MRPL ನೇಮಕಾತಿ | ಅಪ್ರೆಂಟಿಸ್ ಟ್ರೈನಿ ಹುದ್ದೆಗಳ ಭರ್ತಿಗೆ ನಾಳೆ ಕೊನೆಯ ದಿನಾಂಕ!

Photo Credit : mrpl.co.in
ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅಕ್ಟೋನರ್ 13ರ ಒಳಗೆ ಆನ್ಲೈನ್ ಮೂಲಕ ತಕ್ಷಣ ಅರ್ಜಿ ಸಲ್ಲಿಸಬಹುದು.
ಕೇಂದ್ರ ಸರ್ಕಾರದ ಪ್ರಮುಖ ಸಂಸ್ಥೆಯಾದ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಗ್ರಾಜುಯೇಟ್ ಮತ್ತು ಟೆಕ್ನಿಷಿಯನ್ ಅಪ್ರೆಂಟಿಸ್ ಟ್ರೈನಿ ಹುದ್ದೆಗಳ ಭರ್ತಿಗೆ ಬೃಹತ್ ನೇಮಕಾತಿ ಚಾಲನೆ ನೀಡಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ತಡಮಾಡದೆ ಆನ್ಲೈನ್ ಮೂಲಕ ತಕ್ಷಣ ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು ಈ ಮುಂದಿನ ಲಿಂಕ್ ಬಳಸಿ ಅರ್ಜಿ ಸಲ್ಲಿಸಬಹುದು:
📌ಪ್ರಮುಖ ದಿನಾಂಕಗಳು:
* ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 09 ಅಕ್ಟೋಬರ್ 2026
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:13 ಅಕ್ಟೋಬರ್ 2026
📌ಹುದ್ದೆಯ ವಿವರಗಳು
* ಸಂಸ್ಥೆಯ ಹೆಸರು: ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL)
* ಹುದ್ದೆಗಳ ಹೆಸರು: ಗ್ರಾಜುಯೇಟ್ (ಪದವೀಧರ) ಅಪ್ರೆಂಟಿಸ್ ಟ್ರೈನಿ, ಟೆಕ್ನಿಷಿಯನ್ (ತಂತ್ರಜ್ಞ) ಅಪ್ರೆಂಟಿಸ್ ಟ್ರೈನಿ
* ಹುದ್ದೆಗಳ ಸಂಖ್ಯೆ: ವಿವಿಧ ಹುದ್ದೆಗಳು
* ಉದ್ಯೋಗ ಸ್ಥಳ: ಮಂಗಳೂರು, ಕರ್ನಾಟಕ
📌ಲಭ್ಯವಿರುವ ಹುದ್ದೆಗಳು
* ಪದವೀಧರ ಅಪ್ರೆಂಟಿಸ್ ತರಬೇತಿದಾರರು (GET) – ಎಂಜಿನಿಯರಿಂಗ್ ಪದವೀಧರರು.
* ತಂತ್ರಜ್ಞ ಅಪ್ರೆಂಟಿಸ್ ತರಬೇತಿದಾರರು (THAT) – ಡಿಪ್ಲೊಮಾ ಪದವೀಧರರು.
* ತರಬೇತಿ ಅವಧಿ: 1 ವರ್ಷ.
📌ಯಾರೆಲ್ಲ ಅರ್ಜಿ ಸಲ್ಲಿಸಬಹುದು?
* National Apprenticeship Training Scheme ಪೋರ್ಟಲ್ನಲ್ಲಿ ನೋಂದಾಯಿಸಿರಬೇಕು ಮತ್ತು ವಿಶಿಷ್ಟ ನೋಂದಣಿ ಸಂಖ್ಯೆಯನ್ನು (unique registration number) ಒದಗಿಸಬೇಕು.
* 2022–2026ರ ಅವಧಿಯಲ್ಲಿ ಎಂಜಿನಿಯರಿಂಗ್ ಪದವಿ ಅಥವಾ ಡಿಪ್ಲೊಮಾವನ್ನು ಪೂರ್ಣಗೊಳಿಸಿರಬೇಕು.
* ಕನಿಷ್ಠ ಒಟ್ಟು ಅಂಕಗಳು:
UR/EWS: 55%
OBC (NCL): 45%
SC/ST/PwBD: 40%
* ಈಗಾಗಲೇ ಅಪ್ರೆಂಟಿಸ್ಶಿಪ್ ಅಥವಾ ಕೆಲಸದ ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಹರಲ್ಲ.
* ಫಲಿತಾಂಶಕ್ಕಾಗಿ ಕಾಯುತ್ತಿರುವವರು ಅಥವಾ ಪ್ರಮಾಣಪತ್ರಗಳನ್ನು ಹೊಂದಿರದವರು ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.
* ಈ ನೇಮಕಾತಿಯ ಅತ್ಯಂತ ದೊಡ್ಡ ವಿಶೇಷತೆಯೆಂದರೆ ಯಾವುದೇ ರೀತಿಯ ಅರ್ಜಿ ಶುಲ್ಕವಿರುವುದಿಲ್ಲ.
📌ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?
ಆಸಕ್ತ ಅಭ್ಯರ್ಥಿಗಳನ್ನು ಅರ್ಹತೆಯ ಆಧಾರದ ಮೇಲೆ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
📌ಅಗತ್ಯವಿರುವ ದಾಖಲೆಗಳು
* NATS (National Apprenticeship Training Scheme) ನೋಂದಣಿ ಪ್ರಮಾಣಪತ್ರ.
* ವಯಸ್ಸಿನ ದೃಢೀಕರಣ ದಾಖಲೆ (SSLC/ಮೆಟ್ರಿಕ್ಯುಲೇಷನ್/ಜನನ ಪ್ರಮಾಣಪತ್ರ).
* ಶೈಕ್ಷಣಿಕ ಅಂಕಪಟ್ಟಿಗಳು ಮತ್ತು ಪ್ರಮಾಣಪತ್ರಗಳು (10ನೇ ತರಗತಿ, 12ನೇ ತರಗತಿ, ಡಿಪ್ಲೊಮಾ, ಪದವಿ).
* CGPA-ಯಿಂದ ಶೇಕಡಾವಾರು ಅಂಕಗಳಿಗೆ ಪರಿವರ್ತಿಸಿದ ವಿವರದ ದಾಖಲೆ (ಅನ್ವಯವಾದರೆ).
* ಜಾತಿ/ಆದಾಯ ಪ್ರಮಾಣಪತ್ರಗಳು (1 ಏಪ್ರಿಲ್ 2026 ರ ನಂತರದ ಇತ್ತೀಚಿನ OBC ಪ್ರಮಾಣಪತ್ರ).
* PwBD ಪ್ರಮಾಣಪತ್ರ, ಆಧಾರ್ ಕಾರ್ಡ್ ಮತ್ತು 2 ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳು.
📌ಆನ್ಲೈನ್ನಲ್ಲಿ ಸುಲಭವಾಗಿ ಅರ್ಜಿ ಸಲ್ಲಿಸುವುದು ಹೇಗೆ?
* ಮೊದಲಿಗೆ ಎಂಆರ್ಪಿಎಲ್ ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ನಿಮ್ಮ ಅರ್ಹತೆ ಖಚಿತಪಡಿಸಿಕೊಳ್ಳಿ.
* ನಿಮ್ಮ ಬಳಿ ಚಾಲ್ತಿಯಲ್ಲಿರುವ ಇಮೇಲ್ ಐಡಿ (Email ID) ಮತ್ತು ಮೊಬೈಲ್ ಸಂಖ್ಯೆ ಇರುವುದನ್ನು ಖಚಿತಪಡಿಸಿಕೊಳ್ಳಿ.
* ಗುರುತಿನ ಚೀಟಿ, ವಯಸ್ಸಿನ ಪುರಾವೆ, ಶೈಕ್ಷಣಿಕ ಅಂಕಪಟ್ಟಿಗಳು, ರೆಸ್ಯೂಮ್ ಮತ್ತು ಅಗತ್ಯವಿದ್ದರೆ ಅನುಭವ ಪ್ರಮಾಣಪತ್ರಗಳನ್ನು ಸಿದ್ಧವಾಗಿಟ್ಟುಕೊಳ್ಳಿ.
* ನೀಡಲಾದ ಅಧಿಕೃತ ಆನ್ಲೈನ್ ಅರ್ಜಿ ಲಿಂಕ್ ಮೇಲೆ ಕ್ಲಿಕ್ ಮಾಡಿ (https://nats.education.gov.in/).
* ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ, ನಿಮ್ಮ ಇತ್ತೀಚಿನ ಫೋಟೋ ಹಾಗೂ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
* ಕೊನೆಯದಾಗಿ ‘Submit’ ಬಟನ್ ಕ್ಲಿಕ್ ಮಾಡಿ. ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ಸಂಖ್ಯೆಯನ್ನು (Application Number) ಸೇವ್ ಮಾಡಿಟ್ಟುಕೊಳ್ಳಿ.
* ಹೆಚ್ಚಿನ ಮಾಹಿತಿಗೆ apprentice@mrpl.co.in ಇಮೇಲ್ ಐಡಿಗೆ ಇಮೇಲ್ ಬರೆಯಬಹುದು.






