ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್ ಬೋಧಕ ಹುದ್ದೆಗಳ ನೇಮಕಾತಿ

Photo Credit : Birla Institute of Technology and Science (BITS)
ಬಿಐಟಿಎಸ್ ಪಿಲಾನಿಯ ಬೆಂಗಳೂರಿನ ಕ್ಯಾಂಪಸ್ನಲ್ಲಿ ಉದ್ಯೋಗವಕಾಶ ಬಯಸುವವರಿಗೆ ಇಲ್ಲಿದೆ ಉತ್ತಮ ಅವಕಾಶ. ಆದರೆ ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನಾಂಕವಾಗಿದೆ.
ಬೆಂಗಳೂರಿನ ಪ್ರತಿಷ್ಠಿತ ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್ (BITS Pilani) ಬೆಂಗಳೂರು ಕ್ಯಾಂಪಸ್ನಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳ ಭರ್ತಿಗೆ ಅಧಿಕೃತ ಆನ್ಲೈನ್ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಈ ಮುಂದಿನ ಲಿಂಕ್ ಬಳಸಿ ಅರ್ಜಿ ಸಲ್ಲಿಸಬಹುದು: https://docs.google.com/forms/d/e/1FAIpQLSetgJOI1itBWjkn5TV91QNVJoRFQgpAFdPwJXvYpqX2V91hMw/viewform?pli=1
📌ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 30 ಜುಲೈ 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31 ಆಗಸ್ಟ್ 2026
📌ಹುದ್ದೆಯ ವಿವರಗಳು
ಸಂಸ್ಥೆಯ ಹೆಸರು: ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್ ಪಿಲಾನಿ (ಬಿಟ್ಸ್ ಪಿಲಾನಿ)
ಹುದ್ದೆಯ ಹೆಸರು: ಸಂದರ್ಶಕ ಅಧ್ಯಾಪಕರು / ಬೋಧಕರು
ಒಟ್ಟು ಹುದ್ದೆಗಳು: 6
ಉದ್ಯೋಗ ಸ್ಥಳ: ಬೆಂಗಳೂರು, ಕರ್ನಾಟಕ
📌ಶೈಕ್ಷಣಿಕ ಅರ್ಹತೆ
ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ Ph.D, BE/B.Tech ಅಥವಾ ME/M.Tech ಪೂರ್ಣಗೊಳಿಸಿರಬೇಕು
📌ಹುದ್ದೆಗಳ ಸಂಪೂರ್ಣ ವಿವರ:
1. ಅತಿಥಿ ಉಪನ್ಯಾಸಕರು - ಇಂಡಸ್ಟ್ರಿಯಲ್ ರೊಬೊಟಿಕ್ಸ್
ಅರ್ಹತೆ- ಮೆಕ್ಯಾನಿಕಲ್/ಎಲೆಕ್ಟ್ರಿಕಲ್/ರೊಬೊಟಿಕ್ಸ್/ಮೆಕಾಟ್ರಾನಿಕ್ಸ್ ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಪಿಎಚ್ಡಿ.
ಮುಖ್ಯಜ್ಞಾನ: ಇಂಡಸ್ಟ್ರಿಯಲ್ ರೊಬೊಟಿಕ್ಸ್.
2. ಅತಿಥಿ ಉಪನ್ಯಾಸಕರು – ಅಡಿಟಿವ್ ಮ್ಯಾನುಫ್ಯಾಕ್ಚರಿಂಗ್
ಅರ್ಹತೆ- ಮೆಕ್ಯಾನಿಕಲ್ ಎಂಜಿನಿಯರಿಂಗ್ ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಪಿಎಚ್ಡಿ.
ಮುಖ್ಯ ಜ್ಞಾನ: ಅಡಿಟಿವ್ ಮ್ಯಾನುಫ್ಯಾಕ್ಚರಿಂಗ್, ಅಡ್ವಾನ್ಸ್ಡ್ ಮೆಟೀರಿಯಲ್ಸ್, ಅಡ್ವಾನ್ಸ್ಡ್ ಪ್ರೊಸೆಸಸ್
3. ಅತಿಥಿ ಉಪನ್ಯಾಸಕರು – ಮ್ಯಾನುಫ್ಯಾಕ್ಚರಿಂಗ್ನಲ್ಲಿ ಮೆಷಿನ್ ವಿಷನ್ & ಕಂಪ್ಯೂಟರ್ ವಿಷನ್
ಅರ್ಹತೆ- ಮೆಕ್ಯಾನಿಕಲ್/ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್/ಕಂಪ್ಯೂಟರ್ ಸೈನ್ಸ್/AI-ML ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಪಿಎಚ್ಡಿ.
ಮುಖ್ಯಜ್ಞಾನ: ಮೆಷಿನ್ ವಿಷನ್ & ಕಂಪ್ಯೂಟರ್ ವಿಷನ್
4. ಹಿರಿಯ ಬೋಧಕ / ಬೋಧಕ - ಕೈಗಾರಿಕಾ ರೊಬೊಟಿಕ್ಸ್
ಅರ್ಹತೆ- ಮೆಕ್ಯಾನಿಕಲ್/ಮೆಕಾಟ್ರಾನಿಕ್ಸ್/ರೊಬೊಟಿಕ್ಸ್/ಆಟೊಮೇಷನ್/ಎಲೆಕ್ಟ್ರಿಕಲ್ನಲ್ಲಿ ಬಿ.ಟೆಕ್. (ಬೋಧಕ) ಅಥವಾ ಎಂ.ಟೆಕ್. (ಹಿರಿಯ ಬೋಧಕ).
5. ಹಿರಿಯ ಬೋಧಕ / ಬೋಧಕ - ಇಂಡಸ್ಟ್ರಿಯಲ್ IoT
ಅರ್ಹತೆ- ಬಿ.ಟೆಕ್. (ಬೋಧಕ) ಅಥವಾ ಎಂ.ಟೆಕ್. ಎಲೆಕ್ಟ್ರಾನಿಕ್ಸ್/ಎಲೆಕ್ಟ್ರಿಕಲ್/ಮೆಕಾಟ್ರಾನಿಕ್ಸ್/ ಇನ್ಸ್ಟ್ರುಮೆಂಟೇಶನ್ /ಕಂಪ್ಯೂಟರ್ ಸೈನ್ಸ್/ IoTಯಲ್ಲಿ (ಹಿರಿಯ ಬೋಧಕ).
6. ಹಿರಿಯ ಬೋಧಕ/ಬೋಧಕ- ಅಡಿಟಿವ್ ಮ್ಯಾನುಫ್ಯಾಕ್ಚರಿಂಗ್
ಅರ್ಹತೆ- ಎಲೆಕ್ಟ್ರಾನಿಕ್ಸ್/ಎಲೆಕ್ಟ್ರಿಕಲ್/ಮೆಕಾಟ್ರಾನಿಕ್ಸ್/ಇನ್ಸ್ಟ್ರುಮೆಂಟೇಶನ್/ಕಂಪ್ಯೂಟರ್ ಸೈನ್ಸ್/ IoTಯಲ್ಲಿ ಬಿ.ಟೆಕ್. (ಬೋಧಕ) ಅಥವಾ ಎಂ.ಟೆಕ್. (ಹಿರಿಯ ಬೋಧಕ).
📌ವಯೋಮಿತಿ
ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್ ಪಿಲಾನಿ ಅಧಿಕೃತ ಅಧಿಸೂಚನೆಯ ಪ್ರಕಾರ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಅರ್ಜಿ ಶುಲ್ಕವಿಲ್ಲ.
📌ಆಯ್ಕೆ ಪ್ರಕ್ರಿಯೆ
ಸಂದರ್ಶನ
📌ಅರ್ಜಿ ಸಲ್ಲಿಸುವುದು ಹೇಗೆ?
* ಮೊದಲಿಗೆ BITS Pilani ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
* ನೇಮಕಾತಿ ವಿಭಾಗದಲ್ಲಿ ಅಧಿಕೃತ ಅಧಿಸೂಚನೆ (Notification PDF) ಅನ್ನು ಸಂಪೂರ್ಣವಾಗಿ ಓದಿ ಅರ್ಹತೆಯನ್ನು ಖಚಿತಪಡಿಸಿಕೊಳ್ಳಿ.
* ಸೂಕ್ತವಾದ ಇಮೇಲ್ ಐಡಿ, ಮೊಬೈಲ್ ಸಂಖ್ಯೆ, ರೆಸ್ಯೂಮ್ (Resume), ವಯಸ್ಸಿನ ಪುರಾವೆ ಹಾಗೂ ಶೈಕ್ಷಣಿಕ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ.
* ಆನ್ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯ ವಿವರಗಳನ್ನು ಭರ್ತಿ ಮಾಡಿ, ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಅಪ್ಲೋಡ್ ಮಾಡಿ.
* ಅರ್ಜಿ ಪೂರ್ಣಗೊಂಡ ನಂತರ ಸಲ್ಲಿಸಿದ ಫಾರ್ಮ್ನ ಪ್ರತಿ ಅಥವಾ ಅಪ್ಲಿಕೇಶನ್ ಸಂಖ್ಯೆಯನ್ನು ಡೌನ್ಲೋಡ್ ಮಾಡಿ ಇಟ್ಟುಕೊಳ್ಳಿ.
📌ವಿಶೇಷ ಸೂಚನೆ
* ಆಂತರಿಕ ಮತ್ತು ಬಾಹ್ಯ ಅಭ್ಯರ್ಥಿಗಳಿಗೆ ಮುಕ್ತವಾಗಿದೆ.
* ಆಂತರಿಕ ಅರ್ಜಿದಾರರು ಸಮರ್ಥನೆ ಪತ್ರವನ್ನು ಸಲ್ಲಿಸಿರಬೇಕು.
* ಸೂಕ್ತ ಅಭ್ಯರ್ಥಿಗಳ ಉಲ್ಲೇಖಗಳನ್ನು ಪ್ರೋತ್ಸಾಹಿಸಲಾಗುತ್ತದೆ.






