ಯಮನ್ ಮೇಲಿನ ಸೌದಿ ದಾಳಿಯಲ್ಲಿ 12 ಜನರ ಮೃತ್ಯು: ಹೌತಿಗಳಿಂದ ಮಾಹಿತಿ

Photo: AP News
ಸನಾ, ಅ.18: ಶನಿವಾರ ರಾತ್ರಿ ಆರಂಭವಾದ ಸೌದಿ ವೈಮಾನಿಕ ದಾಳಿಯಲ್ಲಿ ಯಮನ್ ನಲ್ಲಿ ಮೂವರು ಮಕ್ಕಳು ಸೇರಿದಂತೆ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ ಎಂದು ಹೂತಿಗಳ ಸ್ವಾಮ್ಯದ ‘ಸಬಾ’ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಶನಿವಾರ ತೈಝ್ ಪ್ರಾಂತದಲ್ಲಿ ನಾಗರಿಕರ ಮನೆಗಳನ್ನು ಗುರಿಯಾಗಿಸಿಕೊಂಡು ಸೌದಿ ಯುದ್ಧವಿಮಾನಗಳು ದಾಳಿ ನಡೆಸಿದ್ದು, ಒಂಭತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು 16 ಜನರು ಗಾಯಗೊಂಡಿದ್ದಾರೆ. ಹಲವರು ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ. ಧಮಾರ್ ಪ್ರಾಂತದಲ್ಲಿ ರಾತ್ರಿ ನಡೆದ ದಾಳಿಯಲ್ಲಿ ಮೂವರು ಮಕ್ಕಳು ಸಾವನ್ನಪ್ಪಿದ್ದು, 17 ಜನರು ಗಾಯಗೊಂಡಿದ್ದಾರೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ನಿಷೇಧಿಸಲಾದ ಕ್ಲಸ್ಟರ್ ಬಾಂಬ್ ಗಳನ್ನು ಬಳಸಿ ಈ ದಾಳಿಗಳನ್ನು ನಡೆಸಲಾಗಿದೆ ಎಂದು ವರದಿ ಹೇಳಿದೆ. ಹೌತಿಗಳ ಪ್ರಕಾರ, ಸೆಪ್ಟೆಂಬರ್ 3ರಿಂದ ಅಕ್ಟೋಬರ್ 15ರ ನಡುವೆ ಸೌದಿ ನಡೆಸಿದ ದಾಳಿಗಳಲ್ಲಿ ಒಟ್ಟು 115 ಜನರು ಸಾವನ್ನಪ್ಪಿದ್ದು, 305 ಜನರು ಗಾಯಗೊಂಡಿದ್ದಾರೆ.
Next Story




