ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ಅಟೆಂಡೆಂಟ್ ಹುದ್ದೆಗೆ ಅರ್ಜಿ ಆಹ್ವಾನ

ಭಾರತೀಯ ರಿಸರ್ವ್ ಬ್ಯಾಂಕ್ | Photo Credit : PTI
ಸಂಬಂಧಿತ ರಾಜ್ಯ/ ಕೇಂದ್ರಾಡಳಿತ ಪ್ರದೇಶದ ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ (ಎಸ್ಎಸ್ಸಿ/ಮೆಟ್ರಿಕ್ಯುಲೇಶನ್) ಉತ್ತೀರ್ಣರಾಗಿರಬೇಕು. ಅರ್ಜಿದಾರರು 2026 01/01ರಂತೆ ಪದವಿಪೂರ್ವ ವಿದ್ಯಾರ್ಥಿಗಳಾಗಿರಬೇಕು. ಪದವೀಧರರಿಗೆ ಅವಕಾಶವಿಲ್ಲ.
ಭಾರತೀಯ ರಿಸರ್ವ್ ಬ್ಯಾಂಕ್ 572 ಅಟೆಂಡೆಂಟ್ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಅಧಿಕೃತ ವೆಬ್ಸೈಟ್ ನಲ್ಲಿ ಬಿಡುಗಡೆ ಮಾಡಿದೆ. RBI ಅರ್ಜಿ ಸಲ್ಲಿಕೆಯು 2026 ಜನವರಿ 15ರಂದು ಆರಂಭವಾಗಿದೆ. ಅಭ್ಯರ್ಥಿಗಳು 2026 ಫೆಬ್ರವರಿ 04ರವರೆಗೆ ಅರ್ಜಿ ಸಲ್ಲಿಸಬಹುದು. 2026 ಜನವರಿ 01ರಂತೆ ಕನಿಷ್ಠ ವಯಸ್ಸು 18 ವರ್ಷಗಳು ಮತ್ತು ಗರಿಷ್ಠ ವಯಸ್ಸು 25 ವರ್ಷಗಳು. ಅರ್ಜಿ ಸಲ್ಲಿಸುವ ಮೊದಲು ಈ ಕೆಳಗೆ ನೀಡಲಾದ ಲಿಂಕ್ ನಲ್ಲಿ RBI ಬ್ಯಾಂಕ್ ಆಫೀಸ್ ಅಟೆಂಡೆಂಟ್ ನೇಮಕಾತಿ 2026ರ ಸಂಪೂರ್ಣ ವಿವರಗಳನ್ನು ಪರಿಶೀಲಿಸಬೇಕು: https://opportunities.rbi.org.in/Scripts/Vacancies.aspx
RBI ಬ್ಯಾಂಕ್ ಆಫೀಸ್ ಅಟೆಂಡೆಂಟ್ ಪರೀಕ್ಷೆ 2016ರ ಪೂರ್ಣ ವಿವರಗಳು ಹೀಗಿವೆ:
► ಪ್ರಮುಖ ದಿನಾಂಕಗಳು
► ಆನ್ಲೈನ್ ಅರ್ಜಿ ಆರಂಭ: 15 ಜನವರಿ 2026
► ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 04 ಫೆಬ್ರವರಿ 2026
► ಶುಲ್ಕ ಪಾವತಿಗೆ ಕೊನೆಯ ದಿನಾಂಕ: 04 ಫೆಬ್ರವರಿ 2026
► ಪರೀಕ್ಷೆ ದಿನಾಂಕ: 2026 ಫೆಬ್ರವರಿ 28 ಮತ್ತು 2026 ಮಾರ್ಚ್ 1
► ಭರ್ತಿ ಕಾರ್ಡ್: ಪರೀಕ್ಷೆಗೆ ಮೊದಲು
► ಫಲಿತಾಂಶ ದಿನಾಂಕ: ಶೀಘ್ರವೇ ಅಪ್ಡೇಟ್ ಮಾಡಲಾಗುವುದು.
► ವಿವರಗಳಿಗೆ ಅಭ್ಯರ್ಥಿಗಳು ಭಾರತೀಯ ರಿಸರ್ವ್ ಬ್ಯಾಂಕ್ನ ಅಧಿಕೃತ ವೆಬ್ತಾಣವನ್ನು ಪರೀಕ್ಷಿಸಿ ದೃಢಪಡಿಸಬಹುದು.
► ಅರ್ಜಿ ಶುಲ್ಕ
ಜನರಲ್/ಒಬಿಸಿ/ಇಡಬ್ಲ್ಯುಎಸ್: 450 ರೂ. (+ ಜಿಎಸ್ಟಿ ಶೇ 18)
ಎಸ್ಸಿ/ಎಸ್ಟಿ/ ಪಿಡಬ್ಲ್ಯುಡಿ/ಇಎಕ್ಸ್ಎಸ್: 50 ರೂ. (+ ಜಿಎಸ್ಟಿ ಶೇ 18)
ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಕ್ಯಾಶ್ ಕಾರ್ಡ್/ ಮೊಬೈಲ್ ವಾಲೆಟ್ ಮೂಲಕ ಪಾವತಿಸುವ ಅವಕಾಶವಿದೆ.
► ವಯೋಮಿತಿ
2026 ಜನವರಿ 1ರಂತೆ ಕನಿಷ್ಠ ವಯೋಮಿತಿ 18 ವರ್ಷಗಳು ಮತ್ತು ಗರಿಷ್ಠ ವಯೋಮಿತಿ 25 ವರ್ಷಗಳು. ಅಂದರೆ 2001 ಜನವರಿ 02ಕ್ಕಿಂತ ಮೊದಲು ಜನಿಸಿದವರು ಮತ್ತು 2008 ಜನವರಿ 01ರ ನಂತರ ಜನಿಸಿದವರು.
► ಒಟ್ಟು ಹುದ್ದೆಗಳು
RBI ಬ್ಯಾಂಕ್ ಆಫೀಸ್ ಅಟೆಂಡೆಂಟ್- 572 ಹುದ್ದೆಗಳು
► ವಿದ್ಯಾರ್ಹತೆ
ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸುತ್ತಿರುವ ನೇಮಕಾತಿ ಕಚೇರಿಯ ಪ್ರಾದೇಶಿಕ ವ್ಯಾಪ್ತಿಯಲ್ಲಿರುವ ಸಂಬಂಧಿತ ರಾಜ್ಯ/ ಕೇಂದ್ರಾಡಳಿತ ಪ್ರದೇಶದ ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ (ಎಸ್ಎಸ್ಸಿ/ಮೆಟ್ರಿಕ್ಯುಲೇಶನ್) ಉತ್ತೀರ್ಣರಾಗಿರಬೇಕು. ಅರ್ಜಿದಾರರು 2026 ಜನವರಿ 01ರಂತೆ ಪದವಿಪೂರ್ವ ವಿದ್ಯಾರ್ಥಿಗಳಾಗಿರಬೇಕು. ಪದವೀಧರರು ಅಥವಾ ಹೆಚ್ಚಿನ ಅರ್ಹತೆ ಹೊಂದಿದವರು ಅರ್ಹರಲ್ಲ. ಮಾಜಿ ಸೈನಿಕರು 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಕನಿಷ್ಠ 15 ವರ್ಷಗಳ ರಕ್ಷಣಾ ಸೇವೆ ಪೂರ್ಣಗೊಳಿಸಿರಬೇಕು. ಆದರೆ ಅವರು ಶಸಸ್ತ್ರಪಡೆಗಳ ಹೊರಗೆ ಪದವಿ ಪಡೆದಿರಬಾರದು. ಹೆಚ್ಚುವರಿಯಾಗಿ ಅಭ್ಯರ್ಥಿಗಳು ಸಂಬಂಧಿತ ನೇಮಕಾತಿ ಕಚೇರಿಯ ಅಡಿಯಲ್ಲಿ ರಾಜ್ಯ/ಕೇಂದ್ರಾಡಳಿತದ ಪ್ರದೇಶದ ಸ್ಥಳೀಯ ಭಾಷೆಯಲ್ಲಿ (ಓದುವುದು, ಮಾತನಾಡುವುದು ಮತ್ತು ಅರ್ಥಮಾಡಿಕೊಳ್ಳುವುದು) ಪ್ರವೀಣರಾಗಿರಬೇಕು.
► ಆಯ್ಕೆ ಪ್ರಕ್ರಿಯೆ
ಆನ್ಲೈನ್ ಪರೀಕ್ಷೆ (120 ಪ್ರಶ್ನೆಗಳು, 90 ನಿಮಿಷಗಳು)
ರೀಸನಿಂಗ್ (30)
ಸಾಮಾನ್ಯ ಇಂಗ್ಲಿಷ್ (30)
ಸಾಮಾನ್ಯ ಜ್ಞಾನ್ (30)
ಸಂಖ್ಯೆ ಸಾಮರ್ಥ್ಯ (30)
ನೆಗೆಟಿವ್ ಅಂಕ: ಪ್ರತಿ ತಪ್ಪು ಉತ್ತರಕ್ಕೆ ¼ ಅಂಕ ಕಡಿತ.
ಭಾಷಾ ಪ್ರಾವೀಣ್ಯತೆ ಪರೀಕ್ಷೆ (ಎಲ್ಪಿಟಿ): ಸ್ಥಳೀಯ ಭಾಷೆಯಲ್ಲಿ ಪಾಸಾಗಬೇಕು.
ಅಂತಿಮ ಆಯ್ಕೆ: ಆನ್ಲೈನ್ ಪರೀಕ್ಷೆ +ಎಲ್ಪಿಟಿ, ವೈದ್ಯಕೀಯ ಪರೀಕ್ಷೆ ಮತ್ತು ದಾಖಲೆ ಪರಿಶೀಲನೆ
ವೇತನ ಮತ್ತು ಭತ್ಯೆಗಳು
ಆರಂಭಿಕ ವೇತನ: ಮಾಸಿಕ 24,250 ರೂ.
ಒಟ್ಟು ವೇತನ: ಮಾಸಿಕ 46,029 ರೂ. (ಎಚ್ಆರ್ಎ ಹೊರತುಪಡಿಸಿ)
ಸವಲತ್ತುಗಳು: ಆರ್ಬಿಐ ವಸತಿ (ಲಭ್ಯವಿದ್ದರೆ), ವೈದ್ಯಕೀಯ ಸೌಲಭ್ಯಗಳು, ಶಿಕ್ಷಣ ಮರುಪಾವತಿ, ವಿಮೆ, ಪಿಂಚಣಿ ಯೋಜನೆ, ಗ್ಯಾಚ್ಯುಟಿ ಇತ್ಯಾದಿ
ಕೆಲಸದ ಸ್ವರೂಪ: ವರ್ಗ 4 ಕರ್ತವ್ಯಗಳು- ಫೈಲ್ ಚಲನೆ, ಡಾಕ್ ವಿತರಣೆ, ಫೊಟೋಕಾಪಿ ಮಾಡುವುದು, ದೈನಂದಿನ ಕಚೇರಿ ಕೆಲಸಗಳಲ್ಲಿ ನೆರವಾಗುವುದು.







