ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನೇಮಕಾತಿ 2026; ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ

Photo Credit : bellarydcc.bank.in
ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಎಚ್ಚರಿಕೆಯಿಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ 2026ರಲ್ಲಿ ಖಾಲಿ ಇರುವ ವಿವಿಧ ವೃಂದಗಳ ಒಟ್ಟು 82 ಹುದ್ದೆಗಳ ನೇರ ನೇಮಕಾತಿಗಾಗಿ ಪರಿಷ್ಕೃತ ಅಧಿಸೂಚನೆ ಪ್ರಕಟಿಸಿದೆ. ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳು ನಿಗದಿಪಡಿಸಿರುವ ದಿನಾಂಕದೊಳಗೆ, ಅಂದರೆ ಜೂನ್ 30, 2026ರ ಒಳಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಈ ಹಿಂದೆ 2026ರ ಏಪ್ರಿಲ್ 6ರಂದು ಪ್ರಕಟಗೊಂಡಿದ್ದ ಅಧಿಸೂಚನೆಗೆ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಿದ್ದ ಅಭ್ಯರ್ಥಿಗಳು ಈಗ ಹೊಸದಾಗಿ ಮರುಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ. ಆದರೆ ಅವರು ಮತ್ತೊಮ್ಮೆ ಶುಲ್ಕ ಪಾವತಿಸುವ ಅಗತ್ಯವಿರುವುದಿಲ್ಲ. ಈಗಾಗಲೇ ಅರ್ಜಿ ಸಲ್ಲಿಸಿರುವ ಪ್ರತಿಯೊಂದು ಹುದ್ದೆಗೂ ಮರುಅರ್ಜಿ ಸಲ್ಲಿಸತಕ್ಕದ್ದು. ಒಂದು ವೇಳೆ ಮರುಅರ್ಜಿ ಸಲ್ಲಿಸದಿದ್ದಲ್ಲಿ ಅಂತಹವರ ಅರ್ಜಿಯನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ ಹಾಗೂ ಪಾವತಿಸಿರುವ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ.
ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮಾಹಿತಿಯನ್ನು ಕೆಳಗಿನಂತೆ ವಿಸ್ತೃತವಾಗಿ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಎಚ್ಚರಿಕೆಯಿಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
►ಪ್ರಮುಖ ದಿನಾಂಕಗಳು
• ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 2026 ಜೂನ್ 1
• ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 2026 ಜೂನ್ 30
ಪ್ರಮುಖ ಲಿಂಕ್ ಗಳು
• ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಕೆಗೆ: https://manageexam.com/BDCCB/index.html
• ಇಮೇಲ್ ಮೂಲಕ ಅರ್ಜಿ ಸಲ್ಲಿಕೆ: online@bellarydcc.bank.in
• ವೆಬ್ಸೈಟ್: www.bellarydcc.bank.in
►ಸಂಕ್ಷಿಪ್ತ ವಿವರ
• ನೇಮಕಾತಿ ಸಂಸ್ಥೆ: ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ., ಹೊಸಪೇಟೆ (ಬಿಡಿಸಿಸಿ ಬ್ಯಾಂಕ್)
• ವೇತನ ಶ್ರೇಣಿ: 29,000 ರೂ.ನಿಂದ 83,700 ರೂ.
• ಹುದ್ದೆಗಳ ಸಂಖ್ಯೆ: 82
• ಉದ್ಯೋಗ ಸ್ಥಳ: ಬಳ್ಳಾರಿ/ಹೊಸಪೇಟೆ
►ಹುದ್ದೆಗಳ ವಿವರ, ವೇತನ ಶ್ರೇಣಿ ಮತ್ತು ಶೈಕ್ಷಣಿಕ ಅರ್ಹತೆ
1. ವ್ಯವಸ್ಥಾಪಕರು / ಪ್ರಥಮ ದರ್ಜೆ ಸಹಾಯಕರು
• ಹುದ್ದೆಗಳು: 22
• ಶೈಕ್ಷಣಿಕ ಅರ್ಹತೆ: ಭಾರತದ ಕಾನೂನಿನ ಅನ್ವಯ ಸ್ಥಾಪನೆಯಾದ ವಿಶ್ವವಿದ್ಯಾಲಯದ ಯಾವುದೇ ಪದವಿಯಲ್ಲಿ ತೇರ್ಗಡೆಯಾಗಿರಬೇಕು ಹಾಗೂ ಕಂಪ್ಯೂಟರ್ ನಿರ್ವಹಣೆಯ ಬಗ್ಗೆ ಜ್ಞಾನ ಹೊಂದಿರತಕ್ಕದ್ದು.
2. ದ್ವಿತೀಯ ದರ್ಜೆ ಸಹಾಯಕರು
• ಹುದ್ದೆಗಳು: 28
• ಶೈಕ್ಷಣಿಕ ಅರ್ಹತೆ: ಎಸ್ಎಸ್ಎಲ್ಸಿಯಲ್ಲಿ ಉತ್ತೀರ್ಣರಾಗಿದ್ದು, ಕಾನೂನುಬದ್ಧ ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು.
3. ಕಿರಿಯ ಸೇವಕರು
• ಹುದ್ದೆಗಳು: 31
• ಶೈಕ್ಷಣಿಕ ಅರ್ಹತೆ: ಎಸ್ಎಸ್ಎಲ್ಸಿಯಲ್ಲಿ ಉತ್ತೀರ್ಣರಾಗಿದ್ದು, ಕನ್ನಡವನ್ನು ಒಂದು ಭಾಷೆಯಾಗಿ ಓದಿರಬೇಕು.
ಗಮನಿಸಿ:
ಎಲ್ಲ ಹುದ್ದೆಗಳಿಗೂ ಕನ್ನಡ ಭಾಷೆ ಓದುವ ಸಾಮರ್ಥ್ಯದ ಜೊತೆಗೆ ಕನ್ನಡದ ಜ್ಞಾನ, ಬರೆಯುವ, ಸ್ವಚ್ಛವಾಗಿ ಮಾತನಾಡುವ ಹಾಗೂ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಕಡ್ಡಾಯವಾಗಿರುತ್ತದೆ.
ವಯೋಮಿತಿ ಹಾಗೂ ವಯೋಮಿತಿ ಸಡಿಲಿಕೆ
ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯಸ್ಸನ್ನು ಹೊಂದಿರಬೇಕು.
ಸರ್ಕಾರದ ಅಧಿಸೂಚನೆಯ ಆದೇಶದನ್ವಯ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆ ನೀಡಲಾಗಿದೆ.
ಇದರನ್ವಯ ಸಡಿಲಿಕೆಯ ನಂತರದ ಗರಿಷ್ಠ ವಯಸ್ಸು ಸಾಮಾನ್ಯ ಅಭ್ಯರ್ಥಿಗಳಿಗೆ 40 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 43 ವರ್ಷ ಹಾಗೂ ಎಸ್ಸಿ/ಎಸ್ಟಿ ಮತ್ತು ಪ್ರವರ್ಗ-1ರ ಅಭ್ಯರ್ಥಿಗಳಿಗೆ 45 ವರ್ಷ ನಿಗದಿಯಾಗಿದೆ. ಪಿಡಬ್ಲ್ಯುಡಿ ಮತ್ತು ವಿಧವೆ ಅಭ್ಯರ್ಥಿಗಳಿಗೆ 10 ವರ್ಷಗಳ ಹೆಚ್ಚುವರಿ ಸಡಿಲಿಕೆ ಇರುತ್ತದೆ.
►ಆಯ್ಕೆ ವಿಧಾನ
ಬಾಹ್ಯ ಮೂಲ ಸಂಸ್ಥೆಯಿಂದ ಲಿಖಿತ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುವುದು. ವ್ಯವಸ್ಥಾಪಕರು ಮತ್ತು ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಿಗೆ 200 ಅಂಕಗಳ ಲಿಖಿತ ಪರೀಕ್ಷೆ ಇರುತ್ತದೆ. (ಕನ್ನಡ - 50, ಇಂಗ್ಲಿಷ್ - 25, ಸಾಮಾನ್ಯ ಜ್ಞಾನ - 25, ಸಹಕಾರ ವಿಷಯ - 50, ಸಂವಿಧಾನ - 25, ಬ್ಯಾಂಕಿಂಗ್ - 25 ಅಂಕಗಳು).
ವಾಹನ ಚಾಲಕ ಮತ್ತು ಕಿರಿಯ ಸೇವಕ ಹುದ್ದೆಗಳಿಗೆ 100 ಅಂಕಗಳ ಲಿಖಿತ ಪರೀಕ್ಷೆ ಇರುತ್ತದೆ. (ಕನ್ನಡ - 50, ಸಾಮಾನ್ಯ ಜ್ಞಾನ - 50).
ಲಿಖಿತ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಶೇ 85ಕ್ಕೆ ಇಳಿಸಿ, ಪ್ರಾಪ್ತವಾಗುವ ಅಂಕಗಳ ಶೇಕಡಾವಾರು ಆಧಾರದ ಮೇಲೆ ಅಭ್ಯರ್ಥಿಗಳನ್ನು 1:5ರ ಅನುಪಾತದಲ್ಲಿ ಸಂದರ್ಶನಕ್ಕೆ ಕರೆಯಲಾಗುವುದು.
ಸಂದರ್ಶನಕ್ಕೆ 15 ಅಂಕಗಳನ್ನು ನಿಗದಿಪಡಿಸಿದ್ದು, ಎರಡೂ ಹಂತಗಳಲ್ಲಿ ಪಡೆದ ಅಂಕಗಳನ್ನು ಸೇರಿಸಿ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗುವುದು.
►ಅರ್ಜಿ ಶುಲ್ಕ ಹಾಗೂ ಪಾವತಿ ವಿಧಾನ
ಸಾಮಾನ್ಯ ಮತ್ತು ಇತರೆ ಪ್ರವರ್ಗಗಳ (2ಎ, 2ಬಿ, 3ಎ, 3ಬಿ) ಅಭ್ಯರ್ಥಿಗಳಿಗೆ ₹1,000 ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ವಿಕಲಚೇತನ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ₹500 ಶುಲ್ಕ ನಿಗದಿಪಡಿಸಲಾಗಿದೆ. (ಗೇಟ್ವೇ ಶುಲ್ಕ ಪ್ರತ್ಯೇಕ ಇರುತ್ತದೆ).
ಅರ್ಜಿ ಶುಲ್ಕವನ್ನು ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಯುಪಿಐ ಅಥವಾ ಗೂಗಲ್ ಪೇ ಮುಖಾಂತರ ಆನ್ಲೈನ್ ನಲ್ಲಿಯೇ ಪಾವತಿಸಬೇಕು. ಇತರೆ ಯಾವುದೇ ಮೂಲದಲ್ಲಿ ಶುಲ್ಕವನ್ನು ಸ್ವೀಕರಿಸಲಾಗುವುದಿಲ್ಲ.






