ಸ್ಪೇನ್ | ಹೋಟೆಲ್ ಕಟ್ಟಡ ಕುಸಿದು 6 ಮಂದಿ ಮೃತ್ಯು

ಮ್ಯಾಡ್ರಿಡ್ : ಸ್ಪೇನ್‍ನ ಬಲೆರಿಕ್ ದ್ವೀಪದಲ್ಲಿ ಎರಡು ಅಂತಸ್ತಿನ ಹೋಟೆಲ್ ಕುಸಿದುಬಿದ್ದು ಕನಿಷ್ಠ 4 ಮಂದಿ ಮೃತಪಟ್ಟಿದ್ದಾರೆ. ಇತರ 16 ಮಂದಿ ಗಾಯಗೊಂಡಿದ್ದು ಕಲ್ಲುಮಣ್ಣಿನ ರಾಶಿಯಡಿ ಇನ್ನಷ್ಟು ಮಂದಿ ಸಿಲುಕಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜನಪ್ರಿಯ ಪ್ರವಾಸೀತಾಣ ಪಾಮ್ ಡೆಮಲೋರ್ಕ ಬೀಚ್‍ನಲ್ಲಿರುವ ಎರಡು ಅಂತಸ್ತಿನ ಹೋಟೆಲ್‍ನ ಮೇಲಿನ ಮಹಡಿಯಲ್ಲಿ ಅತ್ಯಧಿಕ ಗ್ರಾಹಕರು ಸೇರಿದ್ದರಿಂದ ಭಾರ ಹೆಚ್ಚಾಗಿ ಮಹಡಿ ಕುಸಿದುಬಿದ್ದಿದೆ. ಗಾಯಾಳುಗಳಲ್ಲಿ 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಸ್ಥಳೀಯ ಪೊಲೀಸ್ ಇಲಾಖೆಯ ವಕ್ತಾರರನ್ನು ಉಲ್ಲೇಖಿಸಿ ಆರ್‍ಎನ್‍ಇ ರೇಡಿಯೊ ವರದಿ ಮಾಡಿದೆ.
Next Story





