ಯೆಮನ್ನ ಹೌದಿಗಳ ದಾಳಿಗೆ 14 ಸೈನಿಕರು ಮೃತ್ಯು : ವರದಿ

Photo Credit: arabnews
ಏಡನ್, ಜು.5: ಯೆಮನ್ನ ಇರಾನ್ ಬೆಂಬಲಿತ ಹೌದಿ ಬಂಡುಕೋರರು ಬಂದರು ನಗರ ಹೊದೈದಾದ ದಕ್ಷಿಣ ಭಾಗದಲ್ಲಿ ನಡೆಸಿದ ದಾಳಿಯಲ್ಲಿ 14 ಸೈನಿಕರು ಮೃತಪಟ್ಟಿದ್ದಾರೆ ಎಂದು ದೇಶದ ಅಂತರರಾಷ್ಟ್ರೀಯ ಮಾನ್ಯತೆ ಪಡೆದ ಸರಕಾರಕ್ಕೆ ನಿಷ್ಠವಾಗಿರುವ ಮಿಲಿಟರಿ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿ ಸಂಸ್ಥೆ ರವಿವಾರ ವರದಿ ಮಾಡಿದೆ.
ಶನಿವಾರ ಹೊದೈದಾದ ದಕ್ಷಿಣದಲ್ಲಿರುವ ಹಯ್ಸ್ ಜಿಲ್ಲೆಯಲ್ಲಿ ನಡೆದ ಈ ದಾಳಿಯನ್ನು ಸರಕಾರದ ಪರ ಪಡೆಗಳು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದು, ಎದುರಾಳಿ (ಹೌದಿ) ಬಣದಲ್ಲೂ ಸಾವು-ನೋವುಗಳು ಸಂಭವಿಸಿವೆ' ಎಂದು ವರದಿ ತಿಳಿಸಿದೆ.
Next Story




