ಪಾಕಿಸ್ತಾನ: ಪತ್ನಿ, 7 ಮಕ್ಕಳನ್ನು ಹತ್ಯೆ ಮಾಡಿದ ವ್ಯಕ್ತಿಯ ಬಂಧನ

ಲಾಹೋರ್: ಆರ್ಥಿಕ ಸಂಕಷ್ಟದಲ್ಲಿದ್ದ ವ್ಯಕ್ತಿ ತನ್ನ ಪತ್ನಿ ಮತ್ತು 7 ಮಕ್ಕಳನ್ನು ಕೊಡಲಿಯಿಂದ ಕೊಚ್ಚಿ ಹತ್ಯೆ ಮಾಡಿರುವ ಪ್ರಕರಣ ಪಾಕಿಸ್ತಾನದ ಪಂಜಾಬ್ ಪ್ರಾಂತದಲ್ಲಿ ವರದಿಯಾಗಿದೆ.
ಮುಝಾಫರ್ಗಢ ಜಿಲ್ಲೆಯ ಆಲಿಪುರ ಗ್ರಾಮದಲ್ಲಿ ಕೂಲಿಕೆಲಸ ಮಾಡುತ್ತಿದ್ದ ಸಜ್ಜಾದ್ ಖೋಖರ್ ಆರ್ಥಿಕ ಸಂಕಷ್ಟದಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ. ಸಂಸಾರ ನಿರ್ವಹಣೆ ಕಷ್ಟವಾಗಿದ್ದರಿಂದ ಪತ್ನಿ ಕೌಸರ್ ಹಾಗೂ 4 ಪುತ್ರಿಯರು ಮತ್ತು ಮೂವರು ಪುತ್ರರನ್ನು(8 ತಿಂಗಳಿಂದ 10 ವರ್ಷದೊಳಗಿನವರು) ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
Next Story