ಪಾಕಿಸ್ತಾನ | 1 ಲೀಟರ್ ಹಾಲಿನ ದರ 370 ರೂ.
ಸಾಂದರ್ಭಿಕ ಚಿತ್ರ
ಇಸ್ಲಾಮಾಬಾದ್ : ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಪಾಕಿಸ್ತಾನದಲ್ಲಿ ಹಾಲಿನ ಮೇಲೆ ಹೊಸ ತೆರಿಗೆ ವಿಧಿಸಿದ ಬಳಿಕ 20%ದಷ್ಟು ಬೆಲೆ ಏರಿಕೆಯಾಗಿದ್ದು 1 ಲೀಟರ್ ಹಾಲಿನ ಬೆಲೆ 370 ರೂ.(ಪಾಕಿಸ್ತಾನದ ಕರೆನ್ಸಿ)ಗೆ ತಲುಪಿದೆ ಎಂದು ವರದಿಯಾಗಿದೆ.
ಪಾಕಿಸ್ತಾನದ 370 ರೂಪಾಯಿ ಭಾರತದ 110.92 ರೂ.ಗೆ ಸಮವಾಗಿದೆ. ಪಾಕಿಸ್ತಾನದಲ್ಲಿ ಹಾಲಿನ ಬೆಲೆ ವಿಶ್ವದ ಪ್ರಮುಖ ನಗರಗಳಿಗಿಂತ ಅಧಿಕವಾಗಿದೆ. ಪ್ಯಾರಿಸ್ನಲ್ಲಿ 1 ಲೀಟರ್ ಹಾಲಿನ ಬೆಲೆ 1.23 ಡಾಲರ್, ಮೆಲ್ಬೋರ್ನ್ನಲ್ಲಿ 1.08 ಡಾಲರ್, ಆಮ್ಸ್ಟರ್ಡಾಂನಲ್ಲಿ 1.29 ಡಾಲರ್ ಆಗಿದ್ದರೆ ಪಾಕಿಸ್ತಾನದಲ್ಲಿ 1.33 ಡಾಲರ್ ಗೆ ತಲುಪಿದೆ.
ರಾಷ್ಟ್ರೀಯ ಬಜೆಟ್ನಲ್ಲಿ ಅನುಮೋದಿಸಲಾದ ಹೊಸ ಹಣಕಾಸಿನ ಕ್ರಮಗಳ ಭಾಗವಾಗಿ ಇತ್ತೀಚೆಗೆ 18%ದಷ್ಟು ತೆರಿಗೆ ವಿಧಿಸಿರುವುದು ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಈ ಹಿಂದೆ ಹಾಲಿಗೆ ತೆರಿಗೆಯಿಂದ ವಿನಾಯಿತಿ ನೀಡಲಾಗಿತ್ತು ಎಂದು ವರದಿಯಾಗಿದೆ.
Next Story