ಭಾರತೀಯ ಸೇನೆಯಲ್ಲಿ ಕಾನೂನು ಪದವೀಧರರಿಗೆ ಉದ್ಯೋಗವಕಾಶ

ಸಾಂದರ್ಭಿಕ ಚಿತ್ರ | Photo Credit ; PTI
ಭಾರತೀಯ ಸೇನೆಯು ಜಾಗ್ ಎಂಟ್ರಿ ಸ್ಕೀಮ್ 124ನೇ ಕೋರ್ಸ್ ಅಕ್ಟೋಬರ್ 2026 ಬ್ಯಾಚ್ ಶಾರ್ಟ್ ಸರ್ವಿಸ್ ಕಮಿಷನ್ (ಎನ್ಟಿ) ನೇಮಕಾತಿಗಾಗಿ ಅಧಿಕೃತ ವೆಬ್ತಾಣದಲ್ಲಿ ಅಧಿಸೂಚನೆ ಬಿಡುಗಡೆ ಮಾಡಿದೆ.
ಜಾಯ್ನ್ ಇಂಡಿಯನ್ ಆರ್ಮಿ ಹೊಸ ಅಧಿಸೂಚನೆಯೊಂದನ್ನು ಬಿಡುಗಡೆ ಮಾಡಿದ್ದು, ಕಾನೂನು ಪದವೀಧರರಿಗೆ (ಪುರುಷರು ಮತ್ತು ಮಹಿಳೆಯರು) ಉದ್ಯೋಗಕ್ಕೆ ಅವಕಾಶ ನೀಡಿದೆ. ಜಾಗ್ ಎಂಟ್ರಿ ಸ್ಕೀಮ್ 124ನೇ ಕೋರ್ಸ್ ಅಕ್ಟೋಬರ್ 2026 ಬ್ಯಾಚ್ ಶಾರ್ಟ್ ಸರ್ವಿಸ್ ಕಮಿಷನ್ (ಎನ್ಟಿ) ನೇಮಕಾತಿಗಾಗಿ ಅಧಿಕೃತ ವೆಬ್ತಾಣದಲ್ಲಿ ಅಧಿಸೂಚನೆ ಬಿಡುಗಡೆ ಮಾಡಿದೆ. ಭಾರತೀಯ ಸೇನೆಗೆ ಸೇರಲು ಬಯಸುವವರಿಗೆ 2026 ಜನವರಿ 27ರಿಂದ ಆರಂಭಿಸಿ 2026 ಫೆಬ್ರವರಿ 27ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ಕೊಡಲಾಗಿದೆ. ಅಗತ್ಯವಿರುವ ಕನಿಷ್ಠ ವಯಸ್ಸು 21 ವರ್ಷಗಳು ಮತ್ತು ಗರಿಷ್ಠ ವಯಸ್ಸು 2026 ಜುಲೈ 01ರಂತೆ 27 ವರ್ಷಗಳು. ಆಸಕ್ತ ಅಭ್ಯರ್ಥಿಗಳು ಈ ಕೆಳಗೆ ನೀಡಲಾದ ಲಿಂಕ್ನಲ್ಲಿ ಅರ್ಜಿ ಸಲ್ಲಿಸಬಹುದು:
https://joinindianarmy.nic.in/Authentication.aspx
ಪ್ರಮುಖ ದಿನಾಂಕಗಳು
• ಆನ್ಲೈನ್ ಅರ್ಜಿ ಆರಂಭ: 27 ಜನವರಿ 2026
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27 ಫೆಬ್ರವರಿ 2026
• ಶುಲ್ಕ ಪಾವತಿಗೆ ಕೊನೆಯ ದಿನಾಂಕ: 27 ಫೆಬ್ರವರಿ 2026
• ಪರೀಕ್ಷೆ ದಿನಾಂಕ: ಶೀಘ್ರವೇ ಅಪ್ಡೇಟ್ ಮಾಡಲಾಗುವುದು.
• ಭರ್ತಿ ಕಾರ್ಡ್: ಪರೀಕ್ಷೆಗೆ ಮೊದಲು
• ಫಲಿತಾಂಶ ದಿನಾಂಕ: ಶೀಘ್ರವೇ ಅಪ್ಡೇಟ್ ಮಾಡಲಾಗುವುದು.
ಅರ್ಜಿ ಶುಲ್ಕ
ಅರ್ಜಿ ಶುಲ್ಕ ಇರುವುದಿಲ್ಲ
ವಯೋಮಿತಿ
• ಕನಿಷ್ಠ ವಯಸ್ಸು- 21 ವರ್ಷಗಳು
• ಗರಿಷ್ಠ ವಯಸ್ಸು 27 ವರ್ಷಗಳು
ಹೆಚ್ಚುವರಿ ವಯೋಮಿತಿ ಸಡಿಲಿಕೆಯನ್ನು ಭಾರತೀಯ ಸೇನೆಯ ನೇಮಕಾತಿ ನಿಯಮಗಳಿಗೆ ತಕ್ಕಂತೆ ನೀಡಲಾಗುವುದು.
ಒಟ್ಟು ಹುದ್ದೆಗಳು
8 ಹುದ್ದೆಗಳು
ಹುದ್ದೆಯ ವಿವರಗಳು
• ಇಂಡಿಯನ್ ಆರ್ಮಿ ಜ್ಯಾಗ್ 124ನೇ ಕೋರ್ಸ್ ಅಕ್ಟೋಬರ್- 8 ಹುದ್ದೆಗಳು
• ಕಮಿಷನ್ ವಿಧ: ಶಾರ್ಟ್ ಸರ್ವಿಸ್ ಕಮಿಷನ್ (ಎಸ್ಎಸ್ಸಿ) ಕಾನೂನು ಪದವೀಧರರು.
ವಿದ್ಯಾರ್ಹತೆ
• ಕನಿಷ್ಠ ಶೇ 55 ಅಂಕಗಳೊಂದಿಗೆ ಕಾನೂನು ಪದವಿ (ಎಲ್ಎಲ್ಬಿ) ಮತ್ತು ಬಾರ್ ಕೌನ್ಸಿಲ್ನಲ್ಲಿ ನೋಂದಣಿಯ ಅಗತ್ಯವಿದೆ. CLAT PG 2025ಗೆ ಹಾಜರಾಗಿರಬೇಕು. ಅವಿವಾಹಿತ ಪುರುಷ ಮತ್ತು ಮಹಿಳಾ ಕಾನೂನು ಪದವೀಧರರು ಮಾತ್ರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
• ಅಪ್ಲಿಕೇಶನ್ ಪರಿಶೀಲನೆಯ ನಂತರ ಆಯ್ಕೆಯಾದ ಅಭ್ಯರ್ಥಿಗಳಿಗೆ ಎಸ್ಎಸ್ಬಿ ಸಂದರ್ಶನವಿರಲಿದೆ. ದಾಖಲೆ ಪರಿಶೀಲನೆ ಮಾಡಿದ ನಂತರ ವೈದ್ಯಕೀಯ ಪರೀಕ್ಷೆ ಎದುರಿಸಬೇಕಾಗುತ್ತದೆ. ಆಯ್ಕೆಯಾದವರು ಚೆನ್ನೈನಲ್ಲಿ ಆಫೀಸರ್ಸ್ ತರಬೇತಿ ಅಕಾಡೆಮಿಯಲ್ಲಿ ತರಬೇತಿಗೆ ಹಾಜರಾಗಬೇಕು. ತರಬೇತಿ ಅವಧಿ 49 ವಾರಗಳು (2026 ಅಕ್ಟೋಬರ್ನಿಂದ).
ವೇತನ ಮತ್ತು ಭತ್ಯೆಗಳು
• ತರಬೇತಿ ಸಮಯದಲ್ಲಿ ಸ್ಟೈಫಂಡ್: ತಿಂಗಳಿಗೆ 56,100 ರೂ.
• ಕಮಿಷನ್ ನಂತರದ ವೇತನ (ಸಿಟಿಸಿ): ವಾರ್ಷಿಕ ಅಂದಾಜು 17–18 ಲಕ್ಷ ರೂ.
• ಕಮಿಷನಿಂಗ್ನಲ್ಲಿ ಶ್ರೇಣಿ: ಲೆಫ್ಟಿನೆಂಟ್.
• ಭತ್ಯೆಗಳು: 15,500 ರೂ./ತಿಂಗಳು + ಕ್ಷೇತ್ರವಾರು, ತಾಂತ್ರಿಕ, ಪ್ಯಾರಾ, ಹೈ-ಆಲ್ಟಿಟ್ಯೂಡ್, ಸಾರಿಗೆ ಮತ್ತು ಇತರ ಭತ್ಯೆಗಳು.
• ವಿಮೆ: ಸೇನಾ ಸಮೂಹ ವಿಮಾ ನಿಧಿ (AGIF) ಅಡಿಯಲ್ಲಿ 1.25 ರೂ. ಕೋಟಿ ವ್ಯಾಪ್ತಿ.
ಸೇವಾ ಷರತ್ತುಗಳು
• ಎಸ್ಎಸ್ಸಿ ಅವಧಿ: ಆರಂಭಿಕ 10 ವರ್ಷಗಳು, 14 ವರ್ಷಗಳವರೆಗೆ ವಿಸ್ತರಿಸಬಹುದು.
• ಶಾಶ್ವತ ಕಮಿಷನ್ ಆಯ್ಕೆ: ಅರ್ಹತೆಗೆ ಒಳಪಟ್ಟು 10 ವರ್ಷಗಳ ನಂತರ ಪರಿಗಣಿಸಲಾಗುತ್ತದೆ.
• ಬಿಡುಗಡೆ ಆಯ್ಕೆಗಳು: 5, 10, ಅಥವಾ 14 ವರ್ಷಗಳ ಸೇವೆಯಲ್ಲಿ.
• ಪ್ರೊಬೇಷನ್: 6 ತಿಂಗಳುಗಳು.
• ಮೀಸಲು ಹೊಣೆಗಾರಿಕೆ: 37 ವರ್ಷ ವಯಸ್ಸಿನವರೆಗೆ (ಮಹಿಳೆಯರು) / 40 ವರ್ಷ ವಯಸ್ಸಿನವರೆಗೆ (ಪುರುಷರು).
ದೈಹಿಕ ಗುಣಮಟ್ಟ (ಕನಿಷ್ಠ):
• ಓಟ: 10 ನಿಮಿಷ 30 ಸೆಕೆಂಡುಗಳಲ್ಲಿ 2.4 ಕಿಮೀ (ಪುರುಷರು), 13 ನಿಮಿಷ (ಮಹಿಳೆಯರು).
• ಪುಷ್-ಅಪ್ಗಳು: 40 (ಪುರುಷರು), 15 (ಮಹಿಳೆಯರು).
• ಸಿಟ್-ಅಪ್ಗಳು: 30 (ಪುರುಷರು), 25 (ಮಹಿಳೆಯರು).
• ಈಜು: 25 ಮೀ ಕಡ್ಡಾಯ.
ಹೆಚ್ಚಿನ ಮಾಹಿತಿಗೆ www.joinindianarmy.nic.in ವೆಬ್ತಾಣವನ್ನು ಸಂಪರ್ಕಿಸಬಹುದು.







