ನ್ಯೂಯಾರ್ಕ್ | ಅಂಗಡಿಗೆ ನುಗ್ಗಿದ ವ್ಯಾನ್; 4 ಮಂದಿ ಮೃತ್ಯು

PC : indiatoday.in
ನ್ಯೂಯಾರ್ಕ್: ಇಲ್ಲಿನ ಲಾಂಗ್ ದ್ವೀಪದಲ್ಲಿ ವ್ಯಾನೊಂದು ಹಸ್ತಾಲಂಕಾರ ಸೆಲೂನ್ನೊಳಗೆ ನುಗ್ಗಿದ್ದು ಈ ಅಪಘಾತದಲ್ಲಿ 4 ಮಂದಿ ಮೃತಪಟ್ಟಿದ್ದು, ಇತರ 10 ಮಂದಿ ಗಂಭೀರವಾಗಿ ಗಾಯಗೊಂಡಿರುವುದಾಗಿ `ಅಸೋಸಿಯೇಟೆಡ್ ಪ್ರೆಸ್' ವರದಿ ಮಾಡಿದೆ.
ಡಿಯರ್ ಪಾರ್ಕ್ ಪ್ರದೇಶದಲ್ಲಿ ಚಲಿಸುತ್ತಿದ್ದ ವ್ಯಾನು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಪಕ್ಕವಿದ್ದ ಸಲೂನ್ಗೆ ನುಗ್ಗಿದೆ. ವ್ಯಾನ್ ಅಪ್ಪಳಿಸಿದ ರಭಸಕ್ಕೆ ಸಲೂನ್ನ ಗಾಜಿನ ಬಾಗಿಲು, ಗೋಡೆ ಪುಡಿಯಾಗಿದ್ದು ಛಾವಣಿ ಕುಸಿದಿದೆ. ಸಲೂನ್ನಲ್ಲಿದ್ದ 4 ಮಂದಿ ಮೃತಪಟ್ಟಿದ್ದು ಇತರ 10 ಮಂದಿ ಗಾಯಗೊಂಡಿದ್ದು ಓರ್ವನನ್ನು ತುರ್ತು ನಿಗಾ ಘಟಕಕ್ಕೆ ದಾಖಲಿಸಲಾಗಿದೆ ಎಂದು ಪೊಲೀಸರನ್ನು ಉಲ್ಲೇಖಿಸಿದ ವರದಿ ತಿಳಿಸಿದೆ.
Next Story





