ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ; ಯಾರು ಅರ್ಜಿ ಸಲ್ಲಿಸಬಹುದು?

Photo Credit : Karnataka police
ಹುದ್ದೆಗಳಿಗೆ ಸಂಬಂಧಿಸಿ ಶೈಕ್ಷಣಿಕ ಅರ್ಹತೆ, ವಯೋಮಿತಿ, ದೈಹಿಕ ಅರ್ಹತೆ, ವೇತನ ಶ್ರೇಣಿ ಮತ್ತು ಪ್ರಮುಖ ದಿನಾಂಕಗಳ ವಿವರ ಇಲ್ಲಿದೆ.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 3,991 ಪೊಲೀಸ್ ಕಾನ್ಸ್ಟೇಬಲ್ (ಸಿವಿಲ್) ಹುದ್ದೆಗಳ ನೇರ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ.
ಕಲ್ಯಾಣ ಕರ್ನಾಟಕ ಮತ್ತು ಉಳಿಕೆ ಮೂಲ ವೃಂದದಲ್ಲಿನ (ಆರ್ಪಿಸಿ) ಈ ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಸ್ಪರ್ಧಾತ್ಮಕ ಲಿಖಿತ ಪರೀಕ್ಷೆಯನ್ನು ನಡೆಸಲಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಮುಂದಿನ ಲಿಂಕ್ನಲ್ಲಿ ಅರ್ಜಿ ಸಲ್ಲಿಸಬಹುದು.
📌ಪ್ರಮುಖ ಲಿಂಕ್ಗಳು
ಆನ್ಲೈನ್ ಅರ್ಜಿ ಸಲ್ಲಿಕೆ ಲಿಂಕ್ ಉಳಿಕ ವೃಂದ: https://cetonline.karnataka.gov.in/KEA_CPC_RPC/
ಆನ್ಲೈನ್ ಅರ್ಜಿ ಸಲ್ಲಿಕೆ ಲಿಂಕ್ ಕಲ್ಯಾಣ ಕರ್ನಾಟಕ: https://cetonline.karnataka.gov.in/KEA_CPC_KK
ಅಧಿಕೃತ ವೆಬ್ಸೈಟ್: https://cetonline.karnataka.gov.in/kea/
📌ಪ್ರಮುಖ ದಿನಾಂಕಗಳು
ಅಧಿಸೂಚನೆ ದಿನಾಂಕ: 2026 ಜೂನ್ 05
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 2026 ಜೂನ್ 08
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 2026 ಜುಲೈ 03
ಶುಲ್ಕ ಪಾವತಿಸಲು ಕೊನೆಯ ದಿನಾಕ: 2026 ಜುಲೈ 04
ಲಿಖಿತ ಪರೀಕ್ಷೆ ನಡೆಯುವ ದಿನಾಂಕ: 2026 ಆಗಸ್ಟ್ 02
📌ನೇಮಕಾತಿ ಸಂಕ್ಷಿಪ್ತ ವಿವರ
ನೇಮಕಾತಿ ಸಂಸ್ಥೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)
ನೇಮಕಾತಿ ಇಲಾಖೆ: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ (ಕೆಎಸ್ಪಿ)
ಹುದ್ದೆಯ ಹೆಸರು: ಪೊಲೀಸ್ ಕಾನ್ಸ್ಟೇಬಲ್ (ಸಿವಿಲ್)
ಒಟ್ಟು ಹುದ್ದೆಗಳು: 3991 ಹುದ್ದೆಗಳು
ವೇತನ ಶ್ರೇಣಿ: 37,500 ರೂ.ನಿಂದ 76,100 ರೂ.ವರೆಗೆ
ಉದ್ಯೋಗ ಸ್ಥಳ: ಕರ್ನಾಟಕ
📌 ಹುದ್ದೆಗಳ ವರ್ಗೀಕರಣದ ವಿವರ
ಕಲ್ಯಾಣ ಕರ್ನಾಟಕ ವೃಂದದ 596 ಹುದ್ದೆಗಳು ಮತ್ತು ಉಳಿಕೆ ಮೂಲ ವೃಂದದ (ಆರ್ಪಿಸಿ) 3395 ಹುದ್ದೆಗಳನ್ನು ಈ ಕೆಳಗಿನಂತೆ ವರ್ಗೀಕರಿಸಲಾಗಿದೆ:
ಹುದ್ದೆಯ ವಿವರ ಕಲ್ಯಾಣ ಕರ್ನಾಟಕ ಉಳಿಕೆ ಮೂಲ ಒಟ್ಟು ಹುದ್ದೆಗಳು
ನೇರ ಪುರುಷ 398 2266 2664
ನೇರ ಮಹಿಳೆ 133 755 888
ಸೇವಾನಿರತ ಪುರುಷ 46 257 303
ಸೇವಾನಿರತ ಮಹಿಳೆ 14 82 96
ತೃತೀಯಲಿಂಗಿ ಅಭ್ಯರ್ಥಿ 5 35 40
ಒಟ್ಟು ಹುದ್ದೆಗಳ ಸಂಖ್ಯೆ 596 3395 3991
📌ಶೈಕ್ಷಣಿಕ ಅರ್ಹತೆ
ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ತತ್ಸಮಾನ ವಿದ್ಯಾರ್ಹತೆಯಡಿ ಸಿಬಿಎಸ್ಇ ಮತ್ತು ಐಎಸ್ಸಿ ಮಂಡಳಿ ನಡೆಸುವ 12ನೇ ತರಗತಿ, 3 ವರ್ಷಗಳ ಡಿಪ್ಲೊಮಾ, 2 ವರ್ಷಗಳ ಐಟಿಐ ಹಾಗೂ ಎನ್ಐಒಎಸ್ನ ಉನ್ನತ ಪ್ರೌಢ ಶಿಕ್ಷಣ ಕೋರ್ಸ್ಗಳನ್ನು ಪರಿಗಣಿಸಲಾಗುತ್ತದೆ. ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗುವುದಿಲ್ಲ.
📌ವಯೋಮಿತಿ ಹಾಗೂ ವಯೋಮಿತಿ ಸಡಲಿಕೆ
• ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯೀಮಿತಿ ಹೊಂದಿರಬೇಕು.
• ವಯೋಮಿತಿ ಸಡಿಲಿಕೆ: ಸರ್ಕಾರದ ಆದೇಶದನ್ವಯ ಗರಿಷ್ಠ ಮಿತಿಯಲ್ಲಿ 5 ವರ್ಷ ಸಡಿಲಿಕೆ ನೀಡಲಾಗಿದೆ.
• ಇದರನ್ವಯ ಸಡಿಲಿಕೆಯ ನಂತರದ ಗರಿಷ್ಟ ವಯಸ್ಸು ಸಾಮಾನ್ಯ ಅಭ್ಯರ್ಥಿಗಳು: 33 ವರ್ಷಗಳು,
• ಎಸ್ಎಸ್ಟಿ ಮತ್ತು ಪ್ರವರ್ಗ-1, 2ಎ,2ಬಿ,3ಎ,3ಬಿ ಅಭ್ಯರ್ಥಿಗಳಿಗೆ: 35 ವರ್ಷಗಳು
• ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಅಭ್ಯರ್ಥಿಗಳಿಗೆ: 38 ವರ್ಷಗಳು
• ಸೇವಾನಿರತ ಸಾಮಾನ್ಯ ಅಭ್ಯರ್ಥಿಗಳಿಗೆ 38 ವರ್ಷಗಳು ಮತ್ತು ಇತರೆ ಪ್ರವರ್ಗದ ಸೇವಾನಿರತ ಅಭ್ಯರ್ಥಿಗಳಿಗೆ 40 ವರ್ಷಗಳ ಗರಿಷ್ಠ ವಯೋಮಿತಿ ಇರುತ್ತದೆ.
📌ದೇಹದಾರ್ಡ್ಯತೆ ಪರೀಕ್ಷೆಯ ಮಾನದಂಡಗಳು
• ಪುರುಷ ಅಭ್ಯರ್ಥಿಗಳಿಗೆ: ಕನಿಷ್ಠ 168 ಸೆಂಮೀ ಎತ್ತರವಿರಬೇಕು. ಕನಿಷ್ಠ ಎದೆ ಸುತ್ತಳತೆ 86 ಸೆಂಮೀ ಇದ್ದಯ ಪೂರ್ತಿ ವಿಸ್ತರಿಸಿದಾಗ 5 ಸೆಂಮೀಗಳ ಕನಿಷ್ಠ ವಿಸ್ತರಣೆ ಇರಬೇಕು.
• ಮಹಿಳಾ ಮತ್ತು ತೃತೀಯ ಲಿಂಗಿ ಅಭ್ಯರ್ಥಿಗಳಿಗೆ ಕನಿಷ್ಠ ಎತ್ತರ 157 ಸೆಂಮೀ ಮತ್ತು ಕನಿಷ್ಠ ತೂಕ 45 ಕೆಜಿ ಇರಬೇಕು.
📌ಆಯ್ಕೆ ಪ್ರಕ್ರಿಯೆ
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಒಟ್ಟು 100 ಅಂಕಗಳ ಒಎಂಆರ್ ಮಾದರಿಯ ಲಿಖಿತ ಪರೀಕ್ಷೆಯನ್ನು ನಡೆಸಲಾಗುವುದು. ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಳೆಯಲಾಗುತ್ತದೆ (ನೆಗೆಟಿವ್ ಮಾರ್ಕಿಂಗ್). ಲಿಖಿತ ಪರೀಕ್ಷೆಯಲ್ಲಿ 1.5ರ ಅನುಪಾತದಡಿ ಅರ್ಹಗೊಂಡ ಅಭ್ಯರ್ಥಿಗಳಿಗೆ ದೈಹಿಕ ಸಹಿಷ್ಣುತೆ ಮತ್ತು ದೇಹದಾರ್ಢ್ಯತೆ ಪರೀಕ್ಷೆಗಳನ್ನು ನಡೆಸಲಾಗುವುದು. ಅಂತಿಮವಾಗಿ ವೈದ್ಯಕೀಯ ಪರೀಕ್ಷೆಯನ್ನು ನಡೆಸಿ ಖಾಲಿ ಹುದ್ದೆಗಳಿಗನುಗುಣವಾಗಿ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದು.
📌ಅರ್ಜಿಶುಲ್ಕ ಹಾಗೂ ಪಾವತಿ ವಿಧಾನ
ಸಾಮಾನ್ಯ ಮತ್ತು ಇತರೆ ಪ್ರವರ್ಗ (2ಎ, 2ಬಿ, 3ಎ, 3ಬಿ) ಅಭ್ಯರ್ಥಿಗಳಿಗೆ 750 ರೂ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಮಾಜಿ ಸೈನಿಕ ಹಾಗೂ ತೃತೀಯ ಲಿಂಗಿ ಅಭ್ಯರ್ಥಿಗಳಿಗೆ 500 ರೂ.
ಅರ್ಜಿ ಶುಲ್ಕವನ್ನು ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಯುಪಿಐ ಅಥವಾ ಗೂಗಲ್ ಪೇ ಮುಖಾಂತರ ಆನ್ಲೈನ್ನಲ್ಲಿ ಮಾತ್ರ ಪಾವತಿಸಬೇಕು. ಉಳಿದ ಮೂಲದಲ್ಲಿ ಶುಲ್ಕವನ್ನು ಸ್ವೀಕರಿಸಲಾಗುವುದಿಲ್ಲ.






