯೋಮಾನಕ್ಕೆ ತಕ್ಕಂತೆ ಹತ್ತು ಸಾವಿರ ಹೆಜ್ಜೆ ಹಾಕಲು ಎಷ್ಟು ಸಮಯ ಬೇಕಾಗುತ್ತದೆ? ಪ್ರತಿಯೊಬ್ಬರಿಗೆ ಸ್ಥಿರವಾದ ಸಮಯವೆನ್ನುವುದು ಇರುವುದಿಲ್ಲ. ಆದರೆ ಸಾಮಾನ್ಯವಾಗಿ 10,000 ಹೆಜ್ಜೆ ಹಾಕಲು ಒಂದೂವರೆ ಗಂಟೆ ಹಿಡಿಯಬಹುದು. ಕಾಸ್ಮೋಪಾಲಿಟನ್ ಮಾಧ್ಯಮದಲ್ಲಿ ಬರೆದಿರುವ ಪ್ರಕಾರ ವಿಭಿನ್ನ ವಯೋಮಾನಕ್ಕೆ ವಿಭಿನ್ನ ಸಮಯ ಹಿಡಿಯಬಹುದು.
ಹದಿಹರೆಯದವರಿಗೆ (13-19)- 1 ಗಂಟೆ 15 ನಿಮಿಷಗಳಿಂದ 1 ಗಂಟೆ 45 ನಿಮಿಷಗಳವರೆಗೆ ಹಿಡಿಯಬಹುದು.
20-30 ವಯಸ್ಸಿನವರಿಗೆ - 1 ಗಂಟೆ 15 ನಿಮಿಷಗಳಿಂದ 1 ಗಂಟೆ 45 ನಿಮಿಷಗಳವರೆಗೆ ಹಿಡಿಯಬಹುದು.
40-50 ವಯಸ್ಸಿನವರಿಗೆ- 1 ಗಂಟೆ 20 ನಿಮಿಷಗಳಿಂದ 1 ಗಂಟೆ 55 ನಿಮಿಷಗಳವರೆಗೆ ಹಿಡಿಯಬಹುದು.
60ರ ವಯಸ್ಸಿನವರಿಗೆ- 1 ಗಂಟೆ 30 ನಿಮಿಷಗಳಿಂದ 2 ಗಂಟೆ 10 ನಿಮಿಷಗಳವರೆಗೆ ಹಿಡಿಯಬಹುದು.
70ರ ವಯಸ್ಸಿನವರಿಗೆ - 1 ಗಂಟೆ 45 ನಿಮಿಷಗಳಿಂದ 2 ಗಂಟೆ 30 ನಿಮಿಷಗಳವರೆಗೆ ಹಿಡಿಯಬಹುದು.
ಹೆಜ್ಜೆಯಿಂದ ಕ್ಯಾಲರಿ ಕರಗಿಸುವುದು
ಹತ್ತು ಸಾವಿರ ಹೆಜ್ಜೆಯಿಂದ ಎಷ್ಟು ಕ್ಯಾಲರಿ ಕರಗಿಸಬಹುದು? ವರದಿಗಳ ಪ್ರಕಾರ ನಿಮ್ಮ ತೂಕ, ಅನುವಂಶಿಕ ಮಾಹಿತಿ, ವೇಗ ಮತ್ತು ಪ್ರದೇಶವನ್ನು ಅನುಸರಿಸಿ ಎಷ್ಟು ಕ್ಯಾಲರಿ ಕರಗುತ್ತದೆ ಎನ್ನುವುದು ನಿರ್ಧಾರವಾಗುತ್ತದೆ. ಹಾರ್ವರ್ಡ್ ಹೆಲ್ತ್ ಪಬ್ಲಿಷಿಂಗ್ ವರದಿಯ ಪ್ರಕಾರ ಒಂದು ಗಂಟೆ ನಡೆದಲ್ಲಿ ನಿಮ್ಮ ತೂಕ ಮತ್ತು ವೇಗವನ್ನು ಅನುಸರಿಸಿ 214ರಿಂದ 504ರಷ್ಟು ಕ್ಯಾಲರಿ ಕರಗಿಸಬಹುದು.







