ಸರ್ಕಾರಿ ರಂಗದಲ್ಲಿ ಐಟಿ ಕೆಲಸ ಹುಡುಕುತ್ತಿರುವವರಿಗೆ ಶುಭ ಸುದ್ದಿ!; IHMCL ನಲ್ಲಿ ನೇಮಕಾತಿ; ಯಾರು ಅರ್ಜಿ ಸಲ್ಲಿಸಬಹುದು?

Photo Credit : IHMCL
30 ಸಿಸ್ಟಮ್ಸ್ ಎಂಜಿನಿಯರ್ ಹುದ್ದೆಗಳು ಲಭ್ಯವಿದ್ದು, ಗೇಟ್ ಸ್ಕೋರ್ ಆಧಾರದಲ್ಲಿ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.
ಸರ್ಕಾರಿ ರಂಗದಲ್ಲಿ ಸಾಫ್ಟ್ವೇರ್ ಅಥವಾ ಐಟಿ ಕೆಲಸ ಹುಡುಕುತ್ತಿರುವವರಿಗೆ ಶುಭ ಸುದ್ದಿ. ಇಂಡಿಯನ್ ಹೈವೇ ಮ್ಯಾನೇಜ್ಮೆಂಟ್ ಕಂಪನಿ ಲಿಮಿಟೆಡ್ (IHMCL) ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಬಿದ್ದಿದೆ. 30 ಸಿಸ್ಟಮ್ಸ್ ಎಂಜಿನಿಯರ್ ಹುದ್ದೆಗಳು ಲಭ್ಯವಿವೆ. ಗೇಟ್ ಸ್ಕೋರ್ ಆಧಾರದಲ್ಲಿ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು. ಆಸಕ್ತ ಅಭ್ಯರ್ಥಿಗಳು ಈ ಮುಂದಿನ ಲಿಂಕ್ ಬಳಸಿ ಅರ್ಜಿ ಸಲ್ಲಿಸಬಹುದು: https://ihmcl.co.in/careers/
ಪ್ರಮುಖ ದಿನಾಂಕಗಳು
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 04 ಜುಲೈ 2026
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02 ಆಗಸ್ಟ್ 2026
📌ಹುದ್ದೆಗಳ ವಿವರ
ಸಂಸ್ಥೆಯ ಹೆಸರು: ಇಂಡಿಯನ್ ಹೈವೇ ಮ್ಯಾನೇಜ್ಮೆಂಟ್ ಕಂಪನಿ ಲಿಮಿಟೆಡ್
ಹುದ್ದೆಯ ಹೆಸರು: ಸಿಸ್ಟಮ್ಸ್ ಎಂಜಿನಿಯರ್
ಒಟ್ಟು ಹುದ್ದೆಗಳು: 30
ಉದ್ಯೋಗ ಸ್ಥಳ: ಅಖಿಲ ಭಾರತ
📌ವೇತನ
ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ ಕನಿಷ್ಠ 50,000 ರೂ. ದಿಂದ ಗರಿಷ್ಠ 1,60,000 ರೂ.ವರೆಗೆ ವೇತನ ಸಿಗಲಿದೆ.
📌ಶೈಕ್ಷಣಿಕ ಅರ್ಹತೆ
ಮಾನ್ಯತೆ ಪಡೆದ ವಿಶ್ವವಿದ್ಯಾಲಯ BE / B.Tech ,CSE/ ECE/ IT ಪೂರ್ಣಗೊಳಿಸಿರಬೇಕು.
ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ.
📌ವಯೋಮಿತಿ
* ಕನಿಷ್ಠ ವಯಸ್ಸು: 21 ವರ್ಷಗಳು
* ಗರಿಷ್ಠ ವಯಸ್ಸು: 30 ವರ್ಷಗಳು
ವಯೋಮಿತಿ ಸಡಿಲಿಕೆ
* OBC ಅಭ್ಯರ್ಥಿಗಳಿಗೆ: 3 ವರ್ಷಗಳು
* SC / ST ಅಭ್ಯರ್ಥಿಗಳಿಗೆ: 5 ವರ್ಷಗಳು
* PwBD (ಸಾಮಾನ್ಯ) ಅಭ್ಯರ್ಥಿಗಳಿಗೆ: 10 ವರ್ಷಗಳು
* PwBD (OBC) ಅಭ್ಯರ್ಥಿಗಳಿಗೆ: 13 ವರ್ಷಗಳು
* PwBD (SC/ST) ಅಭ್ಯರ್ಥಿಗಳಿಗೆ: 15 ವರ್ಷಗಳು
📌ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?
* ಮಾನ್ಯ ಗೇಟ್ ಸ್ಕೋರ್
* ನೇರ ಸಂದರ್ಶನ
📌ಅರ್ಜಿ ಸಲ್ಲಿಸುವುದು ಹೇಗೆ?
1. ಮೊದಲು IHMCL ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ನೋಟಿಫಿಕೇಶನ್ ಸರಿಯಾಗಿ ಓದಿಕೊಳ್ಳಿ.
2. ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಸಕ್ರಿಯವಾಗಿರಲಿ.
3. ನಿಮ್ಮ ಆಧಾರ್ ಕಾರ್ಡ್ (ID Proof), ವಯಸ್ಸಿನ ಪ್ರಮಾಣಪತ್ರ, ಬಿಇ/ಬಿ.ಟೆಕ್ ಅಂಕಪಟ್ಟಿ ಹಾಗೂ ಅಪ್ಡೇಟ್ ಆಗಿರೋ ರೆಸ್ಯೂಮ್ ಸಿದ್ಧವಾಗಿರಿಸಿಕೊಳ್ಳಿ.
4. ಕೆಳಗೆ ನೀಡಿರುವ ಆನ್ಲೈನ್ ಲಿಂಕ್ ಕ್ಲಿಕ್ ಮಾಡಿ, ಫಾರ್ಮ್ನಲ್ಲಿ ಕೇಳಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ತುಂಬಿ.
5. ನಿಮ್ಮ ಫೋಟೋ ಮತ್ತು ಸಹಿ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
6. ಕೊನೆಯದಾಗಿ ‘Submit’ ಬಟನ್ ಒತ್ತಿ, ಪ್ರಿಂಟ್ ಔಟ್ ತೆಗೆದುಕೊಳ್ಳಿ ಅಥವಾ ಅಪ್ಲಿಕೇಶನ್ ನಂಬರ್ ಉಳಿಸಿಕೊಳ್ಳಿ.






