ವೆನೆಝುವೆಲಾ ಮೇಲೆ ಅಮೆರಿಕ ನಡೆಸಿದ ದಾಳಿಯಲ್ಲಿ 100 ಮಂದಿ ಮೃತ್ಯು: ವರದಿ

Photo credit: PTI
ಕ್ಯಾರಕಾಸ್, ಜ.8: ಕಳೆದ ಶನಿವಾರ ವೆನೆಝುವೆಲಾದ ಮೇಲೆ ಅಮೆರಿಕ ನಡೆಸಿದ ದಾಳಿಯಲ್ಲಿ 100 ಮಂದಿ ಮೃತಪಟ್ಟಿದ್ದಾರೆ ಎಂದು ವೆನೆಝುವೆಲಾದ ಆಂತರಿಕ ಸಚಿವ ಡಿಯೋಸ್ಡಡೊ ಕ್ಯಬೆಲ್ಲೋ ಹೇಳಿದ್ದಾರೆ.
ದಾಳಿಯಲ್ಲಿ ವೆನೆಝುವೆಲಾ ಅಧ್ಯಕ್ಷ ನಿಕೊಲಸ್ ಮಡುರೊ ಅವರ ಭದ್ರತಾ ಪಡೆಯ ಹಲವು ಸಿಬ್ಬಂದಿಗಳು ಮೃತಪಟ್ಟಿದ್ದಾರೆ ಎಂದವರು ಹೇಳಿದ್ದಾರೆ. ಅಮೆರಿಕಾ ದಾಳಿಯಲ್ಲಿ ಐದು ಅಧಿಕಾರಿಗಳ ಸಹಿತ 23 ಯೋಧರು ಮೃತಪಟ್ಟಿರುವುದಾಗಿ ವೆನೆಝುವೆಲಾದ ಮಿಲಿಟರಿ ಬುಧವಾರ ಮಾಹಿತಿ ನೀಡಿತ್ತು. ಅಮೆರಿಕಾದ ಕಾರ್ಯಾಚರಣೆ ಸಂದರ್ಭ ಮಡುರೊ ಅವರ ಕಾಲಿಗೆ ಮತ್ತು ಪತ್ನಿ ಸಿಲಿಯಾ ಫ್ಲೋರ್ಸ್ ಅವರ ತಲೆಗೆ ಗಾಯವಾಗಿದೆ ಎಂದು ಕ್ಯಬೆಲ್ಲೋ ಹೇಳಿದ್ದಾರೆ. ವೆನೆಝುವೆಲಾದಲ್ಲಿ ತನ್ನ ಮಿಲಿಟರಿ ಮತ್ತು ಗುಪ್ತಚರ ಸೇವೆಯ 32 ಸಿಬ್ಬಂದಿಗಳು ಮೃತಪಟ್ಟಿದ್ದಾರೆ ಎಂದು ಕ್ಯೂಬಾ ಹೇಳಿದೆ.
Next Story





