ಗಾಝಾ ನಗರದ ಮೇಲೆ ಬಾಂಬ್ ಮಳೆಗರೆದ ಇಸ್ರೇಲ್
PC : PTI
ಗಾಝಾ ಪಟ್ಟಿ: ಬುಧವಾರವೂ ಗಾಝಾ ಪಟ್ಟಿಯ ಮೇಲೆ ಇಸ್ರೇಲ್ ಬಾಂಬ್ ದಾಳಿ ಮುಂದುವರಿಸಿದ್ದು ಸಾವಿರಾರು ಫೆಲೆಸ್ತೀನೀಯರು ನಗರದಿಂದ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಂಡಿರುವುದಾಗಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.
ಗಾಝಾ ನಗರದ ಶುಜೈಯಾ ಜಿಲ್ಲೆಯಾದ್ಯಂತ ಇಸ್ರೇಲ್ ಸೇನೆಯ ಹೆಲಿಕಾಪ್ಟರ್ಗಳು ಹಾಗೂ ಡ್ರೋನ್ಗಳು ದಾಳಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿವೆ. ಬುಧವಾರ ಬೆಳಗ್ಗಿನವರೆಗಿನ ಕಳೆದ 24 ಗಂಟೆಗಳಲ್ಲಿ ವಾಯುಪಡೆ ಗಾಝಾದ್ಯಂತ 50ಕ್ಕೂ ಅಧಿಕ ಹಮಾಸ್ ನೆಲೆಯನ್ನು ಗುರಿಯಾಗಿಸಿ ದಾಳಿ ನಡೆಸಿದ್ದು ಪದಾತಿ ದಳವು ಸುರಂಗದಲ್ಲಿ ಸಂಗ್ರಹಿಸಿಟ್ಟಿರುವ ಎಕೆ-47 ರೈಫಲ್ಸ್ಗಳ ಸಹಿತ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಪತ್ತೆಹಚ್ಚಿವೆ ಎಂದು ಇಸ್ರೇಲ್ ಸೇನೆ ಹೇಳಿದೆ. ಈ ಮಧ್ಯೆ, ಹಮಾಸ್ ಸೋಲದಿದ್ದರೂ ಗಾಝಾ ಕದನವಿರಾಮಕ್ಕೆ ಸಮ್ಮತಿಸಬೇಕೆಂದು ಇಸ್ರೇಲ್ ಸೇನೆಯ ಜನರಲ್ಗಳು ಆಗ್ರಹಿಸುತ್ತಿದ್ದಾರೆ ಎಂಬ ಅಮೆರಿಕದ ಮಾಧ್ಯಮಗಳ ವರದಿಯನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಳ್ಳಿಹಾಕಿದ್ದಾರೆ.
Next Story