ತೈವಾನ್ ನ ಮೀನುಗಾರಿಕಾ ದೋಣಿ ವಶಕ್ಕೆ ಪಡೆದ ಚೀನಾ : ವರದಿ
ಸಾಂದರ್ಭಿಕ ಚಿತ್ರ | PC : NDTV
ತೈಪೆ : ತೈವಾನ್ ನಿಯಂತ್ರಿತ ದ್ವೀಪದ ಸಮೀಪ ಚೀನಾದ ಕರಾವಳಿ ಬಳಿ ಕಾರ್ಯಾಚರಿಸುತ್ತಿದ್ದ ತೈವಾನ್ನ ಮೀನುಗಾರಿಕಾ ದೋಣಿಯನ್ನು ಪ್ರವೇಶಿಸಿದ ಚೀನಾದ ಅಧಿಕಾರಿಗಳು ದೋಣಿಯನ್ನು ವಶಕ್ಕೆ ಪಡೆದು ಚೀನಾದ ಬಂದರಿಗೆ ಸಾಗಿಸಿದ್ದಾರೆ ಎಂದು ತೈವಾನ್ನ ಕರಾವಳಿ ಕಾವಲುಪಡೆ ಬುಧವಾರ ಹೇಳಿದೆ.
ಮೀನುಗಾರಿಕಾ ದೋಣಿಯು ಮಂಗಳವಾರ ರಾತ್ರಿ ತೈವಾನ್ ನಿರ್ವಹಣೆಯ, ಚೀನಾದ ಕ್ಸಿಯಾಮೆನ್ ನಗರದ ಬಳಿಯ ಕಿನ್ಮೆನ್ ದ್ವೀಪಗಳ ಸಮೀಪದಲ್ಲಿ, ಆದರೆ ಚೀನಾದ ಜಲಪ್ರದೇಶದಲ್ಲಿತ್ತು. ಆಗ ಚೀನಾದ ಎರಡು ಸಮುದ್ರ ಆಡಳಿತ ಸಂಸ್ಥೆಯ ಸಿಬಂದಿಗಳು ದೋಣಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಹಿಂದೆಯೂ ಇಂತಹ ಪ್ರಕರಣ ನಡೆದಾಗ ದಂಡ ಪಾವತಿಸಿ ಮೀನುಗಾರರನ್ನು ಬಿಡುಗಡೆಗೊಳಿಸಲಾಗಿದೆ ಎಂದು ವರದಿಯಾಗಿದೆ. ಚೀನಾದ ಮೀನುಗಾರಿಕೆ ನಿಷೇಧ ವಲಯದಲ್ಲಿ ದೋಣಿ ಇತ್ತು ಎಂಬುದನ್ನು ತೈವಾನ್ ಕರಾವಳಿ ಕಾವಲುಪಡೆ ದೃಢಪಡಿಸಿದ್ದು ಮೀನುಗಾರರನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಚೀನಾವನ್ನು ಆಗ್ರಹಿಸಿದೆ.
Next Story