ಇಕ್ವೆಡಾರ್ನಲ್ಲಿ ಶೂಟೌಟ್ | 8 ಮಂದಿ ಮೃತ್ಯು
ಕ್ವಿಟೊ : ಇಕ್ವೆಡಾರ್ನಲ್ಲಿ ಶನಿವಾರ ನಡೆದ ಗುಂಡಿನ ದಾಳಿಯಲ್ಲಿ 8 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಕರಾವಳಿ ಪ್ರಾಂತ ಸಾಂತಾ ಎಲೆನಾದಲ್ಲಿನ ಬಾರ್ ಒಂದರಲ್ಲಿ ನಡೆಯುತ್ತಿದ್ದ ಬರ್ತ್ಡೇ ಪಾರ್ಟಿಗೆ ನುಗ್ಗಿದ ದುಷ್ಕರ್ಮಿಗಳು ಮನಬಂದಂತೆ ಗುಂಡು ಹಾರಿಸಿದಾಗ ಮೂವರು ಮಹಿಳೆಯರ ಸಹಿತ 8 ಮಂದಿ ಮೃತಪಟ್ಟಿದ್ದಾರೆ. ಪರಾರಿಯಾದ ದುಷ್ಕರ್ಮಿಗಳ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Next Story