ಬೆಳಗಾವಿ ಜಿಲ್ಲಾ ಪಂಚಾಯತ್ ನೇಮಕಾತಿ; ಯಾರು ಅರ್ಜಿ ಸಲ್ಲಿಸಬಹುದು?

Photo Credit ; facebook \ @ZPBGM
ಜಿಲ್ಲಾ ವ್ಯವಸ್ಥಾಪಕ, ಕ್ಲಸ್ಟರ್ ಮೇಲ್ವಿಚಾರಕ ಹುದ್ದೆಗಳಿಗೆ ಆಯಾ ಕ್ಷೇತ್ರಗಳಲ್ಲಿ ಅನುಭವಿಗಳು ಅರ್ಜಿ ಸಲ್ಲಿಸಬಹುದು.
ಕರ್ನಾಟಕದಲ್ಲಿ ಸರ್ಕಾರಿ ವಲಯದಲ್ಲಿ ವೃತ್ತಿಜೀವನ ಬಯಸುತ್ತಿರುವವರಿಗೆ ಶುಭ ಸುದ್ದಿ ದೊರೆತಿದೆ. ಬೆಳಗಾವಿ ಜಿಲ್ಲಾ ಪಂಚಾಯತ್ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಜಿಲ್ಲಾ ವ್ಯವಸ್ಥಾಪಕ, ಕ್ಲಸ್ಟರ್ ಮೇಲ್ವಿಚಾರಕ ಹುದ್ದೆಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಅನುಭವಿಗಳು ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು ಈ ಮುಂದಿನ ಲಿಂಕ್ ಬಳಸಿ ಅರ್ಜಿ ಸಲ್ಲಿಸಬಹುದು: https://jobsksrlps.karnataka.gov.in/
📌ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಆರಂಭದ ದಿನಾಂಕ: 01 ಜುಲೈ 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15 ಜುಲೈ 2026
📌ಪ್ರಮುಖ ವಿವರಗಳು
• ಸಂಸ್ಥೆಯ ಹೆಸರು: ಬೆಳಗಾವಿ ಜಿಲ್ಲಾ ಪಂಚಾಯತ್
• ಹುದ್ದೆಯ ಹೆಸರು: ಜಿಲ್ಲಾ ವ್ಯವಸ್ಥಾಪಕ, ಕ್ಲಸ್ಟರ್ ಮೇಲ್ವಿಚಾರಕ
• ಒಟ್ಟು ಹುದ್ದೆಗಳ ಸಂಖ್ಯೆ: 17
• ಉದ್ಯೋಗ ಸ್ಥಳ: ಬೆಳಗಾವಿ (ಕರ್ನಾಟಕ)
📌ಉದ್ಯೋಗ ವಿವರ
ಬೆಳಗಾವಿ- ಚಿಕ್ಕೋಡಿ ವಿಭಾಗ
• ಜಿಲ್ಲಾ ಪ್ರೋಗ್ರಾಂ ಮ್ಯಾನೇಜರ್- 1 ಖಾಲಿ ಹುದ್ದೆ
• ಜಿಲ್ಲಾ ವ್ಯವಸ್ಥಾಪಕ- ಸೋಷಿಯಲ್ ಮೊಬಿಲೈಸೇಶನ್ & ಸೋಷಿಯಲ್ ಡೆವಲಪ್ಮೆಂಟ್- 1 ಖಾಲಿ ಹುದ್ದೆ
• ಜಿಲ್ಲಾ ವ್ಯವಸ್ಥಾಪಕ- ಫಾರ್ಮ್ ಲೈವ್ಲಿಹುಡ್- 1 ಖಾಲಿ ಹುದ್ದೆ
• ಜಿಲ್ಲಾ ವ್ಯವಸ್ಥಾಪಕ- ಸ್ಕಿಲ್ಸ್ & ಎಂಟರ್ಪ್ರ್ಯೂನರ್ಶಿಪ್- 1 ಖಾಲಿ ಹುದ್ದೆ
• ಜಿಲ್ಲಾ ಎಂಐಎಸ್ ಅಸಿಸ್ಟಂಟ್ ಕಮ್ ಡಿಇಒ- 1 ಖಾಲಿ ಹುದ್ದೆ
• ತಾಲೂಕು ಪ್ರೋಗ್ರಾಂ ಮ್ಯಾನೇಜರ್- 1 ಖಾಲಿ ಹುದ್ದೆ
ಬೆಳಗಾವಿ-ಬೈಲಹೊಂಗಲ
• ತಾಲೂಕು ಪ್ರೋಗ್ರಾಂ ಮ್ಯಾನೇಜರ್-ಎಸ್ವಿಇಪಿ-1 ಖಾಲಿ ಹುದ್ದೆ
ಬೆಳಗಾವಿ- ಅಥಣಿ
• ಬ್ಲಾಕ್ ಮ್ಯಾನಜರ್- ಫಾರ್ಮ್ ಲೈವ್ಲಿಹುಡ್ಸ್-1 ಖಾಲಿ ಹುದ್ದೆ
ಬೆಳಗಾವಿ- ಬೆಳಗಾವಿ, ರಾಮದುರ್ಗ, ಸವದತ್ತಿ, ರಾಯಭಾಗ
• ಬ್ಲಾಕ್ ಮ್ಯಾನೇಜರ್- ಫಾರ್ಮ್ ಲೈವ್ಲಿಹುಡ್ಸ್-1 ಖಾಲಿ ಹುದ್ದೆ
ಬೆಳಗಾವಿ- ರಾಯಭಾಗ, ರಾಮದುರ್ಗ, ಸವದತ್ತಿ
• ಬ್ಲಾಕ್ ಮ್ಯಾನೇಜರ್- ನಾನ್-ಫಾರ್ಮ್ ಲೈವ್ಲಿಹುಡ್ಸ್-1 ಖಾಲಿ ಹುದ್ದೆ
ಬೆಳಗಾವಿ- ರಾಯಭಾಗ
• ಕ್ಲಸ್ಟರ್ ಸುಪರ್ವೈಸರ್-1 ಖಾಲಿ ಹುದ್ದೆ
ಬೆಳಗಾವಿ- ಅಥಣಿ, ಹುಕ್ಕೇರಿ,
• ಕ್ಲಸ್ಟರ್ ಸುಪರ್ವೈಸರ್- ಸ್ಕಿಲ್ಸ್-1 ಖಾಲಿ ಹುದ್ದೆ
📌ಶೈಕ್ಷಣಿಕ ಅರ್ಹತೆ ಏನಾಗಿರಬೇಕು?
ವಿವಿಧ ಹುದ್ದೆಗಳಿಗೆ ವಿವಿಧ ಶೈಕ್ಷಣಿಕ ಅರ್ಹತೆ ಇದೆ. ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಪದವಿ, ಕೃಷಿ ಪದವಿ, ಬಿ.ಎಸ್ಸಿ, ಎಂ.ಎಸ್ಸಿ, ಎಂಎಸ್ಡಬ್ಲ್ಯೂ, ಎಂಬಿಎ, ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರಬೇಕು. ವಿವಿಧ ಹುದ್ದೆಗಳಿಗೆ ವಿವಿಧ ಅನುಭವಗಳ ಅಗತ್ಯವಿದೆ. ಮಾಸಿಕ 18,000 ರೂ. ನಿಂದ 35,000 ರೂ. ವರೆಗೆ ವೇತನ ನೀಡಲಾಗುತ್ತದೆ. ಈ ಹುದ್ದೆಗೆ ಯಾವುದೇ ಅರ್ಜಿ ಶುಲ್ಕವಿಲ್ಲ. ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
📌ವಯೋಮಿತಿ
• ಅಭ್ಯರ್ಥಿಯು ಕನಿಷ್ಠ 18 ವರ್ಷ ಮತ್ತು ಗರಿಷ್ಠ 45 ವರ್ಷ ವಯೋಮಿತಿಯನ್ನು ಹೊಂದಿರಬೇಕು.
📌ಅರ್ಜಿ ಸಲ್ಲಿಸುವುದು ಹೇಗೆ?
• ಮೊದಲು ಅಧಿಕೃತ ವೆಬ್ಸೈಟ್ಗೆ ( https://jobsksrlps.karnataka.gov.in/ ) ಭೇಟಿ ನೀಡಿ, ಅಧಿಸೂಚನೆಯನ್ನು ಪೂರ್ತಿಯಾಗಿ ಓದಿಕೊಳ್ಳಿ.
• ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ಬಳಿ ಚಾಲ್ತಿಯಲ್ಲಿರುವ ಇಮೇಲ್ ಐಡಿ, ಮೊಬೈಲ್ ಸಂಖ್ಯೆ ಹಾಗೂ ಆಧಾರ್ ಕಾರ್ಡ್ ಇಟ್ಟುಕೊಳ್ಳಿ.
• ಶೈಕ್ಷಣಿಕ ದಾಖಲೆಗಳು, ರೆಸ್ಯೂಮ್ ಮತ್ತು ಭಾವಚಿತ್ರದ ಸ್ಕ್ಯಾನ್ ಪ್ರತಿಗಳನ್ನು ಸಿದ್ಧವಾಗಿಟ್ಟುಕೊಳ್ಳಿ.
• ಕೆಳಗೆ ನೀಡಿರುವ ಆನ್ಲೈನ್ ಲಿಂಕ್ ಕ್ಲಿಕ್ ಮಾಡಿ, ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿ.
• ಕೊನೆಯದಾಗಿ ‘Submit’ ಬಟನ್ ಒತ್ತುವ ಮೂಲಕ ಪ್ರಕ್ರಿಯೆ ಮುಗಿಸಿ ಮತ್ತು ಮುಂದಿನ ಉಲ್ಲೇಖಕ್ಕಾಗಿ ಅಪ್ಲಿಕೇಶನ್ನ ಪ್ರಿಂಟ್ ತೆಗೆದುಕೊಳ್ಳಿ.






