ನಬಾರ್ಡ್ ನಲ್ಲಿ ಅಭಿವೃದ್ಧಿ ಸಹಾಯಕ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ; ಯಾರು ಅರ್ಜಿ ಸಲ್ಲಿಸಬಹುದು?

ನಬಾರ್ಡ್ | Photo : ibpsreg.ibps.in
ನೇಮಕಾತಿ ಅರ್ಹತೆ, ಹುದ್ದೆಯ ಮಾಹಿತಿ, ಆಯ್ಕೆ ವಿಧಾನ, ವಯಸ್ಸಿನ ಮಿತಿ, ವೇತನ ಶ್ರೇಣಿ ಮತ್ತು ಇತರ ಎಲ್ಲಾ ಮಾಹಿತಿಗಳಿಗೆ ಅಧಿಸೂಚನೆಯನ್ನು ಓದಬಹುದು.
ನಬಾರ್ಡ್ ಅಥವಾ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಗ್ರೂಪ್ ಬಿ ಅಭಿವೃದ್ಧಿ ಸಹಾಯಕ ನೇಮಕಾತಿ 2026 ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ನಬಾರ್ಡ್ ಡಿಎ ನೇಮಕಾತಿಯಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು 2026 ಜನವರಿ 17ರಿಂದ 2026 ಫೆಬ್ರವರಿ 03ರ ನಡುವೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ನೇಮಕಾತಿ ಅರ್ಹತೆ, ಹುದ್ದೆಯ ಮಾಹಿತಿ, ಆಯ್ಕೆ ವಿಧಾನ, ವಯಸ್ಸಿನ ಮಿತಿ, ವೇತನ ಶ್ರೇಣಿ ಮತ್ತು ಇತರ ಎಲ್ಲಾ ಮಾಹಿತಿಗಳಿಗೆ ಅಧಿಸೂಚನೆಯನ್ನು ಓದಿ. ಆಸಕ್ತ ಅಭ್ಯರ್ಥಿಗಳು ಕೆಳಗಿನ ಲಿಂಕ್ ಬಳಸಿ ಅರ್ಜಿ ಸಲ್ಲಿಸಬಹುದು:
https://ibpsreg.ibps.in/nabhindec25/
ಪ್ರಮುಖ ದಿನಾಂಕಗಳು
• ಆನ್ಲೈನ್ ಅರ್ಜಿ ಆರಂಭ: 17 ಜನವರಿ 2026
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03 ಫೆಬ್ರವರಿ 2026
• ಶುಲ್ಕ ಪಾವತಿಗೆ ಕೊನೆಯ ದಿನಾಂಕ: 03 ಫೆಬ್ರವರಿ 2026
• ಪರೀಕ್ಷೆ ದಿನಾಂಕ: ಗ್ರೂಪ್ ಬಿ ಹಂತ 1: 21 ಫೆಬ್ರವರಿ 2026
ಗ್ರೂಪ್ ಬಿ ಹಂತ 2: 12 ಎಪ್ರಿಲ್ 2026
• ಭರ್ತಿ ಕಾರ್ಡ್: ಪರೀಕ್ಷೆಗೆ ಮೊದಲು
• ಫಲಿತಾಂಶ ದಿನಾಂಕ: ಶೀಘ್ರವೇ ಅಪ್ಡೇಟ್ ಮಾಡಲಾಗುವುದು.
ವಿವರಗಳಿಗೆ ಅಭ್ಯರ್ಥಿಗಳು ಈ ಕೆಳಗಿನ ಎಕ್ಸಿಮ್ ಬ್ಯಾಂಕ್ನ ಅಧಿಕೃತ ವೆಬ್ತಾಣವನ್ನು ಪರೀಕ್ಷಿಸಬೇಕು:
ಅರ್ಜಿ ಶುಲ್ಕ
• ಜನರಲ್/ಒಬಿಸಿ/ಇಡಬ್ಲ್ಯುಎಸ್: 550 ರೂ.
• ಎಸ್ಸಿ/ಎಸ್ಟಿ/ ಪಿಡಬ್ಲ್ಯುಡಿ: 100 ರೂ.
• ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಕ್ಯಾಶ್ ಕಾರ್ಡ್/ ಮೊಬೈಲ್ ವಾಲೆಟ್ ಮೂಲಕ ಪಾವತಿಸುವ ಅವಕಾಶವಿದೆ.
ವಯೋಮಿತಿ:
ಕನಿಷ್ಢ ವರ್ಷ: 21 ವರ್ಷಗಳು
ಗರಿಷ್ಠ ವರ್ಷ: 35 ವರ್ಷಗಳು
ನಬಾರ್ಡ್ ಗ್ರೂಪ್ ಬಿ ಅಭಿವೃದ್ಧಿ ಸಹಾಯಕ ನೇಮಕಾತಿ ಹುದ್ದೆಗೆ ಅವರ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆಯನ್ನು ನೀಡುತ್ತದೆ.
ಒಟ್ಟು ಹುದ್ದೆಗಳು
20 ಹುದ್ದೆಗಳು
ಹುದ್ದೆಗಳ ವಿವರ
ಗ್ರೂಪ್ ಬಿ ಅಭಿವೃದ್ಧಿ ಸಹಾಯಕ - 159 ಹುದ್ದೆಗಳು
ಅಭಿವೃದ್ಧಿ ಸಹಾಯಕ (ಹಿಂದಿ)- 03 ಹುದ್ದೆಗಳು
ವಿದ್ಯಾರ್ಹತೆ
ಗ್ರೂಪ್ ಬಿ ಅಭಿವೃದ್ಧಿ ಸಹಾಯಕ:
* ಭಾರತದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ ಶೇ 50 ರಷ್ಟು ಅಂಕಗಳೊಂದಿಗೆ ಯಾವುದೇ ವಿಭಾಗದಲ್ಲಿ ಪದವಿ (SC/ST/PWBD ಮತ್ತು ಮಾಜಿ ಸೈನಿಕರ ಅಭ್ಯರ್ಥಿಗಳಿಗೆ ಉತ್ತೀರ್ಣ) ಅಥವಾ ಸಮಾನ ಅರ್ಹತೆಯನ್ನು ಹೊಂದಿರಬೇಕು.
ಅಭಿವೃದ್ಧಿ ಸಹಾಯಕ (ಹಿಂದಿ)
* ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಹಿಂದಿ ಮತ್ತು ಇಂಗ್ಲಿಷ್ ಅನ್ನು ಕಡ್ಡಾಯ ಅಥವಾ ಐಚ್ಛಿಕ ವಿಷಯವಾಗಿ ಇಂಗ್ಲಿಷ್/ಹಿಂದಿ ಮಾಧ್ಯಮದಲ್ಲಿ ಕನಿಷ್ಠ ಶೇ 50 ರಷ್ಟು ಅಂಕಗಳೊಂದಿಗೆ (SC/ST/PWBD/EXS ಅಭ್ಯರ್ಥಿಗಳಿಗೆ ಉತ್ತೀರ್ಣ) ಪದವಿ ಅಥವಾ ಹಿಂದಿ ಮತ್ತು ಇಂಗ್ಲಿಷ್ ಅನ್ನು ಮುಖ್ಯ ವಿಷಯಗಳಾಗಿ ಕನಿಷ್ಠ ಶೇ 50 ರಷ್ಟು ಅಂಕಗಳೊಂದಿಗೆ (SC/ST/PWBD/EXS ಅಭ್ಯರ್ಥಿಗಳಿಗೆ ಉತ್ತೀರ್ಣ) ಪದವಿ.
* ಅಭ್ಯರ್ಥಿಯು ಇಂಗ್ಲಿಷ್ನಿಂದ ಹಿಂದಿಗೆ ಮತ್ತು ಪ್ರತಿಯಾಗಿ ಭಾಷಾಂತರಿಸಲು ಸಾಧ್ಯವಾಗಬೇಕು
* ಕಂಪ್ಯೂಟರ್ನಲ್ಲಿ ವರ್ಡ್ ಪ್ರೊಸೆಸಿಂಗ್ ಜ್ಞಾನ.







