ಗಾಝಾ ಪಟ್ಟಿ: ಇಸ್ರೇಲ್ ನ 9 ಯೋಧರ ಮೃತ್ಯು

Image Source : PTI
ಗಾಝಾ: ಹಮಾಸ್ ವಿರುದ್ಧದ ಸಂಘರ್ಷದಲ್ಲಿ ಶನಿವಾರ ತನ್ನ 9 ಯೋಧರು ಮೃತಪಟ್ಟಿದ್ದು ಇದರೊಂದಿಗೆ ಗಾಝಾ ಪಟ್ಟಿಯಲ್ಲಿ ಹಮಾಸ್ ವಿರುದ್ಧದ ಸಂಘರ್ಷದಲ್ಲಿ ಒಟ್ಟು 152 ಯೋಧರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ರವಿವಾರ ಮಾಹಿತಿ ನೀಡಿದೆ.
ಗಾಝಾದ ಖಾನ್ಯೂನಿಸ್ನಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ತುಕಡಿಯನ್ನು ಭೇಟಿ ಮಾಡಿದ ಇಸ್ರೇಲ್ ಸೇನಾ ಮುಖ್ಯಸ್ಥ ಹೆರ್ಝಿ ಹಲೆವಿ ` ಕಾರ್ಯಾಚರಣೆಯು ನಿಜವಾಗಿಯೂ ಪ್ರಭಾವಶಾಲಿಯಾಗಿದೆ. ಇದರಲ್ಲಿ ನಾವು ಯಶಸ್ಸು ಪಡೆಯುವುದರಲ್ಲಿ ಸಂಶಯವಿಲ್ಲ' ಎಂದರು. ಈ ಮಧ್ಯೆ, ಶುಕ್ರವಾರದಿಂದ ಶನಿವಾರದವರೆಗಿನ 24 ಗಂಟೆಯ ಅವಧಿಯಲ್ಲಿ ಇಸ್ರೇಲ್ ಪಡೆ ಗಾಝಾದ ಮೇಲೆ ನಡೆಸಿದ ದಾಳಿಯಲ್ಲಿ 200ಕ್ಕೂ ಅಧಿಕ ಮಂದಿ ಹತರಾಗಿದ್ದಾರೆ ಎಂದು ಹಮಾಸ್ ಅಧಿಕಾರಿಗಳು ಹೇಳಿದ್ದಾರೆ. ದಾಳಿಯ ಸಂದರ್ಭ ನಾಗರಿಕರ ರಕ್ಷಣೆಗೆ ಆದ್ಯತೆ ನೀಡುವಂತೆ ಅಮೆರಿಕವು ಇಸ್ರೇಲ್ ಅನ್ನು ಆಗ್ರಹಿಸಿದೆ.
Next Story





