ಕೇಂದ್ರ ರಕ್ಷಣಾ ಇಲಾಖೆಯಲ್ಲಿ 1,213 ಹುದ್ದೆಗಳ ನೇಮಕಾತಿ; AVNL ಅಧಿಸೂಚನೆ ಪ್ರಕಟ

Photo Credit : (@Official.AVANI.PR) • Facebook
ಅರ್ಜಿ ಪ್ರಕ್ರಿಯು ಅಧಿಕೃತ ವೆಬ್ಸೈಟ್ನಲ್ಲಿ ಪ್ರಾರಂಭವಾಗಿದ್ದು, ಅಭ್ಯರ್ಥಿಗಳು 2026 ಜುಲೈ 25ರೊಳಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಷ್ಠಿತ ‘ಆರ್ಮರ್ಡ್ ವೆಹಿಕಲ್ಸ್ ನಿಗಮ್ ಲಿಮಿಟೆಡ್ (AVNL) ಬೃಹತ್ ನೇಮಕಾತಿಗೆ ಮುಂದಾಗಿದೆ.
AVNL ವಿವಿಧ ವಿಭಾಗಗಳಲ್ಲಿ 1,213 ಜೂನಿಯರ್ ಟೆಕ್ನಿಷಿಯನ್, ಜ್ಯೂನಿಯರ್ ಮ್ಯಾನೇಜರ್, ಅಸಿಸ್ಟಂಟ್ ಮ್ಯಾನೇಜರ್, ಸೀನಿಯರ್ ಮ್ಯಾನೇಜರ್, ಡೆಪ್ಯುಟಿ ಮ್ಯಾನೇಜರ್, ಡೆಪ್ಯುಟಿ ಜನರಲ್ ಮ್ಯಾನೇಜರ್, ಕನ್ಸಲ್ಟೆಂಟ್ ಮತ್ತು ಹೆಚ್ಚುವರಿ ಜನರಲ್ ಮ್ಯಾನೇಜರ್ ಹುದ್ದೆಗಳಿಗೆ 2026ರ ಅಧಿಸೂಚನೆ ಬಿಡುಗಡೆ ಮಾಡಿದೆ. ಅರ್ಜಿ ಪ್ರಕ್ರಿಯು ಅಧಿಕೃತ ವೆಬ್ಸೈಟ್ನಲ್ಲಿ ಪ್ರಾರಂಭವಾಗಿದೆ. ಐದೇ ದಿನಗಳು ಬಾಕಿ ಇವೆ. ಅಭ್ಯರ್ಥಿಗಳು 2026 ಜುಲೈ 25ರೊಳಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಐಟಿಐ ಡಿಪ್ಲೊಮಾ, ಪದವಿ ಹಾಗೂ ಎಂಜಿನಿಯರಿಂಗ್ ಪದವೀಧರ ಶೈಕ್ಷಣಿಕ ಅರ್ಹತೆ ಹೊಂದಿರುವವರಿಗೆ ಅವಕಾಶ ಸಿಗಲಿದೆ.
ಆರ್ಮರ್ಡ್ ವೆಹಿಕಲ್ಸ್ ನಿಗಮ್ ಲಿಮಿಟೆಡ್ (AVNL) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಬಳಸಬಹುದು:
https://cdn.digialm.com//EForms/configuredHtml/1258/100934//Index.html
📌ನೇಮಕಾತಿಯ ಮುಖ್ಯಾಂಶಗಳು
ಸಂಸ್ಥೆಯ ಹೆಸರು: ಆರ್ಮರ್ಡ್ ವೆಹಿಕಲ್ಸ್ ನಿಗಮ್ ಲಿಮಿಟೆಡ್ (AVNL-ಭಾರತ ಸರ್ಕಾರದ ಉದ್ಯಮ)
ಉದ್ಯೋಗದ ಸ್ವರೂಪ: ಇದು ಫಿಕ್ಸೆಡ್ ಟರ್ಮ್ ಎಂಪ್ಲಾಯ್ಮೆಂಟ್ ಆಧಾರದ ನೇಮಕಾತಿಯಾಗಿದೆ.
ಸೇವಾ ಅವಧಿ: ಆರಂಭದಲ್ಲಿ 1 ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲಿದ್ದು, ತದನಂತರ ಅಭ್ಯರ್ಥಿಯ ಕಾರ್ಯಕ್ಷಮತೆ ಮತ್ತು ಸಂಸ್ಥೆಯ ಅಗತ್ಯ ಆಧರಿಸಿ ಗರಿಷ್ಠ 4 ವರ್ಷಗಳವರೆಗೆ ಅವಧಿ ವಿಸ್ತರಿಸಬಹುದು.
📌ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ: 11 ಜುಲೈ 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25 ಜುಲೈ 2026
📌ಹುದ್ದೆಗಳ ಸಂಪೂರ್ಣ ವರ್ಗೀಕರಣ
1. ನಾನ್-ಎಕ್ಸಿಕ್ಯೂಟಿವ್ ಹುದ್ದೆಗಳು (ಒಟ್ಟು 1,005)
ಜೂನಿಯರ್ ಟೆಕ್ನಿಷಿಯನ್ ವೃಂದದಲ್ಲಿ ಈ ಕೆಳಗಿನ ಟ್ರೇಡ್ಗಳಿಗೆ ಭರ್ಜರಿ ಹುದ್ದೆಗಳಿವೆ.
ಫಿಟ್ಟರ್ (ಜನರಲ್)- 253 ಹುದ್ದೆಗಳು
ಎಲೆಕ್ಟ್ರಿಷಿಯನ್- 52 ಹುದ್ದೆಗಳು
ಎಲೆಕ್ಟ್ರಾನಿಕ್ ಮೆಕ್ಯಾನಿಕ್- 40 ಹುದ್ದೆಗಳು
ಮೆಷಿನಿಸ್ಟ್- 99 ಹುದ್ದೆಗಳು
ವೆಲ್ಡರ್- 39 ಹುದ್ದೆಗಳು
ಕ್ವಾಲಿಟಿ ಅಶ್ಯೂರೆನ್ಸ್ ಅಸಿಸ್ಟೆಂಟ್- 40 ಹುದ್ದೆಗಳು
ಇದಲ್ಲದೆಯೂ ಅನೇಕ ಟ್ರೇಡ್ಗಳಲ್ಲಿ ಖಾಲಿ ಹುದ್ದೆಗಳಿವೆ
2. ಎಕ್ಸಿಕ್ಯೂಟಿವ್ ಹುದ್ದೆಗಳು (ಒಟ್ಟು 208)
ಜ್ಯೂನಿಯರ್ ಮ್ಯಾನೇಜರ್ (ಮೆಕ್ಯಾನಿಕಲ್/ಎಲೆಕ್ಟ್ರಿಕಲ್/ ಐಟಿ/ ಎಚ್ಆರ್ ಇತ್ಯಾದಿ)- ವಿವಿಧ ಹುದ್ದೆಗಳು
ಅಸಿಸ್ಟಂಟ್ ಮ್ಯಾನೇಜರ್- ವಿವಿಧ ಹುದ್ದೆಗಳು
ಡೆಪ್ಯುಟಿ ಮ್ಯಾನೇಜರ್- ವಿವಿಧ ಹುದ್ದೆಗಳು
📌ಶೈಕ್ಷಣಿಕ ಅರ್ಹತೆ
ಜ್ಯೂನಿಯರ್ ಟೆಕ್ನಿಷಿಯನ್: ಎನ್ಸಿವಿಟಿಯಿಂದ ಮಾನ್ಯತೆ ಪಡೆದ ಸಂಬಂಧಿತ ಟ್ರೇಡ್ನಲ್ಲಿ ಎನ್ಟಿಸಿ/ಎನ್ಎಸಿ (ಐಟಿಐ) ಪ್ರಮಾಣಪತ್ರ ಹೊಂದಿರಬೇಕು.
ಮ್ಯಾನೇಜರ್ ಹುದ್ದೆಗಳು: ಹುದ್ದೆಗೆ ಅನುಗುಣವಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿಇ/ಬಿಟೆಕ್ (ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಸಿವಿಲ್, ಕಂಪ್ಯೂಟರ್ ಸೈನ್ಸ್), ಪದವಿ, ಎಂಬಿಎ, ಎಂಸಿಎ ಅಥವಾ ಸಿಎ ಪೂರ್ಣಗೊಳಿಸಿರಬೇಕು.
📌ವಯೋಮಿತಿ ಮತ್ತು ಸಡಿಲಿಕೆ
ಜ್ಯೂನಿಯರ್ ಟೆಕ್ನಿಷಿಯನ್, ಜ್ಯೂನಿಯರ್ ಮ್ಯಾನೇಜರ್, ಅಸಿಸ್ಟಂಟ್ ಮ್ಯಾನೇಜರ್, ಡೆಪ್ಯುಟಿ ಮ್ಯಾನೇಜರ್ ಹುದ್ದೆಗಳಿಗೆ ಗರಿಷ್ಠ 30 ವರ್ಷಗಳ ವಯೋಮಿತಿ ನಿಗದಿಪಡಿಸಲಾಗಿದೆ.
ವಯೋಮಿತಿ ಸಡಿಲಿಕೆ: ಸರ್ಕಾರದ ನಿಯಮಗಳ ಪ್ರಕಾರ ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ-ಎನ್ಸಿಎಲ್ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಪಿಡಬ್ಲ್ಯುಬಿಡಿ (ಅಂಗವಿಕಲ) ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.
📌ವೇತನ ಶ್ರೇಣಿ
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಅತ್ಯುತ್ತಮ ವೇತನ ಪ್ಯಾಕೇಜ್ ನೀಡಲಾಗುತ್ತದೆ:
ವೈದ್ಯಕೀಯ/ಪ್ರಯಾಣ ಭತ್ಯೆ ಸೇರಿ ಒಟ್ಟು 25,050 ರೂ + ಐಡಿಎ ಪ್ರತಿ ತಿಂಗಳು ಲಭ್ಯವಿರುತ್ತದೆ.
ಜೂನಿಯರ್ ಮ್ಯಾನೇಜರ್: ಒಟ್ಟು 34,500 ರೂ. + ಐಡಿಎ ವೇತನ ಸಿಗಲಿದೆ.
ಇದರ ಜೊತೆಗೆ ವಾರ್ಷಿಕ ಶೇ 3 ಇನ್ಕ್ರಿಮೆಂಟ್, ಗಳಿಕೆ ರಜೆ, ಪಿಎಫ್ ಹಾಗೂ ಗ್ರಾಚ್ಯುಟಿ ಸೌಲಭ್ಯಗಳು ಲಭ್ಯವಿರುತ್ತವೆ.
📌ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?
• ಕಂಪ್ಯೂಟರ್ ಆಧಾರಿತ ಪರೀಕ್ಷೆ: ಅಭ್ಯರ್ಥಿಗಳಿಗೆ 100 ಅಂಕಗಳ ಆನ್ಲೈನ್ ಪರೀಕ್ಷೆ ನಡೆಸಲಾಗುತ್ತದೆ.
ಭಾಗ 1: 50 ಅಂಕಗಳು (ಸಾಮಾನ್ಯ ಜ್ಞಾನ, ಇಂಗ್ಲಿಷ್, ಗಣಿತ, ರೀಸನಿಂಗ್ ಮತ್ತು ಕಂಪ್ಯೂಟರ್)
ಭಾಗ 2: 50 ಅಂಕಗಳು (ಸಂಬಂಧಪಟ್ಟ ಟ್ರೇಡ್ ಅಥವಾ ವಿಷಯದ ಮೇಲಿನ ಪ್ರಶ್ನೆಗಳು)
ನೆಗೆಟಿವ್ ಮಾರ್ಕಿಂಗ್ ಇರುವುದಿಲ್ಲ: ಈ ಪರೀಕ್ಷೆಯಲ್ಲಿ ಯಾವುದೇ ತಪ್ಪು ಉತ್ತರಗಳಿಗೆ ಅಂಕಗಳನ್ನು ಕಡಿತಗೊಳಿಸುವ (ನೆಗೆಟಿವ್ ಮಾರ್ಕಿಂಗ್) ನಿಯಮವಿಲ್ಲ.
• ಸಂದರ್ಶನ/ ಸ್ಕಿಲ್ನಿ ಟೆಸ್ಟ್: ಜ್ಯೂನಿಯರ್ ಟೆಕ್ನಿಷಿಯನ್ ಹುದ್ದೆಗಳಿಗೆ ಸಿಬಿಟಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ಟ್ರೇಡ್ ಟೆಸ್ಟ್ ನಡೆಸಲಾಗುತ್ತದೆ ಮತ್ತು ಮ್ಯಾನೇಜರ್ ಹುದ್ದೆಗಳಿಗೆ ಸಂದರ್ಶನ ಇರುತ್ತದೆ.
📌ಅರ್ಜಿ ಸಲ್ಲಿಸುವುದು ಹೇಗೆ?
• ಮೊದಲು AVNL ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
• ಅಧಿಸೂಚನೆಯನ್ನು ಒಮ್ಮೆ ಎಚ್ಚರಿಕೆಯಿಂದ ಓದಿಕೊಳ್ಳಿ.
• ನಿಮ್ಮ ಇಮೇಲ್ ಐಡಿ, ಮೊಬೈಲ್ ಸಂಖ್ಯೆ ಮತ್ತು ಅಗತ್ಯ ದಾಖಲೆಗಳನ್ನು (ಅಂಕಪಟ್ಟಿ, ಐಡಿ ಪ್ರೂಫ್) ಸಿದ್ಧವಿಟ್ಟುಕೊಳ್ಳಿ.
• ಆನ್ಲೈನ್ ಅರ್ಜಿಯನ್ನು ಭರ್ತಿ ಮಾಡಿ, ಅಗತ್ಯವಿದ್ದರೆ ಅರ್ಜಿ ಶುಲ್ಕವನ್ನು ಪಾವತಿಸಿ.
• ಅಂತಿಮವಾಗಿ ‘Submit’ ಬಟನ್ ಕ್ಲಿಕ್ ಮಾಡಿ, ಅರ್ಜಿ ಸಂಖ್ಯೆಯನ್ನು ಭದ್ರವಾಗಿಟ್ಟುಕೊಳ್ಳಿ.






