ಸೇನೆಯಲ್ಲಿ 2026ರ ಲೆಫ್ಟಿನಂಟ್ ರ್ಯಾಂಕ್ ನ ಶಾರ್ಟ್ ಸರ್ವಿಸ್ ಕಮಿಷನ್ ಹುದ್ದೆಗಳಿಗೆ ಅರ್ಜಿ ಆಹ್ವಾನ

Photo Credit : joinindianarmy.nic.in
ಭಾರತೀಯ ಸೇನಾ ಎಸ್ಎಸ್ಸಿ ತಾಂತ್ರಿಕ 67ನೇ ಪುರುಷರ ಎಪ್ರಿಲ್ ಅಧಿಸೂಚನೆಯ ಪ್ರಕಾರ ಯಾವುದೇ ಪದವಿಯನ್ನು ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ತಾಂತ್ರಿಕ ಹುದ್ದೆಗಳಿಗೆ ಸಂಬಂಧಿಸಿದ ಎಂಜಿನಿಯರಿಂಗ್ ಪದವಿಯ ಅಗತ್ಯವಿದೆ.
ಭಾರತೀಯ ಸೇನೆಯನ್ನು ಸೇರುವ ಸುವರ್ಣವಕಾಶ ದೊರೆತಿದೆ. ಭಾರತೀಯ ಸೇನೆ ಅಧಿಕೃತ ವೆಬ್ತಾನದಲ್ಲಿ ನೀಡಿರುವ ಇತ್ತೀಚೆಗಿನ ಅಧಿಸೂಚನೆಯಲ್ಲಿ 67ನೇ ಪುರುಷರ ಎಪ್ರಿಲ್ 2026 ತಂಡ 2026 ನೇಮಕಾತಿಯನ್ನು ಘೋಷಿಸಿದೆ. ಈ ಬಾರಿ 350 ಸ್ಥಾನಗಳಿಗೆ ನೇಮಕಾತಿ ಘೋಷಿಸಲಾಗಿದೆ. ಭಾರತೀಯ ನೌಕಾಸೇನೆಗೆ 20206 ಜನವರಿ 07ರಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು 2026 ಫೆಬ್ರವರಿ 05ರಿಂದ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು 2026 ಅಕ್ಟೊಬರ್ 01ಕ್ಕೆ ಸರಿಯಾಗಿ 20 ವರ್ಷಗಳು ಮತ್ತು ಗರಿಷ್ಠ ವಯಸ್ಸು 27 ವರ್ಷಗಳು. ಅಭ್ಯರ್ಥಿಗಳು ಸಂಪೂರ್ಣ ವಿವರವನ್ನು Indian Army SSC Technical 67th Men Recruitment 2026 ಅಧಿಸೂಚನೆಯಲ್ಲಿ ನೋಡಬಹುದಾಗಿದೆ.
ಪ್ರಮುಖ ದಿನಾಂಕಗಳು
• ಆನ್ಲೈನ್ ಅರ್ಜಿ ಸಲ್ಲಿಸುವ ಆರಂಭಿಕ ದಿನಾಂಕ : 07 ಜನವರಿ 2026
• ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05 ಫೆಬ್ರವರಿ 2026
• ಶುಲ್ಕ ಪಾವತಿಗೆ ಕೊನೆಯ ದಿನಾಂಕ: 05 ಫೆಬ್ರವರಿ 2026
• ಪರೀಕ್ಷೆ ದಿನಾಂಕ : ಶೀಘ್ರವೇ ಸೂಚಿಸಲಾಗುವುದು
• ಭರ್ತಿ ಕಾರ್ಡ್ : ಪರೀಕ್ಷೆಗೆ ಮೊದಲು
• ಫಲಿತಾಂಶ ದಿನಾಂಕ : ಶೀಘ್ರವೇ ಅಪ್ಡೇಟ್ ಮಾಡಲಾಗುವುದು.
• ವಿವರಗಳಿಗೆ ಅಭ್ಯರ್ಥಿಗಳು ಭಾರತೀಯ ಸೇನೆಯ ಅಧಿಕೃತ ವೆಬ್ತಾಣವನ್ನು ಪರೀಕ್ಷಿಸಬಹುದು.
ಅರ್ಜಿ ಶುಲ್ಕ
• ಯಾವುದೇ ಅಭ್ಯರ್ಥಿಗೆ ಅರ್ಜಿ ಶುಲ್ಕ ಇರುವುದಿಲ್ಲ
ಭಾರತೀಯ ಸೇನೆ ಎಸ್ಎಸ್ಸಿ ತಾಂತ್ರಿಕ 67ನೇ ಪುರುಷರ ಎಪ್ರಿಲ್ ಅಧಿಸೂಚನೆ 2026: ವಯೋಮಿತಿ 2026 ಅಕ್ಟೋಬರ್ 1ಕ್ಕೆ ಸರಿಯಾಗಿ, ಕನಿಷ್ಠ ವಯಸ್ಸು 20 ವರ್ಷಗಳು ಮತ್ತು ಗರಿಷ್ಠ ವಯಸ್ಸು 27 ವರ್ಷಗಳು. 1999 ಅಕ್ಟೋಬರ್ 1ರಿಂದ 2006 ಸೆಪ್ಟೆಂಬರ್ 30ರ ನಡುವೆ ಜನಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸೇನೆಯ ನಿಯಮಗಳಿಗೆ ಅನುಗುಣವಾಗಿ ವಯೋಮಿತಿ ಸಡಿಲಿಕೆ ಇರುತ್ತದೆ.
ಹುದ್ದಗಳ ವಿವರ
ಒಟ್ಟು ಹುದ್ದೆಗಳು 350
ಸಿವಿಲ್ ಹುದ್ದೆಗಳು 75
ಕಂಪ್ಯೂಟರ್ ಸೈನ್ಸ್ 60
ಎಲೆಕ್ಟ್ರಿಕಲ್ 33
ಎಲೆಕ್ಟ್ರಾನಿಕ್ಸ್ 64
ಮೆಕಾನಿಕಲ್ 101
ಇತರೆ ಎಂಜಿನಿಯರಿಂಗ್ ಹುದ್ದೆಗಳು 17
ಅಭ್ಯರ್ಥಿಗಳ ಅರ್ಹತೆ
ಭಾರತೀಯ ಸೇನಾ ಎಸ್ಎಸ್ಸಿ ತಾಂತ್ರಿಕ 67ನೇ ಪುರುಷರ ಎಪ್ರಿಲ್ ಅಧಿಸೂಚನೆಯ ಪ್ರಕಾರ ಯಾವುದೇ ಪದವಿಯನ್ನು ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ತಾಂತ್ರಿಕ ಹುದ್ದೆಗಳಿಗೆ ಸಂಬಂಧಿಸಿದ ಎಂಜಿನಿಯರಿಂಗ್ ಪದವಿಯ ಅಗತ್ಯವಿದೆ. ಪದವಿಯ ಅಂತಿಮ ವರ್ಷದಲ್ಲಿದ್ದವರೂ (2026 ಅಕ್ಟೋಬರ್ 1ರೊಳಗೆ ಪದವಿ ಮುಗಿಸುವವರು) ಅರ್ಜಿ ಸಲ್ಲಿಸಬಹುದು. ಶೈಕ್ಷಣಿಕ ಅಂಕಗಳನ್ನು ಪರಿಗಣಿಸಿ ಆಯ್ಕೆ ಮಾಡಲಾಗುವುದು.
ದೈಹಿಕ ಅರ್ಹತೆ
ಕನಿಷ್ಠ ಅಗತ್ಯ ಹತ್ತು ನಿಮಿಷಗಳಲ್ಲಿ 2.4 ಕಿಮೀ ಓಟ, 40 ಪುಷ್-ಅಪ್ಗಳು, 6 ಪುಲ್-ಅಪ್ಗಳು, 30 ಸಿಟಪ್ಗಳು, ಈಜಿನ ಜ್ಞಾನ ಇತ್ಯಾದಿ.
ರಾಷ್ಟ್ರೀಯತೆ
ಭಾರತೀಯ ಪ್ರಜೆ, ನೇಪಾಳಿ ಪ್ರಜೆ ಅಥವಾ ಆಯ್ದ ದೇಶಗಳಲ್ಲಿರುವ ಭಾರತೀಯ ಸಂಜಾತರು.
ಆಸಕ್ತಿ ಅಭ್ಯರ್ಥಿಗಳು 2026 ಫೆಬ್ರವರಿ 05ರ ಒಳಗೆ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಎಸ್ಎಸ್ ಸಂದರ್ಶನ, ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರಿಶೀಲನೆ ಇರುತ್ತದೆ. ಎಸ್ಎಸ್ಬಿ ಸಂದರ್ಶನ ಎರಡು ಹಂತದಲ್ಲಿ ಐದು ದಿನಗಳ ಕಾಲ ನಡೆಯುತ್ತದೆ, ಅಲಹಾಬಾದ್, ಭೋಪಾಲ್, ಬೆಂಗಳೂರು ಮತ್ತು ಕಪುರ್ತಲದಲ್ಲಿ ಸಂದರ್ಶನ ಇರಲಿದೆ. ಸಂದರ್ಶನ ಪಾಸಾದ ಮೇಲೆ ವೈದ್ಯಕೀಯ ಪರೀಕ್ಷೆ ಇರುತ್ತದೆ. ನಂತರ ಅಂತಿಮ ಮೆರಿಟ್ ಪಟ್ಟಿ ಮಾಡಲಾಗುತ್ತದೆ.
ವೇತನ ಮತ್ತು ಲಾಭಗಳು
ಅರ್ಹ ಅಭ್ಯರ್ಥಿಗಳಿಗೆ ಲೆಫ್ಟಿನಂಟ್ ರ್ಯಾಂಕ್ನ ಶಾರ್ಟ್ ಸರ್ವಿಸ್ ಕಮಿಷನ್ (ಎಸ್ಎಸ್ಸಿ) ಹುದ್ದೆಗೆ ನೇಮಿಸಿಕೊಳ್ಳಲಾಗುವುದು. ಇದು ಶಾಶ್ವತ ಉದ್ಯೋಗವಾಗಿರುತ್ತದೆ. ತರಬೇತಿ ಸಂದರ್ಭದಲ್ಲಿ ಮಾಸಿಕ 56,100 ರೂ. ಸ್ಟೈಪೆಂಡ್ ಇರುತ್ತದೆ. ಲೆಫ್ಟಿನಂಟ್ ವೇತನ 56,100–1,77,500 ರೂ ಮತ್ತು ಭತ್ಯೆಗಳು ಸೇರಿರುತ್ತವೆ. ಇತರ ಕ್ಷೇತ್ರವಾರು ಭತ್ಯೆ, ಪ್ರಯಾಣ, ಆಹಾರ, ಉಡುಪು, ಮಕ್ಕಳ ಶಿಕ್ಷಣ, ವಸತಿ ಸಬ್ಸಿಡಿಗೆ 15,500 ರೂ. ಮಾಸಿಕ ಭತ್ಯೆ ಇರುತ್ತದೆ. ಸೇನಾ ಗ್ರೂಪ್ ವಿಮೆ ನಿಧಿಯ ಅಡಿಯಲ್ಲಿ 1.25 ಕೋಟಿಯ ವಿಮಾ ರಕ್ಷಣೆ ಇರುತ್ತದೆ.
ಈ ಕೆಳಗಿನ ಲಿಂಕ್ನಲ್ಲಿ ಅರ್ಜಿ ಸಲ್ಲಿಸಬಹುದು.







