ಗ್ರೀಕ್ ದ್ವೀಪಗಳ ಬಳಿ ದೋಣಿಗಳು ಮುಳುಗಿ 12 ವಲಸಿಗರು ಮೃತ್ಯು

ಸಾಂದರ್ಭಿಕ ಚಿತ್ರ | Photo credit : chatgpt
ಅಥೆನ್ಸ್ : ಈಶಾನ್ಯ ಏಜಿಯನ್ ಸಮುದ್ರದ ಲೆಸ್ಬೋಸ್ ಮತ್ತು ಸ್ಯಾಮೋಸ್ ಎಂಬ ಗ್ರೀಕ್ ದ್ವೀಪಗಳ ಬಳಿ ಸೋಮವಾರ ವಲಸಿಗರಿದ್ದ ಎರಡು ದೋಣಿಗಳು ಮಗುಚಿಬಿದ್ದು 12 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟರ್ಕಿಯಿಂದ ವಲಸಿಗರನ್ನು ಕರೆದೊಯ್ಯುತ್ತಿದ್ದ ಸ್ಪೀಡ್ಬೋಟ್, ಸ್ಯಾಮೋಸ್ ದ್ವೀಪದ ಉತ್ತರಕ್ಕೆ ಸುಮಾರು ನಾಲ್ಕು ನಾಟಿಕಲ್ ಮೈಲಿ ದೂರದಲ್ಲಿ ಮಗುಚಿಕೊಂಡ ಪರಿಣಾಮ ಆರು ಮಂದಿ ಮೃತಪಟ್ಟಿದ್ದು, 14 ಮಂದಿಯನ್ನು ರಕ್ಷಿಸಲಾಗಿದೆ. ಬದುಕುಳಿದವರಲ್ಲಿ ಒಬ್ಬರಾದ ಇರಾನ್ ಪ್ರಜೆಯನ್ನು ವಲಸಿಗರ ಕಳ್ಳಸಾಗಣೆ ಶಂಕೆಯ ಮೇಲೆ ಅಧಿಕಾರಿಗಳು ಬಂಧಿಸಿದ್ದಾರೆ.
ಲೆಸ್ಬೋಸ್ನ ಅಗ್ರಿಲಿಯಾ ಪ್ರದೇಶದಲ್ಲಿ ವಲಸಿಗರಿದ್ದ ದೋಣಿಯು ಕರಾವಳಿ ಕಾವಲುಪಡೆಯ ಹಡಗಿಗೆ ಡಿಕ್ಕಿ ಹೊಡೆದು ಮಗುಚಿದ ಪರಿಣಾಮ ಒಂದು ಶಿಶು ಸೇರಿದಂತೆ ಐದು ಮಂದಿ ಮೃತಪಟ್ಟಿದ್ದು, ಎಂಟು ಜನರನ್ನು ರಕ್ಷಿಸಲಾಗಿದೆ. ಬದುಕುಳಿದವರಲ್ಲಿ ಒಬ್ಬರಾದ ಟರ್ಕಿ ಪ್ರಜೆಯನ್ನು ವಲಸಿಗರ ಕಳ್ಳಸಾಗಣೆ ಶಂಕೆಯ ಮೇಲೆ ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.




