Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಹೈದರಾಬಾದ್ 1948: ಒಂದು ದುರಂತ, ಹಲವು...

ಹೈದರಾಬಾದ್ 1948: ಒಂದು ದುರಂತ, ಹಲವು ಅನುಭವಗಳು

ಮುಹಮ್ಮದ್ ಅಯೂಬ್ ಖಾನ್ಮುಹಮ್ಮದ್ ಅಯೂಬ್ ಖಾನ್14 Sept 2023 11:48 AM IST
share
ಹೈದರಾಬಾದ್ 1948:  ಒಂದು ದುರಂತ, ಹಲವು ಅನುಭವಗಳು
‘ಡೇಂಜರ್ಸ್ ಆಫ್ ಎ ಸಿಂಗಲ್ ಸ್ಟೋರಿ’ ಈ ಸರಣಿಯು ೧೯೪೮ರ ಹೈದರಾಬಾದ್ ಪೊಲೀಸ್ ಕಾರ್ಯಾಚರಣೆಯನ್ನು ಪರ್ಯಾಯ ದೃಷ್ಟಿಕೋನದಿಂದ ನೋಡುತ್ತದೆ. ಈ ದೃಷ್ಟಿಕೋನಗಳು, ಹೈದರಾಬಾದ್ ವಿಲೀನವನ್ನು ‘ವಿಮೋಚನೆ’ ಎಂಬುದಾಗಿ ಬಿಂಬಿಸುವ ಪ್ರಧಾನವಾಹಿನಿಯ ವ್ಯಾಖ್ಯಾನವನ್ನು ಪ್ರಶ್ನಿಸುತ್ತವೆ, ಮಾರ್ಪಡಿಸುತ್ತವೆ ಮತ್ತು ಅದಕ್ಕೆ ಸೂಕ್ಷ್ಮ ಅಂಶಗಳನ್ನು ಸೇರಿಸುತ್ತವೆ. ಚಾಲ್ತಿಯಲ್ಲಿರುವ ವ್ಯಾಖ್ಯಾನವನ್ನು ವಿಭಜನವಾದಿ ರಾಜಕೀಯವನ್ನು ಇನ್ನಷ್ಟು ಬಲಪಡಿಸಲು ಬಳಸಲಾಗುತ್ತಿದೆ. ‘ಖಿಡ್ಕಿ ಕಲೆಕ್ಟಿವ್’ನ ಸ್ವಾತಿ ಶಿವಾನಂದ್, ಯಾಮಿನಿ ಕೃಷ್ಣ ಮತ್ತು ಪ್ರಮೋದ್ ಮಂಡಾಡೆ ಈ ಸರಣಿಯನ್ನು ನಿರೂಪಿಸಿದ್ದಾರೆ. ‘ಖಿಡ್ಕಿ ಕಲೆಕ್ಟಿವ್’, ಇತಿಹಾಸ, ರಾಜಕೀಯ ಮತ್ತು ಸಂಸ್ಕೃತಿ ಕುರಿತು ಸಾರ್ವಜನಿಕ ಸಂವಾದವನ್ನು ರೂಪಿಸುವುದಕ್ಕೆ ಬದ್ಧವಾಗಿರುವ ವಿದ್ವಾಂಸರ ಬಳಗವಾಗಿದೆ.

ಹೈದರಾಬಾದಿನ ಪೊಲೀಸ್ ಕಾರ್ಯಾಚರಣೆಯ 75ನೇ ವರ್ಷಾಚರಣೆಯ ಸಂದರ್ಭದಲ್ಲಿ, ಸಮುದಾಯಗಳು ವಿವೇಕವನ್ನು ಗಾಳಿಗೆ ತೂರಿ, ಭಾವಾವೇಶಕ್ಕೊಳಗಾದಾಗ ಏನಾಗುತ್ತದೆ ಎಂಬ ಬಗ್ಗೆ ವಿವೇಕಯುತ, ವಿಶ್ಲೇಷಣೆಯ ಅಗತ್ಯವಿದೆ.

ರಾಜಕಾರಣಿಗಳು, ಇತರ ಅವಕಾಶವಾದಿಗಳು ಈ ದುರಂತವನ್ನು ಚುನಾವಣಾ ಧ್ರುವೀಕರಣದ ಮೂಲವಾಗಿ ಬಳಸಲೆತ್ನಿಸುವ ಈ ದಿನಗಳಲ್ಲಿ ಇದು ಇನ್ನೂ ಮುಖ್ಯ. ಈ ಕಾರ್ಯಾಚರಣೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ, ಜಾತಿ, ಸಾಮಾಜಿಕ ವರ್ಗ ಮತ್ತಿತರ ಐಡೆಂಟಿಟಿಗಳು ಇದನ್ನು ನಿರ್ಧರಿಸಿದ್ದು ಕಂಡು ಬರುತ್ತದೆ.

ಸುದೀರ್ಘ ದುರಂತ

ಇತ್ತೀಚಿನ ‘ರಝಾಕಾರ್’ ಕುರಿತಾದ ಸಿನೆಮಾ ಒಂದರಲ್ಲಿ ಮುಸ್ಲಿಮರನ್ನು ಹಿಂದೆಂದೂ ಕಾಣದಷ್ಟು ರಾಕ್ಷಸೀಕರಿಸಲಾಗಿದೆ. ಆದರೆ ಇದೇನೂ ಹೊಸತಲ್ಲ. 1947-48ರಲ್ಲೇ ಈ ಇಡೀ ರಾಜ್ಯವನ್ನು ರಾಕ್ಷಸೀಗೊಳಿಸಿ ಅದೊಂದು ಕ್ಯಾನ್ಸರ್ ಎಂಬಂತೆ ಬಿಂಬಿಸಲಾಗಿತ್ತು.

ಆ ಕಾಲದ ಘಟನೆಗಳ ನಿಖರ ವಿವರ ನೋಡಲು ನಾವು ಪಂಡಿತ್ ಸುಂದರ್ ಲಾಲ್ ಕಮಿಟಿ ವರದಿಯನ್ನು ನೋಡಬೇಕು. ಸ್ವಾತಂತ್ರ್ಯ ಹೋರಾಟಗಾರರೂ, ಗಾಂಧಿವಾದಿಯೂ ಆಗಿದ್ದ ಪಂಡಿತ್ ಸುಂದರ್ ಲಾಲ್ ಅವರ ವರದಿ ತನ್ನ ವಿವರ ಮತ್ತು ರಾಗದ್ವೇಷಗಳಿಲ್ಲದ ವಿವರಣೆಗಳಿಂದ ಗಮನ ಸೆಳೆಯುತ್ತದೆ. ಈ ವರದಿಯನ್ನು ಬಹುಕಾಲ ಬಚ್ಚಿಡಲಾಗಿತ್ತು. ಸುಂದರ್ ಲಾಲ್ ಕಮಿಟಿಯ ತಂಡದಲ್ಲಿದ್ದ ಯೂನುಸ್ ಸಲೀಂ ಎಂಬವರು ಈ ಬಗ್ಗೆ ಪುಟ್ಟ ಉಲ್ಲೇಖ ಮಾಡಿದ್ದರು. ಈ ವರದಿ ಇತ್ತೀಚೆಗೆ ಹತ್ತು ವರ್ಷಗಳ ಹಿಂದೆ ಅಷ್ಟೇ ಪತ್ತೆಯಾಯಿತು(ನೆಹರೂ ಸ್ಮಾರಕ ಮ್ಯೂಸಿಯಂ ಮತ್ತು ಲೈಬ್ರರಿಯಲ್ಲಿ ಇದು ಯಾರೋ ಸಂಶೋಧಕರಿಗೆ ಆಕಸ್ಮಾತ್ತಾಗಿ ಸಿಕ್ಕಿತು)

ಮೊದಲ ಹಂತದಲ್ಲಿ ಅಂದರೆ 1947ರ ದೇಶ ವಿಭಜನೆಯ ಹಂತ ದಲ್ಲಿ ಹಿಂದೂಗಳು ಈ ರಝಾಕಾರರ ಹಿಂಸೆಗೆ ಬಲಿಯಾಗಿದ್ದರು.

ಸುಂದರ್ ಲಾಲ್ ವರದಿ ಈ ಬಗ್ಗೆ ಹೀಗೆ ಹೇಳುತ್ತದೆ.

‘‘ರಝಾಕಾರರು ಮುಖ್ಯವಾಗಿ ಪ್ರತೀ ಹಳ್ಳಿ, ಪಟ್ಟಣಗಳಲ್ಲಿ ಸಣ್ಣ ಪ್ರಮಾಣದ ಲೂಟಿ/ವಸೂಲಿ ಕಂದಾಯ ಹೇರಿದ್ದರು.ಇದನ್ನು ಪಾವತಿಸಿದ ಮೇಲೆ ಯಾವುದೇ ತೊಂದರೆ ನೀಡುತ್ತಿರಲಿಲ್ಲ. ಪ್ರತಿರೋಧ ಒಡ್ಡಿದಲ್ಲೆಲ್ಲಾ ಬಲಾತ್ಕಾರದ ಲೂಟಿಯಾಯಿತು. ಪ್ರತಿರೋಧ ಇನ್ನಷ್ಟು ಹೆಚ್ಚಿದಲ್ಲಿ ಕೊಲೆ, ಮಾನಭಂಗಗಳೂ ನಡೆದವು.’’

ರಝಾಕಾರ್ ಎಂಬ ಪದ, ಈ ಪ್ರದೇಶದಲ್ಲಿ ನಡೆದ ಎಲ್ಲಾ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಬಳಕೆಯಾಗಿತ್ತು. ಸ್ಥಳೀಯ ದರೋಡೆಕೋರರು, ರೌಡಿಗಳೆಲ್ಲಾ ರಝಾಕಾರರ ಹೆಸರಿನಲ್ಲಿ ಲೂಟಿ ಮಾಡಿದರು. ಈಗ ನಾವು ಈಗಾಗಲೇ ಯಥೇಚ್ಛವಾಗಿ ದಾಖಲಾಗಿರುವ ರಝಾಕಾರರ ಹಿಂಸೆಯನ್ನು ನಿರಾಕರಿಸದೆ, ಇತರ ಗುಂಪಿನವರ, ವ್ಯಕ್ತಿಗಳ ಕಾರ್ಯಾಚರಣೆಯನ್ನು ವಿಶ್ಲೇಷಿಸಬೇಕಿದೆ.

ಹೈದರಾಬಾದಿನ ಎಲ್ಲಾ ಮುಸ್ಲಿಮರು ಈ ರಝಾಕಾರರ ಹಿಂಸೆಯಲ್ಲಿ ಕೈ ಜೋಡಿಸಿದ್ದರು ಎಂಬ ಗ್ರಹಿಕೆಯೂ ತಪ್ಪು.

ಹೈದರಾಬಾದ್ ಸ್ವತಂತ್ರವಾಗಿರಬೇಕೆಂದು ಬಯಸಿದವರೂ, ಬಹುಸಂಖ್ಯೆಯ ಮುಸ್ಲಿಮರೂ ಹಿಂದೂಗಳ ಮೇಲೆ ಹಿಂಸಾಚಾರ ನಡೆಸಲಿಲ್ಲ. ಈ ಹಿಂಸೆಯ ನೇತೃತ್ವ ವಹಿಸಿದ್ದ ಮಜ್ಲಿಸ್ ಇತ್ತಿಹಾದ್ ಉಲ್ ಮುಸ್ಲಿಮೀನ್ ಸಂಘಟನೆಯ ಮೇಲೆ ಕಾಸಿಂ ರಝ್ವಿಯ ಕಪಿಮುಷ್ಟಿಯ ನಿಯಂತ್ರಣ ಇದ್ದಾಗಲೂ, ಈ ಸಂಘಟನೆಯ ಒಳಗೇ ಭಿನ್ನಮತದ ಗುಂಪುಗಳಿದ್ದವು. ಇವುಗಳಲ್ಲಿ ಎರಡು ಗುಂಪುಗಳು, ಭಾರತದೊಂದಿಗೆ ಶರತ್ತುಬದ್ಧ, ಶಾಂತಿಯುತ ವಿಲೀನದ ಪರವಾಗಿ ವಾದಿಸಿದ್ದವು.

1947-48ರ ಉಚ್ಛ್ರಾಯದಲ್ಲೂ ಹೈದರಾಬಾದಿನ ಎಲ್ಲಾ ಮುಸ್ಲಿಮರ ನಾಯಕ ಈ ರಝ್ವಿ ಎಂಬ ವಾದವನ್ನು ಆ ಕಾಲಘಟ್ಟದಲ್ಲೇ ಪ್ರಶ್ನಿಸಲಾಗಿತ್ತು. ಹೈದರಾಬಾದಿನ ಕಮ್ಯುನಿಸ್ಟ್ ನಾಯಕ ಹಾಗೂ ಕವಿ ಮಕ್ದೂಂ ಮೊಹಿಯುದ್ದೀನ್ ತಮ್ಮ (ನಿಷೇಧಿತವಾಗಿದ್ದ) ಕೃತಿ ‘ಹೈದರಾಬಾದ್’ನಲ್ಲಿ, ‘‘ಈ ರಝ್ವಿಯ ಸಂಘಟನೆ 2 ಸಾವಿರ ಜಮೀನ್ದಾರರು, ಉನ್ನತ ಅಧಿಕಾರಿಗಳು ಹಾಗೂ ಬಂಡವಾಳಶಾಹಿಗಳ ಸಂಘಟನೆಯಾಗಿದೆಯೇ ಹೊರತು, ಹೈದರಾಬಾದಿನ ಎಲ್ಲಾ ಮುಸ್ಲಿಮ್ ಸಮುದಾಯಗಳ ಪ್ರತಿನಿಧಿ ಎಂದು ಭಾವಿಸುವುದು ತಪ್ಪು’’ ಎಂದಿದ್ದರು.

‘‘ಹೈದರಾಬಾದಿನ 20ಲಕ್ಷ ಸಾಮಾನ್ಯ ಮುಸ್ಲಿಮರ ಸ್ಥಿತಿ ಹಿಂದೂಗಳಿಗಿಂತ ಭಿನ್ನವಾಗಿರಲಿಲ್ಲ’’ ಎಂದು ಮಕ್ದೂಂ ಅಂಕಿಅಂಶಗಳ ಸಹಿತ ತೋರಿಸಿ ಕೊಡುತ್ತಾರೆ. ಮುಸ್ಲಿಮ್ ಸಮುದಾಯದ ಮೇಲೆ ರಝ್ವಿ ಪ್ರಭಾವವೂ ಪ್ರಶ್ನಾತೀತ ಎಂಬ ಕಲ್ಪನೆಯೂ ಸತ್ಯಕ್ಕೆ ದೂರವಾಗಿದೆ. ಧಾರ್ಮಿಕ ನಾಯಕರು, ಬುದ್ಧಿಜೀವಿಗಳು, ನಾಗರಿಕ ಸಮಾಜದ ಇತರರೂ ರಝ್ವಿಯ ಕಾರ್ಯವನ್ನು ಖಂಡಿಸಿದ್ದರು. ಈ ಕಾರಣಕ್ಕೇ ಇಂತಹ ಹಲವರು ಹಿಂಸೆಗೂ ಗುರಿಯಾಗಿದ್ದರು. 1947-48ರಲ್ಲಿ ಹೈದರಾಬಾದಿನ ಜಿಲ್ಲೆಗಳಲ್ಲಿ ನೆಲೆಸಿದ್ದ ಅರಬರೊಂದಿಗೆ ರಝಾಕಾರರು ಜಗಳವಾಡಿದ್ದರು. ಅಷ್ಟೇ ಅಲ್ಲ, ಈ ರಝ್ವಿಯ ಹುಟ್ಟೂರಾದ ಲಾತೂರ್, ಸುತ್ತಮುತ್ತಲಿನ ಆತ್ಮೀಯ ಗೆಳೆಯರು, ವಿಶ್ವಾಸಿಗರು ಬಹುತೇಕ ಮಧ್ಯಮ ವರ್ಗದ ಹಿಂದೂಗಳಾಗಿದ್ದರು.

ಈತನ ಕುಟುಂಬ ವೈದ್ಯೆ ಒಬ್ಬಾಕೆ ಹಿಂದೂ ಆಗಿದ್ದು, ಉಳಿದವರೆಲ್ಲಾ ಆತನ ಕೈ ಬಿಟ್ಟಾಗಲೂ ಆಕೆ ಮಾತ್ರ, ಆತನ ಕುಟುಂಬದೊಂದಿಗೇ ಗಟ್ಟಿಯಾಗಿ ಉಳಿದಿದ್ದರು.

ಸ್ವಾಮಿ ರಮಾನಂದ ತೀರ್ಥರ ಜೀವನ ಚರಿತ್ರೆ ಬರೆದಿದ್ದ ನಿವೃತ್ತ ನ್ಯಾಯಾಧೀಶ ನರೇಂದ್ರ ಚಾಪಳಗಾಂವ್ಕರ್ ಅವರು ತಮ್ಮ ಕೃತಿಯಲ್ಲಿ ಹಿಂದೂಗಳೊಂದಿಗೆ ರಝ್ವಿಗೆ ಇದ್ದ ಸಂಬಂಧದ ಬಗ್ಗೆ ಹೀಗೆ ಬರೆಯುತ್ತಾರೆ:

‘‘ಸಾರ್ವಜನಿಕರಲ್ಲಿ ರಝ್ವಿ ಒಬ್ಬ ವಿಲನ್ ಎಂಬ ಬಿಂಬ ಇತ್ತು. ಆದರೆ ಆತ ಸ್ವತಃ ಹಿಂಸೆಯಲ್ಲಿ ತೊಡಗಲಿಲ್ಲ; ಶಸ್ತ್ರಾಸ್ತ್ರವನ್ನೂ ಬಳಸಲಿಲ್ಲ. ಈ ತರಹದ ವ್ಯಕ್ತಿಗಳ ವರ್ತನೆ ಹೀಗೇ ಇರುತ್ತದೆ. ಆತನಲ್ಲಿ ಹಿಂಸ್ರಕ ವರ್ತನೆಯೂ ಇರಲಿಲ್ಲ. ಎಲ್ಲ ಸಾಮಾನ್ಯರಂತೆ ಆತ ಇದ್ದ. ಹೈದರಾಬಾದಿನ ಮರಾಠಿ ಸಾಪ್ತಾಹಿಕ ‘ನಿಜಾಮ ವಿಜಯ’ದ ಸಂಪಾದಕರಾಗಿದ್ದ ವಾಸುದೇವರಾವ್ ಪಾಠಕ್ ಅವರ ಕಚೇರಿಗೆ ಈ ರಝ್ವಿ ಬಂದು ಹರಟೆ ಹೊಡೆದು ಟೀ ಕುಡಿಯುತ್ತಿದ್ದ. ಅದೂ ರಝಾಕಾರರ ಕಾರ್ಯಾಚರಣೆಯ ಉತ್ತುಂಗದಲ್ಲಿ!’’

ಪಂಡಿತ್ ಸುಂದರ್ ಲಾಲ್ ಅವರ ಕಮಿಟಿಯ ವರದಿ, ಉರ್ದು ಪತ್ರಿಕೆಗಳ ವರದಿಗಳು, ಪ್ರತ್ಯಕ್ಷ ಸಾಕ್ಷಿಗಳ ವಿವರಣೆಗಳನ್ನು ಗಮನಿಸಿದರೆ ಪೊಲೀಸ್ ಕಾರ್ಯಾಚರಣೆಯ ಪರಿಣಾಮದ ವಿಭಿನ್ನ ಚಿತ್ರಗಳು ಗೋಚರಿಸುತ್ತದೆ. ಭೌಗೋಳಿಕ ಮತ್ತು ಸಾಮಾಜಿಕ ವಿವರಗಳೂ ಇಲ್ಲಿ ಮುಖ್ಯವಾಗಿರುವುದು ಕಂಡು ಬರುತ್ತದೆ.

ಪೊಲೀಸ್ ಕಾರ್ಯಾಚರಣೆಯ ಸಂದರ್ಭದಲ್ಲಿ ಮತ್ತು ತರುವಾಯ ಮುಸ್ಲಿಮರ ಮೇಲೆ ನಡೆದ ಹಿಂಸಾತ್ಮಕ ದಬ್ಬಾಳಿಕೆಯ ಅತಿರೇಕಕ್ಕೂ ಇದಕ್ಕೆ ಬಲಿಯಾದವರ ಪಾತ್ರಕ್ಕೂ ಯಾವ ಸಂಬಂಧವೂ ಕಾಣುವುದಿಲ್ಲ. ಬಹುತೇಕ ಮುಸ್ಲಿಮ್ ಬಲಿಪಶುಗಳಿಗೂ ರಝಾಕಾರರ ಹಿಂಸಾಚಾರಕ್ಕೂ ಸಂಬಂಧವೇ ಇರಲಿಲ್ಲ. ತಮ್ಮ ಧಾರ್ಮಿಕ ಗುರುತಿನ ಕಾರಣಕ್ಕಾಗಿಯಷ್ಟೇ ಅವರನ್ನು ಗುನ್ಹೆದಾರರೆಂಬಂತೆ ನೋಡಲಾಗಿತ್ತು. ಪಂಡಿತ್ ಸುಂದರ್ ಲಾಲ್ ವರದಿಯನ್ನೇ ಉದ್ಧರಿಸುವುದಾದರೆ,

‘‘ಒಬ್ಬ (ರಝಾಕಾರ) ತಪ್ಪಿತಸ್ಥನಿಗೆ ಕನಿಷ್ಠ ನೂರು ಮಂದಿ ಅಮಾಯಕ ಮುಸ್ಲಿಮರು ದಬ್ಬಾಳಿಕೆ ಅನುಭವಿಸ ಬೇಕಾಯಿತು. ಹತ್ತಾರು ಸ್ಥಳಗಳಲ್ಲಿ ನಾವು ಬಾವಿಗಳಲ್ಲಿ ತುಂಬಿದ್ದ ಕೊಳೆತ ದೇಹಗಳನ್ನು ನೋಡಿದೆವು. ಒಂದು ಬಾವಿಯಲ್ಲಂತೂ ನಾವು 11 ಹೆಣಗಳನ್ನು ನೋಡಿದೆವು. ಮೊಲೆ ಹಾಲು ಕುಡಿಯಲು ಮೊಲೆಗೆ ಕಚ್ಚಿಕೊಂಡಿದ್ದ ಶಿಶು ಸಹಿತ ಸಾವನ್ನಪ್ಪಿದ್ದ ಮಹಿಳೆಯ ಹೆಣವೂ ಇದರಲ್ಲಿ ಸೇರಿದೆ.’’

ರಝಾಕಾರರ ಚಟುವಟಿಕೆಗಳ ಪ್ರದೇಶಗಳು, ಅದರ ಆಜೂಬಾಜಿನ ಜಿಲ್ಲೆಗಳ ಎಲ್ಲಾ ಮುಸ್ಲಿಮರೂ ತೀವ್ರ ಹಿಂಸಾಚಾರಕ್ಕೊಳಗಾದರು. ಕಾಸಿಂ ರಝ್ವಿಯ ಹುಟ್ಟೂರು, ವ್ಯಾಪಾರ ಕೇಂದ್ರವೂ ಆಗಿದ್ದ ಲಾತೂರಿನಲ್ಲಿ ಈ ಹಿಂಸಾಚಾರ ಮೂರು ವಾರಗಳ ಕಾಲ ನಡೆಯಿತು. ರಾಜ್ಯದ ಎಲ್ಲಾ ಜಿಲ್ಲೆಗಳ ಮುಸ್ಲಿಮರೂ ಆರ್ಥಿಕವಾಗಿ ಸರ್ವನಾಶವಾದರು. ಕೆಲಸದಿಂದ ಅವರನ್ನು ವಜಾ ಮಾಡಲಾಯಿತು. ಅವರ ವ್ಯಾಪಾರವನ್ನು ನಾಶ ಮಾಡಲಾಯಿತು. ಭಾರತದಿಂದಲೇ ಅವರನ್ನು ಓಡಿಸುವ ಸಂಘಟಿತ ಯತ್ನ ನಡೆಯಿತು.

ಪಾಕಿಸ್ತಾನಕ್ಕೆ ವಲಸೆ ಹೋದವರಿಗೆ ಅಲ್ಲೇನು ಭವ್ಯ ಸ್ವಾಗತ ದೊರಕಲಿಲ್ಲ.

ಪರ್ಮಿಟ್ ವ್ಯವಸ್ಥೆ ಮಾಡಿದ ಬಗ್ಗೆ ಪಾಕಿಸ್ತಾನದ ಗೃಹ ಖಾತೆ ತನ್ನ ಬೆನ್ನು ತಾನೇ ತಟ್ಟಿಕೊಂಡು, ಹೈದರಾಬಾದಿನಿಂದ ಪ್ರವಾಹದೋಪಾದಿ ಬರುವ ವಲಸಿಗರಿಂದ ಪಾಕಿಸ್ತಾನವನ್ನು ರಕ್ಷಿಸಲು, ಸಕಾಲದಲ್ಲಿ ಈ ವ್ಯವಸ್ಥೆ ಆರಂಭಿಸಿದ್ದು ಒಳಿತೇ ಆಯಿತು ಎಂದು ಹೇಳಿಕೊಂಡಿತು.

ಪರ್ಮಿಟ್ ವ್ಯವಸ್ಥೆ ರದ್ದು ಮಾಡಿದರೆ, ದೇಶವು ನಾಜೂಕಿನ ರಕ್ಷಣಾ ಸಮಸ್ಯೆ ಎದುರಿಸಬೇಕಾಗಿ ಬರಬಹುದು. ನಿರಾಶ್ರಿತರ ಸಮಸ್ಯೆ ಸೃಷ್ಟಿಸುವ ವೆಚ್ಚದ ಪ್ರಮಾಣ, ಯಾವುದೇ ಪರ್ಮಿಟ್ ವ್ಯವಸ್ಥೆಯ ಲೆಕ್ಕಕ್ಕೆ ಮೀರಿದ್ದು ಎಂದೂ ಹೇಳಿತು.

ಸೃಜನಶೀಲ ವರ್ಗದ ಮೇಲೆ ಈ ಪೊಲೀಸ್ ಕಾರ್ಯಾಚರಣೆಯ ಪರಿಣಾಮ ಇನ್ನೂ ಘೋರವಾಗಿತ್ತು. ಗಝಲ್ ಹಾಡುಗಾರರಾಗಿದ್ದ ರವೂಫ್ ಹಾಗೂ ವಿಠಲ ರಾವ್ ದಾತಾರರಿಲ್ಲದೆ ದಿಕ್ಕೆಟ್ಟರು. ಕವಿಗಳು, ಬರಹಗಾರರು, ಅನುವಾದಕರು ಮತ್ತಿತರರ ಆದಾಯ ಮೂಲಗಳೇ ಮುಚ್ಚಿ ಹೋದವು. ಅವರಿಗೆ ಅವಕಾಶ ಮರುಸೃಷ್ಟಿಯಾಗಲು ವರ್ಷಗಳೇ ಹಿಡಿದವು. ಲಕ್ನೊ ಮೂಲದ ಪಂಡಿತ, ಪತ್ರಕರ್ತ ಅಬ್ದುಲ್ ಮಜೀದ್ ದರ್ಯಾಬಾದಿ ಕೊಂಚ ಅದೃಷ್ಟ ಮಾಡಿದ್ದರು. 1950ರ ಅಕ್ಟೋಬರ್‌ನಲ್ಲಿ ಅವರ ಪಿಂಚಣಿ ಯಾವುದೇ ವಿವರಣೆ ಇಲ್ಲದೆ ನಿಲ್ಲಿಸಲಾಯಿತು. ಮೌಲನಾ ಅಬುಲ್ ಕಲಾಂ ಆಝಾದ್ ಹಲವಾರು ಪತ್ರಗಳನ್ನು ತತ್ಸಂಬಂಧಿತ ಇಲಾಖೆಗೆ ಬರೆದರೂ ಪ್ರಯೋಜನವಾಗಲಿಲ್ಲ. 1951ರಲ್ಲಿ ಪ್ರಧಾನಿ ನೆಹರೂ ವೈಯಕ್ತಿಕವಾಗಿ ಮಧ್ಯ ಪ್ರವೇಶ ಮಾಡಿದ ಮೇಲೆಯಷ್ಟೇ ಪಿಂಚಣಿ ಮತ್ತೆ ದೊರಕಿತು. ರಾಜಕೀಯ ಸಂಪರ್ಕ ಇದ್ದರವರಿಗೂ ಆಂಶಿಕವಾಗಿ ಅಷ್ಟೇ ಪ್ರಯೋಜನವಾಗಿದ್ದು. ಅಬ್ದುಲ್ ಮಜೀದ್ ಅವರಿಗೆ, ಮೊದಲು ದೊರಕುತ್ತಿದ್ದ ರೂ. 200 ಪಿಂಚಣಿಯನ್ನು ರೂ. 125ಕ್ಕೆ ಇಳಿಸಲಾಯಿತು.

ಅತ್ಯಂತ ನತದೃಷ್ಟ ಸ್ಥಿತಿಯಲ್ಲಿ ಹೈದರಾಬಾದಿನ ಮುಸ್ಲಿಮ ರಿದ್ದರೂ, ಕೋಮು ಸೌಹಾರ್ದ, ಭ್ರಾತೃತ್ವದ ಹತ್ತಾರು ಉದಾಹರಣೆಗಳು ದಾಖಲಾಗಿವೆ. ರಝಾಕಾರರ ಕಾರ್ಯಾಚರಣೆ ತೀವ್ರವಾಗಿದ್ದಾಗಲೂ, ಸ್ಥಳೀಯವಾಗಿ ಮುಸ್ಲಿಮರು ತಮ್ಮ ಹಿಂದೂ ನೆರೆಹೊರೆಯವರಿಗೆ ಯಾವ ಅಪಾಯವೂ ಆಗದಂತೆ ನೋಡಿಕೊಂಡಿದ್ದರು. ಸೂಫಿ ಆಧ್ಯಾತ್ಮಿಕ ನಾಯಕರು ಈ ರಕ್ಷಣೆಯ ಮುಂಚೂಣಿಯಲ್ಲಿದ್ದರು. ಪೋಲಿಸ್ ಕಾರ್ಯಾಚರಣೆ ಮತ್ತು ತರುವಾಯದ ದಿನಗಳಲ್ಲಿ ಹಿಂದೂಗಳೂ ಇದೇ ರೀತಿ ಮುಸ್ಲಿಮರನ್ನು ರಕ್ಷಿಸಿದರು.

ಪಂಡಿತ್ ಸುಂದರ್ ಲಾಲ್ ವರದಿಯು ಹಿಂದೂ ನೇಕಾರರು ಮುಸ್ಲಿಮ್ ನೇಕಾರರನ್ನು ರಕ್ಷಿಸಿದ್ದನ್ನು ದಾಖಲಿಸುತ್ತದೆ. ಮುಸ್ಲಿಮ್ ಮಹಿಳೆಯರ ಅಪಹರಣವಾದಾಗಲೂ ಹಿಂದೂಗಳು ಅವರನ್ನು ರಕ್ಷಿಸಿದ್ದರು.

ಇಂಥಾ ಕೋಮು ಸೌಹಾರ್ದ, ಭ್ರಾತೃತ್ವದ ಕತೆಗಳನ್ನು ನಾವು, ಈ ಚುನಾವಣಾ ವರ್ಷದಲ್ಲಿ ಹೆಚ್ಚು ಹೆಚ್ಚು ಪ್ರಚುರಪಡಿಸಬೇಕಿದೆ.

(ಮುಹಮ್ಮದ್ ಅಯೂಬ್ ಖಾನ್ ದಕ್ಷಿಣ ಏಶ್ಯದ ಮುಸ್ಲಿಮ್ ರಾಜಕೀಯ ಮತ್ತು ಚರಿತ್ರೆಯ ಸಂಶೋಧಕರು. ಸಾರ್ವಜನಿಕ ಆಡಳಿತ, ಧಾರ್ಮಿಕ ಅಲ್ಪಸಂಖ್ಯಾತರಿಗೆ ಸಾಂವಿಧಾನಿಕ ಅವಕಾಶಗಳು ಇವರ ಆಸಕ್ತಿಯ ಕ್ಷೇತ್ರಗಳು.)

share
ಮುಹಮ್ಮದ್ ಅಯೂಬ್ ಖಾನ್
ಮುಹಮ್ಮದ್ ಅಯೂಬ್ ಖಾನ್
Next Story
X