ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ; ಯಾರು ಅರ್ಜಿ ಸಲ್ಲಿಸಬಹುದು?

Photo Credit : Central Bank of India
ರಾಜ್ಯವಾರು ಖಾಲಿ ಹುದ್ದೆಗಳ ವಿವರಗಳು ಅಧಿಸೂಚನೆಯ ಅನುಬಂಧ 1ರಲ್ಲಿವೆ. ಖಾಲಿ ಹುದ್ದೆಗಳ ಸಂಖ್ಯೆಗಳು ತಾತ್ಕಾಲಿಕವಾಗಿದ್ದು, ನಿಜವಾದ ಅಗತ್ಯವನ್ನು ಆಧರಿಸಿ ಬದಲಾಗಬಹುದು.
4,500 ಕ್ಕೂ ಹೆಚ್ಚು ಶಾಖೆಗಳು ಮತ್ತು 34,000+ ಉದ್ಯೋಗಿಗಳನ್ನು ಹೊಂದಿರುವ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 1961ರ ಅಪ್ರೆಂಟಿಸ್ಗಳ ಕಾಯ್ದೆಯ ಅಡಿಯಲ್ಲಿ ಅಪ್ರೆಂಟಿಸ್ಶಿಪ್ ತೊಡಗಿಸಿಕೊಳ್ಳುವಿಕೆಗಾಗಿ ಅರ್ಜಿಗಳನ್ನು ಆಹ್ವಾನಿಸುತ್ತಿದೆ. ಈ ಕಾರ್ಯಕ್ರಮವನ್ನು 2026-27ನೇ ಹಣಕಾಸು ವರ್ಷದ ನ್ಯಾಂಕಿನ ಹ್ಯೂಮನ್ ಕ್ಯಾಪಿಟಲ್ ಮ್ಯಾನೇಜ್ಮೆಂಟ್ (ನೇಮಕಾತಿ & ಬಡ್ತಿ) ಯೋಜನೆಯ ಅನುಸಾರ ಹಮ್ಮಿಕೊಳ್ಳಲಾಗಿದೆ. ಆಯ್ದ ಅಪ್ರೆಂಟಿಸ್ಗಳನ್ನು ಬ್ಯಾಂಕಿನ ವಿವೇಚನೆಗೆ ತಕ್ಕಂತೆ ಭಾರತದಾದ್ಯಂತ ಶಾಖೆಗಳು/ಕಚೇರಿಗಳಲ್ಲಿ ನೇಮಿಸಿಕೊಳ್ಳಲಾಗುತ್ತದೆ.
ರಾಜ್ಯವಾರು ಖಾಲಿ ಹುದ್ದೆಗಳ ವಿವರಗಳು ಅಧಿಸೂಚನೆಯ ಅನುಬಂಧ 1ರಲ್ಲಿವೆ. ಖಾಲಿ ಹುದ್ದೆಗಳ ಸಂಖ್ಯೆಗಳು ತಾತ್ಕಾಲಿಕವಾಗಿದ್ದು, ನಿಜವಾದ ಅಗತ್ಯವನ್ನು ಆಧರಿಸಿ ಬದಲಾಗಬಹುದು. ಮೀಸಲಾತಿ ವರ್ಗದ ಅಭ್ಯರ್ಥಿಗಳು ತಮ್ಮ ರಾಜ್ಯಗಳಲ್ಲಿ ಘೋಷಿಸಲಾದ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು ಈ ಮುಂದಿನ ಲಿಂಕ್ ಬಳಸಿ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಾಗುತ್ತದೆ.
ಅಭ್ಯರ್ಥಿಗಳು 22 ಜೂನ್ 2026 ರೊಳಗಾಗಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಗಳಿಗೆ ಅನುಗುಣವಾಗಿ ವಯೋಮಿತಿ, ಶೈಕ್ಷಣಿಕ ಅರ್ಹತೆ, ವೇತನ ಶ್ರೇಣಿ ಹಾಗೂ ಆಯ್ಕೆ ಪ್ರಕ್ರಿಯೆಯ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
📌 ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 12 ಜೂನ್ 2026
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 22 ಜೂನ್ 2026
ಪರೀಕ್ಷೆಯ ದಿನಾಂಕ: 2026 ಜುಲೈ ಮೊದಲನೇ ವಾರ
📌 ಪ್ರಮುಖ ಲಿಂಕ್ಗಳು
ನೋಂದಣಿ ಲಿಂಕ್: https://nats.education.gov.in/
BFSI SSC ಪೋರ್ಟಲ್ಗಾಗಿ ಆನ್ಲೈನ್ ಅರ್ಜಿ ಲಿಂಕ್: https://bfsissc.com/
BEEP ಪೋರ್ಟಲ್ಗಾಗಿ ಆನ್ಲೈನ್ ಅರ್ಜಿ ಲಿಂಕ್: https://beep.bfsissc.com/
ಅಧಿಕೃತ ವೆಬ್ಸೈಟ್: centralbankofindia.co.in
📌 ಸಂಕ್ಷಿಪ್ತ ವಿವರ
ನೇಮಕಾತಿ ಸಂಸ್ಥೆ: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
ಹುದ್ದೆಯ ಹೆಸರು: ಅಪ್ರೆಂಟಿಸ್ (Apprentice)
ಒಟ್ಟು ಹುದ್ದೆಗಳ ಸಂಖ್ಯೆ: 4,500
ಉದ್ಯೋಗ ಸ್ಥಳ: ಅಖಿಲ ಭಾರತ
ಮಾಸಿಕ ವೇತನ: ರೂ. 15,000/-
📌 ಹುದ್ದೆಗಳ ವಿವರ
📌 ಶೈಕ್ಷಣಿಕ ಅರ್ಹತೆ
ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಡ್ಡಾಯವಾಗಿ ಪದವಿ (ಉಡಿಚಿಜuಚಿಣioಟಿ) ಪೂರ್ಣಗೊಳಿಸಿರಬೇಕು.
📌 ವಯೋಮಿತಿ
ಅಭ್ಯರ್ಥಿಯು 31 ಮೇ 2026 ರಂತೆ ಕನಿಷ್ಠ 20 ವರ್ಷ ಮತ್ತು ಗರಿಷ್ಠ 28 ವರ್ಷ ವಯಸ್ಸಿನವರಾಗಿರಬೇಕು.
ವಯೋಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳಿಗೆ: 3 ವರ್ಷಗಳು
ಎಸ್ಸಿ / ಎಸ್ಟಿ ಅಭ್ಯರ್ಥಿಗಳಿಗೆ: 5 ವರ್ಷಗಳು
ಪಿಡಬ್ಲ್ಯೂಬಿಡಿ (ಸಾಮಾನ್ಯ) ಅಭ್ಯರ್ಥಿಗಳಿಗೆ: 10 ವರ್ಷಗಳು
ಪಿಡಬ್ಲ್ಯೂಬಿಡಿ (ಒಬಿಸಿ) ಅಭ್ಯರ್ಥಿಗಳಿಗೆ: 13 ವರ್ಷಗಳು
ಪಿಡಬ್ಲ್ಯೂಬಿಡಿ (ಎಸ್ಸಿ/ಎಸ್ಟಿ) ಅಭ್ಯರ್ಥಿಗಳಿಗೆ: 15 ವರ್ಷಗಳು
📌 ಅರ್ಜಿ ಶುಲ್ಕ
ಸಾಮಾನ್ಯ / ಇಡಬ್ಲ್ಯೂಎಸ್ / ಒಬಿಸಿ (ಪುರುಷ) ಅಭ್ಯರ್ಥಿಗಳಿಗೆ: ರೂ. 800/- (+ಉSಖಿ)
ಸಾಮಾನ್ಯ / ಇಡಬ್ಲ್ಯೂಎಸ್ / ಒಬಿಸಿ (ಮಹಿಳಾ) ಅಭ್ಯರ್ಥಿಗಳಿಗೆ: ರೂ. 600/- (+ಉSಖಿ)
ಎಸ್ಸಿ / ಎಸ್ಟಿ / ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ: ರೂ. 200/- (+ಉSಖಿ)
(ಪಾವತಿ ವಿಧಾನ: ಆನ್ಲೈನ್ ಮೂಲಕ ಮಾತ್ರ ಪಾವತಿಸತಕ್ಕದ್ದು).






