ಲಾಹೋರ್ ನ ಟ್ಯೂಷನ್ ಸೆಂಟರ್ ನಲ್ಲಿ ಮೇಲ್ಛಾವಣಿ ಕುಸಿತ: 14 ಮಕ್ಕಳು ಮೃತ್ಯು

Photo : YouTube Screenshot
ಇಸ್ಲಾಮಾಬಾದ್, ಜೂ.30: ಪಾಕಿಸ್ತಾನದ ಲಾಹೋರ್ ನಲ್ಲಿ ಮಂಗಳವಾರ ಖಾಸಗಿ ಟ್ಯೂಷನ್ ಸೆಂಟರ್ ಒಂದರ ಮೇಲ್ಛಾವಣಿ ಕುಸಿದು ಕನಿಷ್ಠ 14 ಮಕ್ಕಳು ಸಾವನ್ನಪ್ಪಿದ್ದು, ಇತರ ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ 'ಕ್ಸಿನ್ಹುವಾ' ಸುದ್ದಿ ಸಂಸ್ಥೆ ವರದಿ ಮಾಡಿದೆ.
ಲಾಹೋರ್ ನ ಉಪನಗರ ಪ್ರದೇಶವಾದ ಕಹ್ನಾದಲ್ಲಿ ಈ ಘಟನೆ ಸಂಭವಿಸಿದೆ. ಮಕ್ಕಳು ಟ್ಯೂಷನ್ ತರಗತಿಗಳಿಗೆ ಹಾಜರಾಗಿದ್ದಾಗ ತರಗತಿಯ ಮೇಲ್ಛಾವಣಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದು, ವಿದ್ಯಾರ್ಥಿಗಳು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡರು.
ಈ ಘಟನೆಯಲ್ಲಿ 14 ಮಕ್ಕಳು ಸಾವನ್ನಪ್ಪಿದ್ದು, ಸುಮಾರು 10 ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.
Next Story




