LIC ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ನೇಮಕಾತಿ; ಯಾರು ಅರ್ಜಿ ಸಲ್ಲಿಸಬಹುದು?

Photo Credit : LIC Housing Finance
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿದ್ದರೆ, ತಿಂಗಳಿಗೆ 16,650 ರೂ.ವರೆಗೆ ಸ್ಟೈಪೆಂಡ್ ಪಡೆಯುವ ಅವಕಾಶವಿದೆ.
ಭಾರತದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ LIC ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (LIC HFL) ದೇಶಾದ್ಯಂತ ಖಾಲಿ ಇರುವ 232 ಅಪ್ರೆಂಟಿಸ್ (Apprentice) ಹುದ್ದೆಗಳ ಭರ್ತಿಗೆ ಅಧಿಕೃತವಾಗಿ ಚಾಲನೆ ನೀಡಿದ್ದು, ಆನ್ಲೈನ್ ಅರ್ಜಿ ಸಲ್ಲಿಕೆ ಈಗಾಗಲೇ ಆರಂಭವಾಗಿದೆ.
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿದ್ದರೆ, ತಿಂಗಳಿಗೆ 16,650 ರೂ.ವರೆಗೆ ಸ್ಟೈಪೆಂಡ್ ಪಡೆಯುವ ಅವಕಾಶವಿದೆ. ಅರ್ಜಿ ಸಲ್ಲಿಕೆಗೆ ಅರ್ಹತೆ, ವಯೋಮಿತಿ ಮತ್ತು ಕೊನೆಯ ದಿನಾಂಕದ ಸಂಪೂರ್ಣ ವಿವರ ಇಲ್ಲಿದೆ. ಅರ್ಹ ಅಭ್ಯರ್ಥಿಗಳು ಈ ಕೆಳಗಿನ ಲಿಂಕ್ ಬಳಸಿ ಅರ್ಜಿ ಸಲ್ಲಿಸಬಹುದು: https://www.lichousing.com/careers
►ಪ್ರಮುಖ ದಿನಾಂಕಗಳು
* ಅರ್ಜಿ ಸಲ್ಲಿಸುವ ಅವಧಿ: 20 ಅಕ್ಟೋಬರ್ 2026ರಿಂದ 1 ನವೆಂಬರ್ 2026ರವರೆಗೆ.
* ಪರೀಕ್ಷಾ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 1 ನವೆಂಬರ್ 2026.
* ಆನ್ಲೈನ್ ಪ್ರವೇಶ ಪರೀಕ್ಷೆ: 7 ನವೆಂಬರ್ 2026.
* ದಾಖಲೆಗಳ ಪರಿಶೀಲನೆ ಮತ್ತು ಸಂದರ್ಶನ: 15 ನವೆಂಬರ್ 2026.
►ಪ್ರಮುಖ ಮಾಹಿತಿ
* ನೇಮಕಾತಿ ಸಂಸ್ಥೆ: LIC ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (LIC HFL)
* ಹುದ್ದೆಯ ಹೆಸರು: ಅಪ್ರೆಂಟಿಸ್ (Apprentice)
* ಒಟ್ಟು ಹುದ್ದೆಗಳು: 232
* ಉದ್ಯೋಗ ಸ್ಥಳ: ಅಖಿಲ ಭಾರತ (All India)
* ಮಾಸಿಕ ಸ್ಟೈಪೆಂಡ್: 14,150ರಿಂದ 16,650 ರೂ.
* ಅರ್ಜಿ ಸಲ್ಲಿಕೆ ವಿಧಾನ: ಆನ್ಲೈನ್
►ಕರ್ನಾಟಕದಲ್ಲಿ ಖಾಲಿ ಇರುವ ಹುದ್ದೆಗಳು
* ಬೆಂಗಳೂರು: 13
* ಬೆಳಗಾವಿ, ಬಳ್ಳಾರಿ, ದಾವಣಗೆರೆ, ಹಾಸನ, ಹೊಸಕೋಟೆ, ಹುಬ್ಬಳ್ಳಿ, ಮಂಡ್ಯ, ಮಂಗಳೂರು, ಮೈಸೂರು, ಸರ್ಜಾಪುರ ಮತ್ತು ತುಮಕೂರು: ತಲಾ 1 ಹುದ್ದೆ.
►ಅರ್ಹತೆ
* ವಯಸ್ಸು: 1 ಅಕ್ಟೋಬರ್ 2026ರಂತೆ 20ರಿಂದ 25 ವರ್ಷಗಳಾಗಿರಬೇಕು.
* 1 ಅಕ್ಟೋಬರ್ 2026ರಂದು ಅಥವಾ ಅದಕ್ಕೂ ಮೊದಲು ಯಾವುದೇ ವಿಭಾಗದಲ್ಲಿ ಪದವಿ ಪೂರ್ಣಗೊಳಿಸಿರಬೇಕು. ಆದರೆ, ಪದವಿ ಪೂರ್ಣಗೊಳಿಸಿದ ದಿನಾಂಕವು 1 ಅಕ್ಟೋಬರ್ 2001ಕ್ಕಿಂತ ಮುಂಚಿನದಾಗಿರಬಾರದು.
* ಬೇರೆ ಯಾವುದೇ ಸಂಸ್ಥೆಯೊಂದಿಗೆ ಪ್ರಸ್ತುತ ಚಾಲ್ತಿಯಲ್ಲಿರುವ, ಪೂರ್ಣಗೊಂಡಿರುವ ಅಥವಾ ರದ್ದುಗೊಂಡಿರುವ ಅಪ್ರೆಂಟಿಸ್ಶಿಪ್ ಒಪ್ಪಂದವನ್ನು ಹೊಂದಿರಬಾರದು.
►ಪರೀಕ್ಷಾ ಶುಲ್ಕ
* SC/ST: 200 ರೂ. + GST
* PwBD (ವಿಕಲಚೇತನರು): 200 ರೂ. + GST
* ಸಾಮಾನ್ಯ/EWS/OBC (ಪುರುಷರು): 800 ರೂ. + GST
* ಸಾಮಾನ್ಯ/EWS/OBC (ಮಹಿಳೆಯರು/ತೃತೀಯ ಲಿಂಗಿಗಳು): 600 ರೂ. + GST
►ಆನ್ಲೈನ್ ಪರೀಕ್ಷೆ
* BFSI ಸೆಕ್ಟರ್ ಸ್ಕಿಲ್ ಕೌನ್ಸಿಲ್ ಆಫ್ ಇಂಡಿಯಾ (BFSI SSC) ವತಿಯಿಂದ ಪರೀಕ್ಷೆ ನಡೆಸಲಾಗುತ್ತದೆ.
* ಅವಧಿ: 60 ನಿಮಿಷಗಳು.
* ವಿಭಾಗಗಳು (ತಲಾ 25 ಅಂಕಗಳು):
* ಸಾಮಾನ್ಯ/ಹಣಕಾಸು ಜಾಗೃತಿ (General/Financial Awareness)
* ಸಾಮಾನ್ಯ ಇಂಗ್ಲಿಷ್ (General English)
* ತಾರ್ಕಿಕ ಸಾಮರ್ಥ್ಯ ಮತ್ತು ಕಂಪ್ಯೂಟರ್ ಜ್ಞಾನ (Reasoning Ability & Computer Aptitude)
* ಸಂಖ್ಯಾತ್ಮಕ ಸಾಮರ್ಥ್ಯ (Quantitative Aptitude)
* ಒಟ್ಟು: 100 ಪ್ರಶ್ನೆಗಳು, 100 ಅಂಕಗಳು.
►ಅರ್ಜಿ ಸಲ್ಲಿಸುವ ಪ್ರಕ್ರಿಯೆ
* NATS ಪೋರ್ಟಲ್ನಲ್ಲಿ ನೋಂದಾಯಿಸಿಕೊಳ್ಳಿ.
* LIC HFL ಅಪ್ರೆಂಟಿಸ್ಶಿಪ್ ಅವಕಾಶಕ್ಕಾಗಿ ಅರ್ಜಿ ಸಲ್ಲಿಸಿ.
* BFSI ಸೆಕ್ಟರ್ ಸ್ಕಿಲ್ ಕೌನ್ಸಿಲ್ (BFSI SSC) ನಿಂದ ಮಾಹಿತಿ/ಸಂದೇಶವನ್ನು ಪಡೆಯಿರಿ.
* ಪರೀಕ್ಷಾ ಶುಲ್ಕವನ್ನು ಪಾವತಿಸಿ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.






