Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಯುವ ಜನತೆ ಮತ್ತು ಮಾನಸಿಕ ಆರೋಗ್ಯ

ಯುವ ಜನತೆ ಮತ್ತು ಮಾನಸಿಕ ಆರೋಗ್ಯ

ಡಾ. ಮುರಲೀ ಮೋಹನ್ ಚೂಂತಾರುಡಾ. ಮುರಲೀ ಮೋಹನ್ ಚೂಂತಾರು10 Oct 2025 10:58 AM IST
share
ಯುವ ಜನತೆ ಮತ್ತು ಮಾನಸಿಕ ಆರೋಗ್ಯ
ಇಂದು ವಿಶ್ವ ಮಾನಸಿಕ ಆರೋಗ್ಯ ದಿನ

ಪ್ರತೀ ವರ್ಷ ಅಕ್ಟೋಬರ್ 10ರಂದು ವಿಶ್ವ ಮಾನಸಿಕ ಆರೋಗ್ಯ ದಿನ ಎಂದು ವಿಶ್ವದಾದ್ಯಂತ ಆಚರಿಸಿ ಜನರಲ್ಲಿ ‘ಮಾನಸಿಕ ಆರೋಗ್ಯದ ಅನಿವಾರ್ಯತೆ’ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ವಿಶ್ವ ಮಾನಸಿಕ ಸಂಸ್ಥೆ ಮಾಡುತ್ತದೆ. ಈ ಆಚರಣೆಯನ್ನು ಮೊದಲ ಬಾರಿಗೆ 1992 ಅಕ್ಟೋಬರ್ 10ರಂದು ಆರಂಭಿಸಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಜೀವನ ಶೈಲಿ, ಕೆಲಸದ ವಾತಾವರಣ, ವಿಪರೀತ ಸ್ಪರ್ಧಾತ್ಮಕವಾದ ಜಗತ್ತು ಮತ್ತು ವೇಗದ ಧಾವಂತದ ಬದುಕಿನಿಂದಾಗಿ ಯುವ ಜನರು ಬಹಳ ಬೇಗ ಉದ್ವೇಗಕ್ಕೆ, ಖಿನ್ನತೆಗೆ ಮತ್ತು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಉಸಿರುಗಟ್ಟಿಸುವ ಪೈಪೋಟಿ, ಸದಾ ಕಾಲೆಳೆೆಯುವ ಪ್ರವೃತ್ತಿಯ ಜನರ ಧೋರಣೆ ಮತ್ತು ನಿಗದಿತ ಫಲಿತಾಂಶ ನೀಡಬೇಕಾದ ಒತ್ತಡಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದೆ ಯುವ ಜನರು ದಾರಿ ತಪ್ಪುವ ಸಾಧ್ಯತೆ ಹೆಚ್ಚಾಗುತ್ತಿದೆ. ಧೂಮಪಾನ, ಮದ್ಯಪಾನ, ಮಾದಕ ವಸ್ತು ಸೇವನೆ ಮುಂತಾದವುಗಳಿಗೆ ದಾಸರಾಗಿ ಅದೇ ವಿಷವರ್ತುಲದಲ್ಲಿ ಸಿಕ್ಕಿಕೊಂಡು ಹೊರಬರಲಾರದೆ ಶಾಶ್ವತವಾಗಿ ಮನೋ ರೋಗಿಗಳಾಗಿ ಬದಲಾಗುತ್ತಿರುವುದು ಬಹಳ ವಿಷಾದನೀಯ ಸಂಗತಿ.

ಮಾನಸಿಕ ಒತ್ತಡದ ಲಕ್ಷಣಗಳು

ಮಾನಸಿಕ ಒತ್ತಡ ಎನ್ನುವುದು ಬಹಳ ಅಪಾಯಕಾರಿ ಮನೋಸ್ಥಿತಿಯಾಗಿದ್ದು, ದೇಹದಲ್ಲಿ ರಸದೂತಗಳ ಸ್ರವಿಸುವಿಕೆ ಮೇಲೆ ವಿಶೇಷ ಪರಿಣಾಮ ಬೀರುತ್ತದೆ. ರಸದೂತಗಳ ಏರಿಳಿತದಿಂದಾಗಿ ದೇಹದ ಹೆಚ್ಚಿನ ಅಂಗಾಂಗಳ ಮೇಲೆ ಋಣಾತ್ಮಕ ಪರಿಣಾಮ ಉಂಟಾಗುತ್ತದೆ. ಇದನ್ನು ಅಷ್ಟು ಸುಲಭವಾಗಿ ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ. ಹೆಚ್ಚಿನವರಿಗೆ ತಾವು ಒತ್ತಡದಲ್ಲಿ ಇದ್ದೇವೆ ಎಂಬುದರ ಬಗ್ಗೆ ಅರಿವೂ ಇರುವುದಿಲ್ಲ.

ಒತ್ತಡದಿಂದ ಉಂಟಾಗುವ ಅಡ್ಡ ಪರಿಣಾಮಗಳನ್ನು ಈ ಕೆಳಗಿನಂತೆ ಗುರುತಿಸಲಾಗಿದೆ.

1.ಕೂದಲು ಉದುರುವಿಕೆ

ದಿನವೊಂದಕ್ಕೆ ಏನಿಲ್ಲವೆಂದರೂ ನೂರಕ್ಕಿಂತಲೂ ಹೆಚ್ಚು ಕೂದಲು ಉದುರುತ್ತದೆ ಮತ್ತು ಯಾಕಾಗಿ ಕೂದಲು ಉದುರುತ್ತದೆ ಎಂಬುದರ ಅರಿವು ವ್ಯಕ್ತಿಗೆ ಇರುವುದಿಲ್ಲ. ಅತಿಯಾದ ಒತ್ತಡದಿಂದ ದೇಹದ ದೈನಂದಿನ ಕಾರ್ಯಗಳಿಗೆ ಅಡ್ಡಿಯಾಗಿ ಕೂದಲು ಬೆಳೆಯುವಿಕೆಗೂ ಋಣಾತ್ಮಕ ಪರಿಣಾಮ ಬೀರುತ್ತದೆ.

2. ದೇಹದ ತೂಕದಲ್ಲಿ ವ್ಯತ್ಯಾಸವಾಗುವುದು

ಅತಿಯಾದ ಮಾನಸಿಕ ಒತ್ತಡದಿಂದಾಗಿ ಹಸಿವಿಲ್ಲದಿರುವುದು ಕಂಡುಬರುತ್ತದೆ. ಇದರಿಂದಾಗಿ ದೇಹದ ತೂಕ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ದೇಹದ ಜೈವಿಕ ಕ್ರಿಯೆಗಳು ನಿಧಾನವಾಗಿ ದೇಹದ ತೂಕ ಹೆಚ್ಚಾಗುವ ಸಾಧ್ಯತೆಯೂ ಇರುತ್ತದೆ. ಒಟ್ಟಿನಲ್ಲಿ ದೇಹದ ತೂಕ ವಿಪರೀತವಾಗಿ ವ್ಯತ್ಯಾಸವಾದಲ್ಲಿ ದೇಹದಲ್ಲಿ ಏನೋ ತೊಂದರೆ ಇದೆ ಎಂದರ್ಥ.

3.ಮಾನಸಿಕ ನೆಮ್ಮದಿ ಇಲ್ಲದಿರುವುದು

ದೇಹದಲ್ಲಿ ಒತ್ತಡ ಜಾಸ್ತಿಯಾದಾಗ ರಸದೂತಗಳ ಸ್ರವಿಸುವಿಕೆ ಜಾಸ್ತಿಯಾಗಿ ಮನಸ್ಸು ಬಹಳ ಚಂಚಲವಾಗುತ್ತದೆ. ಎದೆಬಡಿತ ಜೋರಾಗುತ್ತದೆ. ಏನೋ ಒಂದು ರೀತಿಯ ಮಾನಸಿಕ ತುಮುಲ ಮತ್ತು ಅಶಾಂತಿ ಉಂಟಾಗುತ್ತದೆ. ನಿಂತಲ್ಲಿ ನಿಲ್ಲಲಾಗದೆ, ಕುಳಿತಲ್ಲಿ ಕುಳಿತುಕೊಳ್ಳಲಾಗದೆ ಸದಾ ಚಡಪಡಿಕೆಯಿಂದ ವ್ಯಕ್ತಿ ಓಡಾಡುತ್ತಿರುತ್ತಾನೆ.

4. ಲೈಂಗಿಕ ನಿರಾಸಕ್ತಿ

ಅತಿಯಾದ ಒತ್ತಡದಿಂದಾಗಿ ದೇಹದಲ್ಲಿನ ಲೈಂಗಿಕಾಸಕ್ತಿ ಕುದುರಿಸುವ ರಸದೂತಗಳ ಸ್ರವಿಸುವಿಕೆ ಕಡಿಮೆಯಾಗಿ ಲೈಂಗಿಕಾಸಕ್ತಿ ಕಡಿಮೆಯಾಗುತ್ತದೆ ಅದೇ ರೀತಿ ನಿಶ್ಯಕ್ತಿ ಮತ್ತು ಸಂತಾನ ಹೀನತೆಗೂ ಕಾರಣವಾಗುತ್ತದೆ.

5. ನಿದ್ರಾಹೀನತೆ

ಅತಿಯಾದ ಒತ್ತಡದಿಂದ ಮೆದುಳಿನ ಜೀವಕೋಶಗಳ ಮೇಲೆ ಬಹಳಷ್ಟು ಋಣಾತ್ಮಕ ಪರಿಣಾಮ ಉಂಟಾಗುತ್ತದೆ. ದಿನವೊಂದಕ್ಕೆ ಆರೋಗ್ಯವಂತ ವ್ಯಕ್ತಿಗೆ 6 ರಿಂದ 8 ಗಂಟೆಗಳ ನಿದ್ರೆ ಅವಶ್ಯಕವಿರುತ್ತದೆ. ಆದರೆ ಮಾನಸಿಕ ಒತ್ತಡ ಇರುವವವರಿಗೆ ನಿದ್ರೆ ಬರುವುದಿಲ್ಲ. ನಿದ್ರೆ ಬಂದರೂ ಮಧ್ಯೆ ಮಧ್ಯೆ ನಿದ್ರೆಯಿಂದ ಗಾಬರಿಗೊಂಡು ಎಚ್ಚರವಾಗುತ್ತದೆ. ಅದೇ ರೀತಿ ನಿದ್ರೆಯ ಸಮಯದ ಪರಿವೆಯೂ ಇರುವುದಿಲ್ಲ.

6. ಮೂಡ್ ಬದಲಾವೆ

ಮಾನಸಿಕ ಒತ್ತಡದಿಂದ ಬಳಲುತ್ತಿರುವವರು ಬಹಳ ಕೋಪಿಷ್ಟರಾಗಿರುತ್ತಾರೆ. ಕಾರಣವಿಲ್ಲದೆ ಸಿಡುಕುವುದು, ಅಳುವುದು ಅಥವಾ ರೇಗಾಡುವುದು ಮಾಡುತ್ತಿರುತ್ತಾರೆ. ಕೆಲಸದಲ್ಲಿ ಯಾವುದೇ ರೀತಿಯ ಏಕಾಗ್ರತೆ ಇರುವುದಿಲ್ಲ, ಸದಾ ಮಾನಸಿಕ ಉದ್ವೇಗ, ದುಗುಡತೆ ಮತ್ತು ಮಾನಸಿಕ ಕಿರಿಕಿರಿಯಿಂದ ಬಳಲುತ್ತಿರುತ್ತಾರೆ, ಯಾರ ಬಳಿಯೂ ನೇರವಾಗಿ ವ್ಯವಹರಿಸುವ ವ್ಯವದಾನ ಅವರಿಗೆ ಇರುವುದಿಲ್ಲ.

7. ದೇಹದಲ್ಲಿ ನೋವು

ಅತಿಯಾದ ಒತ್ತಡವಿರುವವರಿಗೆ ದೇಹದ ಎಲ್ಲಾದರೊಂದು ಜಾಗದಲ್ಲಿ ನೋವು ಕಂಡುಬರುತ್ತದೆ. ಸ್ನಾಯುಗಳಲ್ಲಿ ಸೆಳೆತ, ಹೊಟ್ಟೆನೋವು, ತಲೆ ನೋವು, ಎದೆ ನೋವು. ಗ್ಯಾಸ್ಟ್ರಿಕ್ ಸಮಸ್ಯೆ ಹೀಗೆ ಏನಾದರೊಂದು ತೊಂದರೆ ಇದ್ದೇ ಇರುತ್ತದೆ, ದೇಹದಲ್ಲಿನ ರಸದೂತಗಳ ಅತಿಯಾದ ಏರಿಳಿತದಿಂದಾಗಿ ದೇಹದ ಯಾವುದಾದರೊಂದು ಅಂಗಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ನೋವಿನಲ್ಲಿ ಪರ್ಯಾವಸಾನವಾಗುತ್ತದೆ.

8. ತಾಳ್ಮೆ ಕಳೆದುಕೊಳ್ಳುವುದು

ದೈನಂದಿನ ವ್ಯವಹಾರದಲ್ಲಿ ಚಟುವಟಿಕೆಗಳ ಬಗ್ಗೆ ವಿಪರೀತವಾದ ನಿರಾಸಕ್ತಿ ಉಂಟಾಗುತ್ತದೆ. ಅತೀ ಹತ್ತಿರದ ಸಂಬಂಧಿಕರಲ್ಲಿ, ಆಪ್ತರಲ್ಲಿ ಕೂಡಾ ರೇಗಾಡುತ್ತಾರೆ, ಏನಾದರೊಂದು ಸಣ್ಣ ವಿಷಯಗಳಿಗೂ ಸ್ನೇಹಿತರಲ್ಲಿ ಜಗಳ, ರೇಗಾಡುತ್ತಾರೆ. ಕೆಲವೊಮ್ಮೆ ಯಾವುದೇ ನಿರ್ದಿಷ್ಟ ಕಾರಣವಿಲ್ಲದೆಯೂ ರೇಗಾಡುತ್ತಾರೆ, ಸದಾ ಸೂಜಿಗಲ್ಲಿನ ಮೇಲೆ ಕುಳಿತಿರುವವರ ರೀತಿಯಲ್ಲಿ ಚಡಪಡಿಕೆ ಇವರಲ್ಲಿ ಕಂಡುಬರುತ್ತದೆ.

9. ಸದಾಕಾಲ ಕೆಲಸದ ಬಗ್ಗೆಯೇ ಚಿಂತೆ

ದಿನದ ಎಲ್ಲಾ ಗಂಟೆಗಳಲ್ಲೂ ಇವರು ಕೆಲಸದ ಬಗ್ಗೆಯೇ ಚಿಂತಿಸುತ್ತಿರುತ್ತಾರೆ. ಕುಳಿತಲ್ಲಿ ನಿಂತಲ್ಲಿ, ಮಲಗಿದಾಗಲೂ ಇವರಿಗೆ ಕೆಲಸದ್ದೇ ಚಿಂತೆ. ಕುಟುಂಬದವರ ಜೊತೆ ಪ್ರವಾಸಕ್ಕೆ ಹೋದಾಗಲೂ ಆಫೀಸಿನ ವ್ಯವಹಾರದ ಬಗ್ಗೆ ಚಿಂತಿಸಿರುತ್ತಾರೆ. ಆಫೀಸು, ಹಣದ ವ್ಯವಹಾರ, ಆಫೀಸಿನ ಸಹದ್ಯೋಗಿ ಹಾಗೂ ಅವರ ಆಲೋಚನೆಗಳೆಲ್ಲವೂ ಆಫೀಸಿನ ಸುತ್ತಲೇ ಗಿರಕಿ ಹೊಡೆಯುತ್ತಿರುತ್ತದೆ.

10. ಪದೇ ಪದೇ ದೇಹಕ್ಕೆ ಸೋಂಕು ತಗಲುವುದು

ವಿಪರೀತ ಮಾನಸಿಕ ಒತ್ತಡವಿರುವಾಗ ರಸದೂತಗಳ ವೈಪರೀತ್ಯದಿಂದಾಗಿ ದೇಹದ ರಕ್ಷಣಾ ಪ್ರಕಿಯೆಯ ಮೇಲೆ ಋಣಾತ್ಮಕ ಪರಿಣಾಮ ಉಂಟಾಗುತ್ತದೆ. ವ್ಯಕ್ತಿಯ ಬಿಳಿ ರಕ್ತಕಣಗಳು ಮತ್ತು ಇತರ ರಕ್ಷಣಾ ವ್ಯವಸ್ಥೆ ಕುಸಿದು ಹೋಗಿ ರೋಗಿ ಬೇಗನೆ ನೆಗಡಿ, ಕೆಮ್ಮು ಅಥವಾ ಇನ್ನಾವುದೋ ಸೋಂಕು ರೋಗಗಳಿಗೆ ಪದೇ ಪದೇ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ರಕ್ತ ಹೀನತೆಯೂ ಉಂಟಾಗುವ ಸಾಧ್ಯತೆಯೂ ಇದೆ. ದೇಹದ ಜೀರ್ಣಾಂಗ ವ್ಯವಸ್ಥೆ ಹದೆಗೆಟ್ಟು ಪದೇ ಪದೇ ಮಲಬದ್ಧತೆ ಮತ್ತು ಬೇದಿ ಉಂಟಾಗುವ ಸಾಧ್ಯತೆಯೂ ಇರುತ್ತದೆ. ತಲೆ ಸುತ್ತುವುದು, ವಾಕರಿಕೆ, ವಾಂತಿ ಮತ್ತು ಹಸಿವಿಲ್ಲದಿರುವುದು ಇವೆಲ್ಲವೂ ಒಟ್ಟು ಸೇರಿ ದೇಹದ ರಕ್ಷಣಾ ವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಹೋಗುತ್ತದೆ.

ಕೊನೆಮಾತು

‘ಆತ್ಮಹತ್ಯೆ ಮಹಾಪಾಪ’ ಎಂದು ಬಲ್ಲವರು ಪದೇ ಪದೇ ಹೇಳುವ ಮಾತು. ಅದರೆ ಮನಸ್ಸಿನ ತೊಳಲಾಟ, ವಿಪರೀತ ನೋವು, ಹತಾಶೆಯಿಂದಾಗಿ ಮನದ ಭಾವನೆಗಳೇ ಭಾರವಾದಾಗ, ಭವಿಷ್ಯದ ಬಗ್ಗೆ ಜಿಗುಪ್ಸೆ ಹುಟ್ಟಿ, ತಮ್ಮ ಅಸ್ತಿತ್ವವೇ ಅರ್ಥಹೀನವೆನಿಸಿ ಜನರು ಆತ್ಮಹತ್ಯೆಯಂತಹ ಹೇಡಿತನದ ಕೆಲಸಕ್ಕೆ ಮುಂದಾಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಯುವಜನತೆೆ ಹೆಚ್ಚು ಹೆಚ್ಚು ಆತ್ಮಹತ್ಯೆಗೆ ಮುಂದಾಗುತ್ತಿರುವುದು, ನಮ್ಮ ಸಮಾಜ ಎತ್ತಕಡೆಗೆ ಸಾಗುತ್ತದೆ ಎಂಬುದರ ಮುನ್ಸೂಚನೆ ಎಂದರೂ ತಪ್ಪಾಗಲಾರದು. ಇಂದಿನ ಧಾವಂತದ, ಸರ್ಧಾತ್ಮಕ ಮತ್ತು ಯಾಂತ್ರಿಕ ಬದುಕಿನಲ್ಲಿ ಎಲ್ಲವೂ ಕಣ್ಣು ಮಿಟುಕಿಸುವುದರೊಳಗೆ ಆಗಿ ಹೋಗುತ್ತವೆ. ಆತಂಕ, ಖಿನ್ನತೆ, ಅತಿಯಾದ ಒತ್ತಡ, ಡೈವೋರ್ಸ್, ವರದಕ್ಷಿಣೆ, ಕೌಟುಂಬಿಕ ಹಿಂಸೆ, ಪ್ರೀತಿ ಪ್ರೇಮದ ವೈಫಲ್ಯ, ವ್ಯಾಪಾರದಲ್ಲಿ ನಷ್ಟ, ವಿವಾಹೇತರ ಸಂಬಂಧಗಳು, ಅರ್ಥಿಕ ಅಡಚಣೆ, ವಿದ್ಯಾಭ್ಯಾಸದಲ್ಲಿ ಅನುತ್ತೀೀರ್ಣ, ನಿರುದ್ಯೋಗ, ಕಾಡುವ ಕಾಯಿಲೆ, ಮಕ್ಕಳಾಗದ ಕೊರಗು ಹೀಗೆ ನೂರಾರು ಕಾರಣಗಳು ಆತ್ಮಹತ್ಯೆಗೆ ಪ್ರಚೋದನೆ ನೀಡಲೂಬಹುದು. ಇಂತಹ ವ್ಯಕ್ತಿಗಳನ್ನು ಗುರುತಿಸಿ ಸಮಾಜ ಅವರಿಗೆ ಒಂದೆರಡು ಸಾಂತ್ವನದ ಸಿಹಿ ನುಡಿ ಹೇಳಿ ಸಂತೈಸಿದಲ್ಲಿ ‘ಒಂದು ಕ್ಷಣದ’ ಅಚಾತುರ್ಯವನ್ನು ತಡೆಯಬಹುದು. ಸಾಯಲು ನೂರು ಮಾರ್ಗವಿದ್ದರೆ ಬದುಕಲು ಸಾವಿರ ಮಾರ್ಗವಿದೆ ಎಂಬ ಸತ್ಯವನ್ನು ಯುವಜನರು ಅರ್ಥಮಾಡಿಕೊಳ್ಳಬೇಕು.

share
ಡಾ. ಮುರಲೀ ಮೋಹನ್ ಚೂಂತಾರು
ಡಾ. ಮುರಲೀ ಮೋಹನ್ ಚೂಂತಾರು
Next Story
X