ಇಂಡಿಯನ್ ಬ್ಯಾಂಕ್ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಇಂಡಿಯನ್ ಬ್ಯಾಂಕ್ | Photo Credit : ibpsreg.ibps.in
ಇಂಡಿಯನ್ ಬ್ಯಾಂಕ್ ತನ್ನ ಅಧಿಕೃತ ವೆಬ್ಸೈಟ್ ನಲ್ಲಿ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆ ಮಾಡಿದೆ. ಒಟ್ಟು 350 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. 2026 ಎಪ್ರಿಲ್ 8ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. 2026 ಎಪ್ರಿಲ್ 28 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಕೆಗೆ ಅಗತ್ಯವಿರುವ ಕನಿಷ್ಠ ವಯಸ್ಸು 22 ವರ್ಷಗಳು ಮತ್ತು ಗರಿಷ್ಠ ವಯೋಮಿತಿ 45 ವರ್ಷಗಳು. ಆಸಕ್ತ ಅಭ್ಯರ್ಥಿಗಳು ಈ ಮುಂದಿನ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು: https://ibpsreg.ibps.in/ibsofeb26/
📌 ಪ್ರಮುಖ ದಿನಾಂಕಗಳು
ಅಧಿಸೂಚನೆ ದಿನಾಂಕ – 2026 ಎಪ್ರಿಲ್ 08
ಅರ್ಜಿ ಸಲ್ಲಿಕೆ ಆರಂಭದ ದಿನಾಂಕ- 2026 ಎಪ್ರಿಲ್ 08
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 2026 ಎಪ್ರಿಲ್ 28
ಅಪ್ಲಿಕೇಶನ್ ಎಡಿಟ್ ಮಾಡಲು ಕೊನೆಯ ದಿನಾಂಕ- 2026 ಎಪ್ರಿಲ್ 28
ಅಪ್ಲಿಕೇಶನ್ ಮುದ್ರಿಸಿಕೊಳ್ಳಲು ಕೊನೆಯ ದಿನಾಂಕ- 2026 ಮೇ 13
ಆನ್ಲೈನ್ ಶುಲ್ಕ ಪಾವತಿಗೆ ಕೊನೆಯ ದಿನಾಂಕ - 2026 ಎಪ್ರಿಲ್ 28
ಪರೀಕ್ಷೆ ದಿನಾಂಕ: ಶೀಘ್ರವೇ ಸೂಚಿಸಲಾಗುವುದು
ಅಡ್ಮಿಟ್ ಕಾರ್ಡ್: ಪರೀಕ್ಷೆಗೆ ಮೊದಲು
ಫಲಿತಾಂಶ ಘೋಷಣೆ: ಶೀಘ್ರವೇ ಅಪ್ಡೇಟ್ ಮಾಡಲಾಗುವುದು
📌 ಅಪ್ಲಿಕೇಶನ್ ಶುಲ್ಕ
* ಜನರಲ್/ ಒಬಿಸಿ/ ಇಡಬ್ಲ್ಯುಎಸ್ : 1000 ರೂ.
* ಎಸ್ಸಿ/ ಎಸ್ಟಿ/ ಪಿಎಚ್: 175 ರೂ.
* ಫೋರ್ಟಲ್ ಶುಲ್ಕ ಹೆಚ್ಚುವರಿ
* ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಕ್ಯಾಶ್ ಕಾರ್ಡ್/ ಮೊಬೈಲ್ ವಾಲೆಟ್ ಮೂಲಕ ಪಾವತಿಸುವ ಅವಕಾಶವಿದೆ.
📌 ಒಟ್ಟು ಹುದ್ದೆಗಳು
350
📌 ಹುದ್ದೆ ಮತ್ತು ಅರ್ಹತೆ
ಪೋಸ್ಟ್ ಕೋಡ್ ವಿಭಾಗ/ ಹುದ್ದೆ ಅರ್ಹತೆ ವಯೋಮಿತಿ ಅನುಭವ ಸ್ಕೇಲ್
IT-01 IT ವಿಶೇಷಜ್ಞ (ನೆಟ್ವರ್ಕಿಂಗ್, ಭದ್ರತೆ, ಕ್ಲೌಡ್, ಡಿಬಿ) B.E./B.Tech/MCA + ಪ್ರಮಾಣಪತ್ರಗಳು (CCNA, CISSP, VMware, ಒರಾಕಲ್ OCA) 23–30 ವರ್ಷ 2–3 ವರ್ಷ ಸ್ಕೇಲ್ I
CR-02 ಕ್ರೆಡಿಟ್ ಆಫೀಸರ್ MBA (ಹಣಕಾಸು)/CA/CFA/ICMA 25–35 ವರ್ಷ 2–3 ವರ್ಷ ಸ್ಕೇಲ್ II
RM-03 ರಿಸ್ಕ್ ಮ್ಯಾನೇಜ್ಮೆಂಟ್
MBA (ರಿಸ್ಕ್/ಹಣಕಾಸು)/FRM/CFA 25–35 ವರ್ಷ 2–3 ವರ್ಷ ಸ್ಕೇಲ್ II
FX-04 ಫಾರೆಕ್ಸ್/ಟ್ರೆಶರಿ MBA (ಹಣಕಾಸು)/CA 25–35 yrs 2–3 yrs ಸ್ಕೇಲ್ II
WM-05 ವೆಲ್ತ್ ಮ್ಯಾನೇಜ್ಮೆಂಟ್
MBA (ಹಣಕಾಸು /ಮಾರ್ಕೆಟಿಂಗ್) 25–35 ವರ್ಷ 2–3 ವರ್ಷ ಸ್ಕೇಲ್ II
HR-06 HR ಆಫೀಸರ್ MBA (HR)/PGDM 23–30 ವರ್ಷ 2 ವರ್ಷ ಸ್ಕೇಲ್ I
MK-07 ಮಾರ್ಕೆಟಿಂಗ್ ಆಫೀಸರ್ MBA (ಮಾರ್ಕೆಟಿಂಗ್) 23–30 ವರ್ಷ 2 ವರ್ಷ ಸ್ಕೇಲ್ I
SE-08 ಭದ್ರತೆ ಆಫೀಸರ್ ಪದವಿ + ಮಾಜಿ ಸೈನಿಕ ಕುಟುಂಬ (ಭೂಸೇನೆ/ನೌಕಾ/ವಾಯುಸೇನೆ) 25–40 ವರ್ಷ 5 ವರ್ಷ ಸ್ಕೇಲ್ II
CE-09 ಸಿವಿಲ್ ಎಂಜಿನಿಯರ್ B.E./B.Tech (ಸಿವಿಲ್) 23–30 ವರ್ಷ 2 ವರ್ಷ ಸ್ಕೇಲ್ I
AR-10 ಆರ್ಕಿಟೆಕ್ಟ್ B.Arch 23–30 ವರ್ಷ 2 ವರ್ಷ ಸ್ಕೇಲ್ I
📌 ವಿಶೇಷ ಸೂಚನೆ
ಅಭ್ಯರ್ಥಿಗಳು ಒಂದು ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಬಹುದು. ಬಹು ಅರ್ಜಿಗಳು ಅಮಾನ್ಯವಾಗುತ್ತವೆ. ಖಾಲಿ ಹುದ್ದೆಗಳು ತಾತ್ಕಾಲಿಕ ಮತ್ತು ಬದಲಾವಣೆ ಮಾಡಬಹುದಾಗಿದೆಅಭ್ಯರ್ಥಿಗಳನ್ನು ಇತರ ಸೂಕ್ತ ಹುದ್ದೆಗಳಿಗೆ ಪರಿಗಣಿಸುವ ಹಕ್ಕನ್ನು ಬ್ಯಾಂಕ್ ಕಾಯ್ದಿರಿಸುತ್ತದೆ. ಸಂಬಂಧಿತ ಮೀಸಲಾತಿಗೆ ಪ್ರಮಾಣಪತ್ರಗಳನ್ನು ಸಲ್ಲಿಸಬೇಕಾಗುತ್ತದೆ.







