ರಶ್ಯ ದಾಳಿಯಲ್ಲಿ ಮೂವರು ಮಕ್ಕಳು ಸೇರಿ 11 ಸಾವು: ಉಕ್ರೇನ್ ಮಾಹಿತಿ

Photo Credit : AP
ಕೀವ್, ಅ.10: ಶನಿವಾರ ಉಕ್ರೇನ್ನ ಆಗ್ನೇಯ ನಗರವಾದ ಜಪೋರಿಝಿಯಾ ಮೇಲೆ ರಶ್ಯ ನಡೆಸಿದ ವೈಮಾನಿಕ ದಾಳಿಯಲ್ಲಿ ಮೂವರು ಮಕ್ಕಳು ಸೇರಿದಂತೆ ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ ಎಂದು ಪ್ರಾದೇಶಿಕ ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ಬೆಳಿಗ್ಗೆ ನಗರದ ವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ರಶ್ಯ ಐದು ಮಾರ್ಗದರ್ಶಿತ ವೈಮಾನಿಕ ಬಾಂಬ್ಗಳನ್ನು ಎಸೆದಿದ್ದು, ಎರಡು ವಸತಿ ಕಟ್ಟಡಗಳಿಗೆ ಹಾನಿಯಾಗಿದೆ. ವೈಮಾನಿಕ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ ಏರುತ್ತಲೇ ಇದೆ. ಪ್ರಸ್ತುತ, ಮೂವರು ಮಕ್ಕಳು ಸೇರಿದಂತೆ 11 ನಾಗರಿಕರು ಬಲಿಯಾಗಿದ್ದಾರೆ. ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಜನರಿಗಾಗಿ ರಕ್ಷಣಾ ಸಿಬ್ಬಂದಿ ಶೋಧ ಮುಂದುವರಿಸಿದ್ದಾರೆ ಎಂದು ಉಕ್ರೇನ್ ಪೊಲೀಸರು ತಿಳಿಸಿದ್ದಾರೆ.
Next Story




