ಈಜಿಪ್ಟ್ ನ ನೈಲ್ ನದಿಯಲ್ಲಿ ದೋಣಿ ಮುಳುಗಿ 10 ಮಂದಿ ಸಾವು

Photo : indiatoday
ಕೈರೋ: ಈಜಿಪ್ಟ್ ರಾಜಧಾನಿ ಕೈರೋದ ಬಳಿ ದಿನಗೂಲಿ ಕಾರ್ಮಿಕರನ್ನು ಕರೆದೊಯುತ್ತಿದ್ದ ದೋಣಿಯೊಂದು ನೈಲ್ ನದಿಯಲ್ಲಿ ಮುಳುಗಿದ್ದು 10 ಮಂದಿ ಮೃತಪಟ್ಟಿರುವುದಾಗಿ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ದೋಣಿಯಲ್ಲಿ 15 ಮಂದಿಯಿದ್ದರು. 5 ಮಂದಿಯನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಈಜಿಪ್ಟ್ ನ ಮಾನವ ಸಂಪನ್ಮೂಲ ಸಚಿವಾಲಯ ಹೇಳಿದೆ. ದುರಂತಕ್ಕೆ ಕಾರಣ ಸ್ಪಷ್ಟವಾಗಿಲ್ಲ.
ಮೃತಪಟ್ಟವರ ಕುಟುಂಬಕ್ಕೆ ತಲಾ 6,466 ಡಾಲರ್ ಪರಿಹಾರ ಮತ್ತು ಗಾಯಗೊಂಡ 5 ಮಂದಿಯ ಕುಟುಂಬಕ್ಕೆ ತಲಾ 646 ಡಾಲರ್ ಪರಿಹಾರ ಘೋಷಿಸಲಾಗಿದೆ. ಗಿಝಾ ಪ್ರಾಂತದ ಮೊನ್ಷಾಟ್ ಎಲ್-ಕನಟೆರ್ ಗ್ರಾಮದಲ್ಲಿ ದುರಂತ ಸಂಭವಿಸಿದ್ದು ಕಾರ್ಮಿಕರು ಸ್ಥಳೀಯ ನಿರ್ಮಾಣ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Next Story





