ಭಾರತೀಯ ಉದ್ಯಮಶೀಲತಾ ಅಭಿವೃದ್ಧಿ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಬೆಂಗಳೂರು ನಗರದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾಗಿರುವ ಭಾರತೀಯ ಉದ್ಯಮಶೀಲತಾ ಅಭಿವೃದ್ಧಿ ಸಂಸ್ಥೆ (EDII) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
📌 ಪ್ರಮುಖ ದಿನಾಂಕಗಳು
ಅಧಿಸೂಚನೆ ಹೊರಬಿದ್ದ ದಿನಾಂಕ: 09 ಏಪ್ರಿಲ್ 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 19 ಏಪ್ರಿಲ್ 2026
📌 ಒಟ್ಟು ಹುದ್ದೆಗಳು
02
📌 ಹುದ್ದೆಗಳ ವಿವರ
ಬೆಂಗಳೂರು ಕಚೇರಿಯಲ್ಲಿ ಪ್ರಾಜೆಕ್ಟ್ ಆಫೀಸರ್ ಮತ್ತು ಪ್ರಾಜೆಕ್ಟ್ ಕೋಆರ್ಡಿನೇಟರ್ ಹುದ್ದೆಗಳು ಲಭ್ಯವಿವೆ. ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ.
📌 ಶೈಕ್ಷಣಿಕ ಅರ್ಹತೆ
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ, ಸ್ನಾತಕೋತ್ತರ ಪದವಿ ಅಥವಾ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.
📌 ಆಯ್ಕೆ ಪ್ರಕ್ರಿಯೆ
ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
📌 ಅರ್ಜಿ ಸಲ್ಲಿಸುವುದು ಹೇಗೆ?
1. ಮೊದಲಿಗೆ ಅಧಿಕೃತ ವೆಬ್‌ಸೈಟ್ ediindia.org ಗೆ ಭೇಟಿ ನೀಡಿ ಅಧಿಸೂಚನೆಯನ್ನು ಸರಿಯಾಗಿ ಓದಿಕೊಳ್ಳಿ.
2. ನಿಮ್ಮ ಇತ್ತೀಚಿನ ಅಪ್‌ಡೇಟ್ ಆಗಿರುವ ರೆಸ್ಯುಮ್ (ವೈಯಕ್ತಿಕ ವಿವರಗಳು) ಮತ್ತು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ.
3. ನಿಮ್ಮ ಅರ್ಜಿಯನ್ನು hrsro@ediindia.org ಎಂಬ ಇ-ಮೇಲ್ ವಿಳಾಸಕ್ಕೆ ಕಳುಹಿಸಬೇಕು.
4. ಇ-ಮೇಲ್ ಕಳುಹಿಸುವಾಗ ಸಬ್ಜೆಕ್ಟ್ ಲೈನ್ ನಲ್ಲಿ ನೀವು ಅರ್ಜಿ ಸಲ್ಲಿಸುತ್ತಿರುವ ಹುದ್ದೆಯ ಹೆಸರನ್ನು ತಪ್ಪದೇ ಉಲ್ಲೇಖಿಸಬೇಕು.
📌 ವೇತನ
ತಿಂಗಳಿಗೆ 40,000 – 55,000 ರೂ. ವೇತನ ನೀಡಲಾಗುತ್ತದೆ.






