ಡ್ರೀಮ್ಸ್ ಇಂಡಿಯಾ ಫೌಂಡೇಶನ್ ವತಿಯಿಂದ ಇಫ್ತಾರ್ ಕೂಟ

ಉಳ್ಳಾಲ: ಡ್ರೀಮ್ಸ್ ಇಂಡಿಯಾ ಫೌಂಡೇಶನ್ ಹಳೆಕೋಟೆ ಉಳ್ಳಾಲ ಇದರ ವತಿಯಿಂದ ಬೃಹತ್ ಇಫ್ತಾರ್ ಕೂಟವು ಅಲ್‌ಕರೀಮ್ ಜುಮಾ ಮಸೀದಿ ಹಳೇಕೋಟೆಯಲ್ಲಿ ನಡೆಯಿತು.
ಅಲ್‌ಕರೀಮ್ ಜುಮಾ ಮಸೀದಿ ಹಳೆಕೋಟೆ ಅಧ್ಯಕ್ಷ ಹಾಜಿ ಮುಹಮ್ಮದ್ ತ್ವಾಹ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಖತೀಬರಾದ ಹಾಫಿಳ್ ಸಿರಾಜುದ್ದೀನ್ ಹಿಮಮಿ ದುಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಡ್ರೀಮ್ಸ್ ಇಂಡಿಯಾ ಫೌಂಡೇಶನ್ ಇದರ ಅಧ್ಯಕ್ಷ ಶರೀಫ್, ಕಾರ್ಯದರ್ಶಿ ಸಫ್ವಾನ್ ,ಅಬ್ದುಲ್ ರವೂಫ್ , ಫಾರೂಕ್ ಯು.ಎಚ್.,ಆದಂ ಮುಸ್ಲಿಯಾರ್, ಶಮೀರ್,ರಿಯಾಝ್ ಪಿ.ಪಿ. ಇಕ್ಬಾಲ್ ಹಳೆಕೋಟೆ ಶರೀಫ್, ಎಸ್‌ಎಮ್,ರಹೀಂ,ರಹ್ಮತ್ ಹಳೆಕೋಟೆ ಮತ್ತಿತರರು ಉಪಸ್ಥಿತರಿದ್ದರು.
Next Story





