MSRUAS ನೇಮಕಾತಿ; ಯಾರು ಅರ್ಜಿ ಸಲ್ಲಿಸಬಹುದು?

Photo Credit : msruas.ac.in
MSRUAS ನೇಮಕಾತಿ ನಿಯಮಗಳ ಅಧಿಸೂಚನೆ ಪ್ರಕಾರ, ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿರಬೇಕು. ಸಂಶೋಧನಾ ಸಹಾಯಕ ಹುದ್ದೆಗೆ M.Phil./Ph.D. ಅರ್ಹತೆಯೂ ಅಗತ್ಯವಾಗಿದೆ.
ಬೆಂಗಳೂರಿನ ಪ್ರತಿಷ್ಠಿತ ಎಂ.ಎಸ್. ರಾಮಯ್ಯ ಅನ್ವಯಿಕ ವಿಜ್ಞಾನ ವಿಶ್ವವಿದ್ಯಾಲಯವು (MSRUAS) ಸಂಶೋಧನಾ ಸಹಾಯಕ ಮತ್ತು ಕ್ಷೇತ್ರ ತನಿಖಾಧಿಕಾರಿ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 30ರೊಳಗೆ ಇಮೇಲ್ ಮೂಲಕ ಅರ್ಜಿ ಸಲ್ಲಿಸಬಹುದು.
►ಪ್ರಮುಖ ದಿನಾಂಕ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30 ಅಕ್ಟೋಬರ್ 2026
►ನೇಮಕಾತಿಯ ವಿವರಗಳು
• ಸಂಸ್ಥೆ: ಎಂ.ಎಸ್. ರಾಮಯ್ಯ ಅನ್ವಯಿಕ ವಿಜ್ಞಾನ ವಿಶ್ವವಿದ್ಯಾಲಯ, ಬೆಂಗಳೂರು
• ಹುದ್ದೆಗಳು: ಸಂಶೋಧನಾ ಸಹಾಯಕ ಮತ್ತು ಕ್ಷೇತ್ರ ತನಿಖಾಧಿಕಾರಿ
• ಒಟ್ಟು ಹುದ್ದೆಗಳು: 3
• ಉದ್ಯೋಗ ಸ್ಥಳ: ಚಿಕ್ಕಬಳ್ಳಾಪುರ, ಕರ್ನಾಟಕ
►ಹುದ್ದೆ ಮತ್ತು ಮಾಸಿಕ ಸಂಭಾವನೆ
• ಸಂಶೋಧನಾ ಸಹಾಯಕ (Research Associate): 1 ಹುದ್ದೆ; 47,000 ರೂ.
• ಕ್ಷೇತ್ರ ತನಿಖಾಧಿಕಾರಿ (Field Investigator): 2 ಹುದ್ದೆಗಳು; 20,000 ರೂ.
►ಶೈಕ್ಷಣಿಕ ಅರ್ಹತೆಗಳೇನು?
ಸಂಶೋಧನಾ ಸಹಾಯಕ
• ಸಂಬಂಧಿತ ವಿಷಯ ಅಥವಾ ಸಮಾಜ ವಿಜ್ಞಾನ ವಿಭಾಗದಲ್ಲಿ ಕನಿಷ್ಠ ಶೇ 55ರಷ್ಟು ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಪಡೆದಿರಬೇಕು.
• NET, M.Phil. ಅಥವಾ Ph.D. ಅರ್ಹತೆ ಹೊಂದಿರಬೇಕು.
• ಕನಿಷ್ಠ ಎರಡು ವರ್ಷಗಳ ಸಂಶೋಧನಾ ಅನುಭವ ಅಗತ್ಯ.
• ಮಧ್ಯಪ್ರವೇಶ ಚಟುವಟಿಕೆಗಳು, ಸಂಶೋಧನೆ, ದತ್ತಾಂಶ ಸಂಗ್ರಹಣೆ, ಕೋಡಿಂಗ್, ವಿಶ್ಲೇಷಣೆ ಮತ್ತು ವರದಿ ಬರವಣಿಗೆ ಈ ಹುದ್ದೆಯ ಜವಾಬ್ದಾರಿಗಳಾಗಿವೆ.
►ಕ್ಷೇತ್ರ ತನಿಖಾಧಿಕಾರಿ
• ಯಾವುದೇ ಸಮಾಜ ವಿಜ್ಞಾನ ವಿಭಾಗದಲ್ಲಿ ಕನಿಷ್ಠ ಶೇ 55ರಷ್ಟು ಅಂಕಗಳೊಂದಿಗೆ ಪದವಿ ಪಡೆದಿರಬೇಕು.
• ನಾಲ್ಕು ವರ್ಷಗಳ ಪದವಿ ಕಾರ್ಯಕ್ರಮ ಪೂರ್ಣಗೊಳಿಸಿದವರು, ಸ್ನಾತಕೋತ್ತರ ಅರ್ಹತೆ ಹೊಂದಿರುವವರು ಹಾಗೂ ಸಂಶೋಧನೆ ಅಥವಾ ಕ್ಷೇತ್ರಕಾರ್ಯದ ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತದೆ.
• ಮಧ್ಯಪ್ರವೇಶ ಚಟುವಟಿಕೆಗಳಿಗೆ ನೆರವು, ಕ್ಷೇತ್ರಮಟ್ಟದಲ್ಲಿ ದತ್ತಾಂಶ ಸಂಗ್ರಹಣೆ, ಕೋಡಿಂಗ್, ವಿಶ್ಲೇಷಣೆ ಮತ್ತು ದಾಖಲಾತಿ ನಿರ್ವಹಣೆ ಜವಾಬ್ದಾರಿಗಳಾಗಿವೆ.
►ಆದ್ಯತೆಯ ಕೌಶಲಗಳು
• ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಪ್ರಾವೀಣ್ಯತೆ.
• ಕ್ಷೇತ್ರ ಸಂಶೋಧನೆ ಮತ್ತು ದತ್ತಾಂಶ ಸಂಗ್ರಹಣೆಯಲ್ಲಿ ಅನುಭವ.
• ಲಾಜಿಸ್ಟಿಕ್ಸ್ ಸಮನ್ವಯ ಹಾಗೂ ಸಂಶೋಧನಾ ಅಧ್ಯಯನಗಳ ಪ್ರಸಾರದಲ್ಲಿ ಅನುಭವ.
►ಪ್ರಮುಖ ಸೂಚನೆಗಳು
• ಹುದ್ದೆಗಳು ಸಂಪೂರ್ಣವಾಗಿ ತಾತ್ಕಾಲಿಕವಾಗಿದ್ದು, ಯೋಜನಾ ಆಧಾರಿತವಾಗಿವೆ.
• ಈ ನೇಮಕಾತಿಯಿಂದ ನಿಯಮಿತ ಉದ್ಯೋಗದ ಹಕ್ಕು ದೊರೆಯುವುದಿಲ್ಲ.
• ಅರ್ಜಿಗಳ ಪರಿಶೀಲನೆ ಬಳಿಕ ಆಯ್ಕೆಯಾದ ಅಭ್ಯರ್ಥಿಗಳನ್ನು ಮಾತ್ರ ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ.
• ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳಿಗೆ ಪ್ರಯಾಣ ಭತ್ಯೆ (TA/DA) ನೀಡಲಾಗುವುದಿಲ್ಲ.
►ಅರ್ಜಿ ಸಲ್ಲಿಸುವುದು ಹೇಗೆ?
1. MSRUAS ನೇಮಕಾತಿಯ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಿ.
2. ವೈಯಕ್ತಿಕ ವಿವರಗಳು, ಶೈಕ್ಷಣಿಕ ಅರ್ಹತೆಗಳು ಮತ್ತು ಕೆಲಸದ ಅನುಭವವನ್ನು ಒಳಗೊಂಡ CV ಅಥವಾ ಬಯೋಡೇಟಾ ಸಿದ್ಧಪಡಿಸಿಕೊಳ್ಳಿ.
3. ಶೈಕ್ಷಣಿಕ ಅಂಕಪಟ್ಟಿಗಳು, ಪದವಿ ಪ್ರಮಾಣಪತ್ರಗಳು, ಅನುಭವ ಪ್ರಮಾಣಪತ್ರಗಳು ಹಾಗೂ ಇತರ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ.
4. CV ಮತ್ತು ಅರ್ಹತೆಗೆ ಸಂಬಂಧಿಸಿದ ದಾಖಲೆಗಳನ್ನು ಒಂದೇ PDF ಫೈಲ್ನಲ್ಲಿ ಜೋಡಿಸಿ.
5. ಅರ್ಜಿ ಸಲ್ಲಿಸುವ ಹುದ್ದೆಯ ಹೆಸರನ್ನು ಇಮೇಲ್ನ ವಿಷಯದ ಸಾಲಿನಲ್ಲಿ ಸ್ಪಷ್ಟವಾಗಿ ನಮೂದಿಸಿ.
6. ಸಿದ್ಧಪಡಿಸಿದ ಅರ್ಜಿ ಮತ್ತು ದಾಖಲೆಗಳನ್ನು ಕೆಳಗಿನ ಇಮೇಲ್ ವಿಳಾಸಕ್ಕೆ ಕಳುಹಿಸಿ.
ಅರ್ಜಿ ಸಲ್ಲಿಸುವ ಇಮೇಲ್: aishwarya.ss@msruas.ac.in






