ಮೀನುಕೃಷಿಯಲ್ಲಿ ಆಸಕ್ತರಿಗೆ ಸರ್ಕಾರದ ಸಹಾಯಧನ; ಯಾರು ಅರ್ಜಿ ಸಲ್ಲಿಸಬಹುದು?

ಸಾಂದರ್ಭಿಕ ಚಿತ್ರ | Photo Credit : magnific
ಮೀನುಗಾರಿಕಾ ಇಲಾಖೆಯಡಿ ವಿವಿಧ ರೀತಿಯ ಮೀನುಕೃಷಿ ಮತ್ತು ಮೀನು ಮಾರಾಟ, ಮೀನುಗಾರಿಕೆಗೆ ನೆರವು ದೊರೆಯಲಿದೆ.
ಕರ್ನಾಟಕ ಸರ್ಕಾರದ ಮೀನುಗಾರಿಕಾ ಇಲಾಖೆಯು ಮೀನು ಕೃಷಿಯನ್ನು ಬೆಂಬಲಿಸಲು ಆಸಕ್ತರಿಗೆ ವಿವಿಧ ಸೌಲಭ್ಯಗಳನ್ನು ನೀಡಲಿದೆ. ಮೀನು ಕೃಷಿಗೆ ಮತ್ತು ಮೀನುಮರಿ ಖರೀದಿ ಸೌಲಭ್ಯಗಳನ್ನು ನೀಡುತ್ತದೆ. ಕೃಷಿ ಹೊಂಡವಿರುವ ರೈತರಿಗೆ ಮೀನು ಕೃಷಿಗೆ ಮೀನುಮರಿಗಳನ್ನು ನೀಡಲಿದೆ.
📍 ಪ್ರಮುಖ ದಿನಾಂಕಗಳು
ಕೆಲವು ಯೋಜನೆಗಳಿಗೆ ಕೊನೆಯ ದಿನಾಂಕ: 2026 ಆಗಸ್ಟ್ 20
ಪ್ರಮುಖ ಯೋಜನೆಗಳಿಗೆ ಕೊನೆಯ ದಿನಾಂಕ: 2026 ಆಗಸ್ಟ್ 30
📍 ಮೀನು ಕೃಷಿಯಲ್ಲಿ ತೊಡಗಿದವರಿಗೆ ಸಿಗುವ ಸೌಲಭ್ಯಗಳು
• 20,000 ಮೌಲ್ಯದ ಕಿಟ್ ಯೋಜನೆಯಡಿ ಕಳೆದ ಮೂರು ವರ್ಷಗಳಲ್ಲಿ ಸೌಲಭ್ಯ ಪಡೆಯದೆ ಇರುವವರು ಅರ್ಜಿ ಹಾಕಬಹುದು. ಒಬ್ಬರಿಗೆ ಒಮ್ಮೆ ಮಾತ್ರ ಫೈಬರ್ ಗ್ಲಾಸ್ ಹರಿಗೋಲು ವಿತರಿಸಲಾಗುತ್ತದೆ.
• ಮೀನುಗಳನ್ನು ಆರೋಗ್ಯಕರವಾಗಿ ಮಾರಾಟ ಮಾಡಲು ದ್ವಿಚಕ್ರ ವಾಹನ ಮತ್ತು ಐಸ್ ಬಾಕ್ಸ್ ಖರೀದಿಗೂ ಸಹಾಯಧನ ಸಿಗಲಿದೆ. ದ್ವಿಚಕ್ರ ವಾಹನ ಖರೀದಿಗೆ 25 ಸಾವಿರ ಸಹಾಯಧನ ಸಿಗುತ್ತದೆ.
• ಕೆರೆಗಳಲ್ಲಿ ಮೀನು ಉತ್ಪಾದನೆ ಮತ್ತು ಉತ್ಪಾದಕತೆ ಹೆಚ್ಚಿಸಲು ಮೀನು ಕೃಷಿಕರು, ಮೀನುಗಾರಿಕಾ ಸಹಕಾರ ಸಂಘಗಳ ಘಟಕ ವೆಚ್ಚದ ರೂಪದಲ್ಲಿ ಶೇ 50 ಸಹಾಯಧನ ಸಿಗಲಿದೆ.
• ಮೀನು ಕೃಷಿಗೆ ಮೀನು ಮರಿಗಳ ಖರೀದಿಗೆ ನೆರವು, ಹಿನ್ನೀರು ಜಲಕೃಷಿಗೆ ನೆರವು, ಜಲಾಶಯಗಳಲ್ಲಿ ಮೀನು ಮರಿ ದಾಸ್ತಾನು ಮಾಡಲು ಆರ್ಥಿಕ ನೆರವು ಸಿಗಲಿದೆ.
• ಕೃಷಿ ಹೊಂಡವಿರುವ ರೈತರಿಗೆ ಮೀನು ಮರಿ ವಿತರಣೆ ಮಾಡಲಾಗುವುದು.
• ಬಿತ್ತನೆ ಮರಿ ಖರೀದಿಗೆ ವ್ಯಕ್ತಿಗತ 5000 ರೂ, ಸಹಕಾರಿ ಸಂಘಗಳಿಗೆ 20,000 ರೂ.
• ಸ್ಪಾನ್ ಮೀನುಮರಿ ಖರೀದಿಗೆ ಗರಿಷ್ಠ 25,000 ರೂ., ಘಟಕ ವೆಚ್ಚದ ಶೇ 50 ಇಲ್ಲವೇ ಗರಿಷ್ಠ 50,000 ರೂ. ನೀಡಲಾಗುತ್ತದೆ.
📍 ಅರ್ಹ ಫಲಾನುಭವಿಗಳು ಯಾರು?
• ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಸಾಮಾನ್ಯ ವರ್ಗದ ಮೀನುಗಾರರೂ ಅರ್ಜಿ ಸಲ್ಲಿಸಬಹುದು.
📍 ಸಂಕಷ್ಟ ಪರಿಹಾರ ನಿಧಿ
• ಮೀನುಗಾರಿಕೆಯಲ್ಲಿ ತೊಡಗಿರುವಾಗ ನೈಸರ್ಗಿಕ ವಿಕೋಪಗಳಿಗೆ ತುತ್ತಾದ ಮೀನುಗಾರರು ಮತ್ತು ಅವಲಂಬಿತರು ಪರಿಹಾರಕ್ಕೆ ಅರ್ಜಿ ಸಲ್ಲಿಸಬಹುದು.
• ಮರಣ, ಶಾಶ್ವತ ಅಂಗವಿಕಲತೆ, ಅಂಗವಿಕಲತೆಗೆ ವಿವಿಧ ಪರಿಹಾರ ದೊರೆಯಲಿದೆ.
• ಬಲೆ/ದೋಣಿ ಹಾನಿಗೆ ಪರಿಹಾರ.
• ಬಂದರು/ಇಳಿದಾಣ ಕೇಂದ್ರದ ಕೆಲಸದಲ್ಲಿದ್ದಾಗ ಮರಣ ಪರಿಹಾರ.
• ಸಮುದ್ರ ಮೀನುಗಾರಿಕೆಯಲ್ಲಿ ತೊಡಗಿರುವಾಗ ಮರಣಕ್ಕೆ ಪರಿಹಾರ ದೊರೆಯಲಿದೆ.
📍 ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತರು ಆಯಾ ಜಿಲ್ಲೆಗೆ ಇಲ್ಲವೇ ತಾಲೂಕಿನ ಮೀನುಗಾರಿಕಾ ಸಹಾಯಕ ನಿರ್ದೇಶಕರ ಕಚೇರಿಗಳ ಮುಖಾಂತರ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
📍 ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
• ಮೀನುಗಾರಿಕೆ ನಿರ್ದೇಶನಾಲಯ, 3ನೇ ಮಹಡಿ, ಪೋಡಿಯಂ ಬ್ಲಾಕ್, ವಿಶ್ವೇಶ್ವರಯ್ಯ ಗೋಪುರ, ಡಾ ಅಂಬೇಡ್ಕರ್ ವೀದಿ, ಬೆಂಗಳೂರು 560001
• ದೂರವಾಣಿ ಸಂಖ್ಯೆ: 080-22864681 ಸಂಪರ್ಕಿಸಬಹುದು
• ವೆಬ್ಸೈಟ್: fisheries.karnataka.gov.in






