ಸ್ಪೇನ್ನ ಕ್ಯಾನರಿ ದ್ವೀಪದಲ್ಲಿ ವಲಸಿಗರ ದೋಣಿಯಲ್ಲಿ 14 ಮೃತದೇಹ ಪತ್ತೆ

Photo Credit : aljazeera.com
ಮ್ಯಾಡ್ರಿಡ್: ಸ್ಪೇನ್ನ ಕ್ಯಾನರಿ ದ್ವೀಪದ ಬಳಿ ಸುಮಾರು 100 ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿಯನ್ನು ರಕ್ಷಿಸಿದ ನಂತರ, ಅದರಲ್ಲಿದ್ದ 14 ವಲಸಿಗರು ಮೃತಪಟ್ಟಿರುವುದು ಪತ್ತೆಯಾಗಿದೆ ಎಂದು ಸ್ಪೇನ್ನ ಸುದ್ದಿ ಸಂಸ್ಥೆ `ಇಎಫ್ಇ' ವರದಿ ಮಾಡಿದೆ.
ಎಲ್ ಹಿಯೆರೊ ದ್ವೀಪದ ದಕ್ಷಿಣಕ್ಕೆ 39 ನಾಟಿಕಲ್ ಮೈಲಿ ದೂರದಲ್ಲಿ ಪತ್ತೆಯಾದ ಈ ದೋಣಿಯನ್ನು `ಲಾ ಎಸ್ಟಾಕಾ' ಬಂದರಿಗೆ ಸ್ಥಳಾಂತರಿಸಲಾಗುತ್ತಿದೆ. ಗಂಭೀರ ಸ್ಥಿತಿಯಲ್ಲಿದ್ದ ಆರು ಜನರನ್ನು ಏರ್ಲಿಫ್ಟ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ವರದಿ ತಿಳಿಸಿದೆ. ಈ ಪ್ರದೇಶದಲ್ಲಿ ವಲಸಿಗರ ಆಗಮನ ಹೆಚ್ಚಾಗುತ್ತಿದ್ದು, ಅಧಿಕಾರಿಗಳಿಗೆ ಪರಿಸ್ಥಿತಿಯನ್ನು ನಿಭಾಯಿಸುವುದು ಕಷ್ಟಕರವಾಗಿದೆ.
Next Story




