ಭಾರತೀಯ ರೈಲ್ವೆ ಇಲಾಖೆ ನೇಮಕಾತಿ; ಯಾರು ಅರ್ಜಿ ಸಲ್ಲಿಸಬಹುದು?

Photo Credit : PTI
ರೈಲ್ವೆ ಸೆಕ್ಷನ್ ಕಂಟ್ರೋಲರ್ ಭಾರತೀಯ ರೈಲ್ವೆಯ ಪ್ರಮುಖ ಕಾರ್ಯಾಚರಣೆ ಹುದ್ದೆಯಾಗಿದ್ದು, ಇವರು ನಿರ್ದಿಷ್ಟ ರೈಲು ಮಾರ್ಗಗಳಲ್ಲಿ ಸುರಕ್ಷಿತ ಮತ್ತು ಸುಗಮ ಸಂಚಾರವನ್ನು ನಿಯಂತ್ರಿಸುತ್ತಾರೆ.
ಭಾರತೀಯ ರೈಲ್ವೆಯಲ್ಲಿ ಉದ್ಯೋಗ ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ ದೊರೆಯುತ್ತಿದೆ. ರೈಲ್ವೆ ನೇಮಕಾತಿ ಮಂಡಳಿಯು (RRB) ದೇಶಾದ್ಯಂತ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ರೈಲ್ವೆ ನೇಮಕಾತಿ ಮಂಡಳಿಯು ರೈಲ್ವೆ ಸೆಕ್ಷನ್ ಕಂಟ್ರೋಲರ್ (Section Controller) ಹುದ್ದೆಗಳ ಭರ್ತಿಗಾಗಿ ಕೇಂದ್ರೀಕೃತ ಉದ್ಯೋಗ ಅಧಿಸೂಚನೆ (CEN 03/2026) ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು ಈ ಮುಂದಿನ ಲಿಂಕ್ ಬಳಸಿ ಅರ್ಜಿ ಸಲ್ಲಿಸಬಹುದು: https://www.rrbapply.gov.in/#/auth/landing
📌ಪ್ರಮುಖ ದಿನಾಂಕಗಳು
• ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 2026 ಜುಲೈ 15
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 2026 ಆಗಸ್ಟ್ 14
• ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 2026 ಆಗಸ್ಟ್ 16
📌ಹುದ್ದೆಯ ವಿವರಗಳು
ಸಂಸ್ಥೆಯ ಹೆಸರು: ರೈಲ್ವೆ ನೇಮಕಾತಿ ಮಂಡಳಿ (RRB)
ಹುದ್ದೆಯ ಹೆಸರು: ವಿಭಾಗ ನಿಯಂತ್ರಕ (Section Controller)
ಒಟ್ಟು ಹುದ್ದೆಗಳು: 119 ಹುದ್ದೆಗಳು
ಉದ್ಯೋಗ ಸ್ಥಳ: ಭಾರತದಾದ್ಯಂತ
ರೈಲ್ವೆ ನೇಮಕಾತಿ ಮಂಡಳಿಯು (RRB) ದೇಶಾದ್ಯಂತ ರೈಲ್ವೆ ಸೆಕ್ಷನ್ ಕಂಟ್ರೋಲರ್ (Section Controller) ಹುದ್ದೆಗಳ ಭರ್ತಿಗಾಗಿ ಕೇಂದ್ರೀಕೃತ ಉದ್ಯೋಗ ಅಧಿಸೂಚನೆ (CEN 03/2026) ಹೊರಡಿಸಿದೆ. ರೈಲ್ವೆ ಸೆಕ್ಷನ್ ಕಂಟ್ರೋಲರ್ (Section Controller) ಭಾರತೀಯ ರೈಲ್ವೆಯ ಪ್ರಮುಖ ಕಾರ್ಯಾಚರಣೆ ಹುದ್ದೆಯಾಗಿದೆ. ಇವರು ನಿರ್ದಿಷ್ಟ ರೈಲು ಮಾರ್ಗಗಳಲ್ಲಿ ಸುರಕ್ಷಿತ ಮತ್ತು ಸುಗಮ ಸಂಚಾರವನ್ನು ನಿಯಂತ್ರಿಸುತ್ತಾರೆ. ರೈಲ್ವೆ ನೇಮಕಾತಿ ಮಂಡಳಿಯು ಪದವೀಧರರಿಗೆ 119 ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದ್ದು, ಆರಂಭಿಕ ವೇತನವು 35,400 ರೂ. ಆಗಿರುತ್ತದೆ.
📌ಹುದ್ದೆಯ ಜವಾಬ್ದಾರಿಗಳು
ರೈಲು ಮಾರ್ಗಗಳ ನಿರ್ವಹಣೆ: ರೈಲುಗಳ ವೇಳಾಪಟ್ಟಿಯನ್ನು ಕಾಯ್ದುಕೊಳ್ಳುವುದು ಮತ್ತು ನಿಗದಿತ ಮಾರ್ಗದಲ್ಲಿ ಸುರಕ್ಷಿತವಾಗಿ ಸಂಚರಿಸುವುದನ್ನು ಖಚಿತಪಡಿಸುವುದು. ಲೋಕೋ ಪೈಲಟ್ಗಳು (ರೈಲು ಚಾಲಕರು), ನಿಲ್ದಾಣದ ಮಾಸ್ಟರ್ಗಳು ಮತ್ತು ಸಿಗ್ನಲಿಂಗ್ ಸಿಬ್ಬಂದಿಗಳ ನಡುವೆ ಸಮನ್ವಯತೆಯನ್ನು ಕಾಪಾಡುವುದು. ತುರ್ತು ಪರಿಸ್ಥಿತಿ ನಿರ್ವಹಣೆ: ಯಾವುದೇ ವಿಳಂಬ ಅಥವಾ ತಾಂತ್ರಿಕ ದೋಷಗಳು ಸಂಭವಿಸಿದಾಗ ತ್ವರಿತವಾಗಿ ಪರಿಹಾರ ಕ್ರಮಗಳನ್ನು ಕೈಗೊಳ್ಳುವುದು.
📌ನೇಮಕಾತಿ ಮತ್ತು ಅರ್ಹತೆ
ವಿದ್ಯಾರ್ಹತೆ: ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿರಬೇಕು.
ವಯೋಮಿತಿ: ಅಭ್ಯರ್ಥಿಯ ವಯಸ್ಸು 2026 ಜುಲೈ 01 ರಂತೆ 20 ರಿಂದ 33 ವರ್ಷಗಳ ನಡುವೆ ಇರಬೇಕು (ಮೀಸಲಾತಿ ನಿಯಮಾವಳಿಗಳಂತೆ ವಯೋಮಿತಿ ಸಡಿಲಿಕೆ ಇರುತ್ತದೆ).
ವಯಸ್ಸಿನ ಸಡಿಲಿಕೆ
• ಒಬಿಸಿ ಅಭ್ಯರ್ಥಿಗಳಿಗೆ: 3 ವರ್ಷಗಳು
• SC/ST ಅಭ್ಯರ್ಥಿಗಳಿಗೆ: 5 ವರ್ಷಗಳು
• ಪಿಡಬ್ಲ್ಯೂಬಿಡಿ (ಸಾಮಾನ್ಯ) ಅಭ್ಯರ್ಥಿಗಳಿಗೆ: 10 ವರ್ಷಗಳು
• ಪಿಡಬ್ಲ್ಯೂಬಿಡಿ (ಒಬಿಸಿಅಭ್ಯರ್ಥಿಗಳಿಗೆ :13 ವರ್ಷಗಳು
• ಪಿಡಬ್ಲ್ಯೂಬಿಡಿ (ಎಸ್ಸಿ/ಎಸ್ಟಿ) ಅಭ್ಯರ್ಥಿಗಳಿಗೆ: 15 ವರ್ಷಗಳು
📌ಆಯ್ಕೆ ಪ್ರಕ್ರಿಯೆ
ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
ಆಪ್ಟಿಟ್ಯೂಡ್ ಟೆಸ್ಟ್ (CBAT)
ದಾಖಲೆ ಪರಿಶೀಲನೆ (DV)
ವೈದ್ಯಕೀಯ ಪರೀಕ್ಷೆ ಇರುತ್ತದೆ
📌ಅರ್ಜಿ ಶುಲ್ಕ
• ಇತರ ಎಲ್ಲಾ ಅಭ್ಯರ್ಥಿಗಳಿಗೆ: 500 ರೂ.
• ಮಾಜಿ ಸೈನಿಕರು, ಎಸ್ಸಿ / ಎಸ್ಟಿ, ಇಬಿಸಿ, ಮಾಜಿ ಸೈನಿಕರು, ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ: 250 ರೂ.
• ಪಾವತಿ ವಿಧಾನ: ಆನ್ಲೈನ್
📌ಅರ್ಜಿ ಸಲ್ಲಿಸುವುದು ಹೇಗೆ?
• ಮೊದಲಿಗೆ ರೈಲ್ವೆಯ ಅಧಿಕೃತ ವೆಬ್ಸೈಟ್ಗೆ (https://www.rrbapply.gov.in/#/auth/landing) ಭೇಟಿ ನೀಡಿ.
• ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.
• ‘Apply Online’ ಲಿಂಕ್ ಮೇಲೆ ಕ್ಲಿಕ್ ಮಾಡಿ.
• ನಿಮ್ಮ ಸರಿಯಾದ ಮಾಹಿತಿಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
• ಶುಲ್ಕ ಪಾವತಿಸಿ, ಅರ್ಜಿಯನ್ನು ಸಲ್ಲಿಸಿ.
• ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿಯ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.






