ಇಂಡಿಯಾ-ಭಾರತ ಹೆಸರು ವಿವಾದ: ವಿಶ್ವ ಸಂಸ್ಥೆ ಹೇಳಿದ್ದೇನು?

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ದೇಶಗಳ ಹೆಸರುಗಳ ಬದಲಾವಣೆಗೆ ಮನವಿ ಬಂದ ಹಾಗೆ ವಿಶ್ವ ಸಂಸ್ಥೆ ಅವುಗಳನ್ನು ಪರಿಗಣಿಸುತ್ತದೆ ಎಂದು ‘ಇಂಡಿಯಾ’ ಬದಲು ‘ಭಾರತ’ ಎಂದು ಮರುನಾಮಕರಣವನ್ನು ಸರ್ಕಾರ ಮಾಡಬಹುದೆಂಬ ವದಂತಿಗಳ ನಡುವೆ ವಿಶ್ವ ಸಂಸ್ಥೆಯ ಮಹಾ ಕಾರ್ಯದರ್ಶಿ ಆಂಟೋನಿಯೋ ಗುಟೆರೆಸ್ ಅವರ ಉಪ ವಕ್ತಾರ ಫರ್ಹಾನ್ ಹಖ್ ಬುಧವಾರ ಹೇಳಿದ್ದಾರೆ. ರಾಷ್ಟ್ರಪತಿಗಳು ಜಿ20 ಔತಣಕೂಟ ಆಹ್ವಾನ ಪತ್ರಿಕೆಯಲ್ಲಿ ರೂಢಿಗತ ಪ್ರೆಸಿಡೆಂಟ್ ಆಫ್ ಇಂಡಿಯಾ ಬದಲು ಪ್ರೆಸಿಡೆಂಟ್ ಆಫ್ ಭಾರತ್ ಎಂದು ಬರೆದಿರುವ ನಂತರ ದೇಶದ ಹೆಸರು ಬದಲಾವಣೆ ಕುರಿತು ಊಹಾಪೋಹಗಳು ಹರಡಿವೆ.
“ಟರ್ಕಿಯ ಹೆಸರನ್ನು ತುರ್ಕಿಯೆ ಎಂದು ಬದಲಿಸಲು ಅಲ್ಲಿನ ಸರ್ಕಾರದಿಂದ ಔಪಚಾರಿಕ ವಿನಂತಿಗೆ ನಾವು ಸ್ಪಂದಿಸಿದ್ದೆವು. ಅಂತಹ ವಿನಂತಿಗಳು ನಮಗೆ ಬಂದರೆ ಅವುಗಳನ್ನು ಬಂದ ಹಾಗೆ ಪರಿಶೀಲಿಸಿ ಪರಿಗಣಿಸುತ್ತೇವೆ,” ಎಂದು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಾ ವಿಶ್ವ ಸಂಸ್ಥೆಯ ಉಪ ವಕ್ತಾರ ಹೇಳಿದರು.
Next Story