ಆಧಾರ್ ಸೇವಾ ಕೇಂದ್ರದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ; ಯಾರು ಅರ್ಜಿ ಸಲ್ಲಿಸಬಹುದು?

Photo Credit : moneycontrol
ಆಧಾರ್ ಸೇವಾ ಕೇಂದ್ರದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಅಭ್ಯರ್ಥಿಗಳು ನಿಗದಿಪಡಿಸಿರುವ ದಿನಾಂಕದ ಒಳಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಈ ಕೆಳಗಿನಂತೆ ಮಾಹಿತಿ ನೀಡಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಲಿಂಕ್ ನಲ್ಲಿ ಅರ್ಜಿ ಸಲ್ಲಿಸಬಹುದು: https://csc.gov.in/ask
ಆಧಾರ್ ಸೇವಾ ಕೇಂದ್ರದ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10ನೇ ತರಗತಿ, 12ನೇ ತರಗತಿ, ಐಟಿಐ ಅಥವಾ ಡಿಪ್ಲೊಮಾವನ್ನು ಪೂರ್ಣಗೊಳಿಸಿರಬೇಕು.
► ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 11-02-2026
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 10-03-2026
► ಶೈಕ್ಷಣಿಕ ಅರ್ಹತೆ
ಆಧಾರ್ ಸೇವಾ ಕೇಂದ್ರದ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10ನೇ ತರಗತಿ, 12ನೇ ತರಗತಿ, ಐಟಿಐ ಅಥವಾ ಡಿಪ್ಲೊಮಾವನ್ನು ಪೂರ್ಣಗೊಳಿಸಿರಬೇಕು.
►ಹುದ್ದೆಗಳ ವಿವರ:
ಆಧಾರ್ ಮೇಲ್ವಿಚಾರಕರು/ಆಪರೇಟರ್
ಕರ್ನಾಟಕ: 34
ಉತ್ತರ ಪ್ರದೇಶ: 35
ಮಧ್ಯಪ್ರದೇಶ: 27
ಮಹಾರಾಷ್ಟ್ರ: 25
ಕೇರಳ: 17
ರಾಜಸ್ಥಾನ: 16
ಅಸ್ಸಾಂ: 11
ಪಂಜಾಬ್: 11
ತೆಲಂಗಾಣ: 10
ಛತ್ತೀಸ್ಗಢ: 09
ಆಂಧ್ರಪ್ರದೇಶ: 07
ಬಿಹಾರ: 07
ಹರಿಯಾಣ: 07
ಪಶ್ಚಿಮ ಬಂಗಾಳ: 07
ಗುಜರಾತ್: 06
ಜಾರ್ಖಂಡ್: 05
ಉತ್ತರಾಖಂಡ: 04
ಒಡಿಶಾ: 03
ತಮಿಳುನಾಡು: 03
ಸಿಕ್ಕಿಂ: 02
ಚಂಡೀಗಢ, ಹಿಮಾಚಲ ಪ್ರದೇಶ, ಮಿಜೋರಾಂ, ನಾಗಾಲ್ಯಾಂಡ್, ಪುದುಚೇರಿ, ಮೇಘಾಲಯ, ಲಡಾಖ್: ತಲಾ 1 ಹುದ್ದೆ
ಕರ್ನಾಟಕದಲ್ಲಿ ಎಲ್ಲಿದೆ ಉದ್ಯೋಗ?
ಕರ್ನಾಟಕದಲ್ಲಿ ಬೆಂಗಳೂರು ಗ್ರಾಮೀಣ – 1, ಬೀದರ್- 1, ಚಿಕ್ಕಬಳ್ಳಾಪುರ- 1, ಗದಗ- 2, ಹಾಸನ- 1, ಹಾವೇರಿ- 3, ಕೋಲಾರ- 3, ಮಂಡ್ಯ- 1, ಉಡುಪಿ- 2, ಉತ್ತರ ಕನ್ನಡ- 1, ಯಾದಗಿರಿ- 1, ಬಾಗಲಕೋಟೆ- 2, ವಿಜಯನಗರ-5, ಬೆಳಗಾವಿ- 5, ಚಿತ್ರದುರ್ಗ- 1, ತುಮಕೂರುಗಳಲ್ಲಿ 2 ಹುದ್ದೆಗಳಿವೆ.
ವಯೋಮಿತಿ:
ಆಧಾರ್ ಸೇವಾ ಕೇಂದ್ರದ ಅಧಿಸೂಚನೆಯ ಪ್ರಕಾರ (ದಿನಾಂಕ 01-01.2026 ಗೆ ಅನ್ವಯವಾಗುವಂತೆ) ಅಭ್ಯರ್ಥಿಯು ಕನಿಷ್ಠ 18 ವರ್ಷ ಆಗಿರಬೇಕು. ನಿಯಮಾನುಸಾರ ವಯೋಮಾನ ಸಡಿಲಿಕೆ ಇದೆ.
ವೇತನ ಶ್ರೇಣಿ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಆಧಾರ್ ಸೇವಾ ಕೇಂದ್ರದ ಮಾನದಂಡಗಳ ಪ್ರಕಾರ ವೇತನ ನೀಡಲಾಗುವುದು.
ಹೆಚ್ಚಿನ ಮಾಹಿತಿಗೆ: https://career.csccloud.in/job-post/MTE1OA==






