ಅಮೆರಿಕ ಜೊತೆ ನ್ಯಾಯಯುತ ವ್ಯಾಪಾರ ಒಪ್ಪಂದ ಮಾಡಿಕೊಳ್ಳದಿದ್ದರೆ 155% ಸುಂಕ ವಿಧಿಸುತ್ತೇವೆ : ಚೀನಾಗೆ ಟ್ರಂಪ್ ಎಚ್ಚರಿಕೆ

Photo | indiatoday
ವಾಷಿಂಗ್ಟನ್ : ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅಮೆರಿಕ ಜೊತೆ ನ್ಯಾಯಯುತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕದಿದ್ದರೆ ನವೆಂಬರ್ 1ರಿಂದ ಚೀನಾದ ಸರಕುಗಳ ಮೇಲೆ ಶೇಕಡಾ 155ರಷ್ಟು ಸುಂಕವನ್ನು ವಿಧಿಸುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಪ್ರಯತ್ನಗಳ ಭಾಗವಾಗಿ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರೊಂದಿಗೆ ಟ್ರಂಪ್ ಶ್ವೇತಭವನದಲ್ಲಿ ನಿರ್ಣಾಯಕ ಖನಿಜ ಒಪ್ಪಂದಕ್ಕೆ ಸಹಿ ಹಾಕಿದ ಬೆನ್ನಲ್ಲೇ ಈ ಹೇಳಿಕೆ ನೀಡಿದ್ದಾರೆ.
"ಚೀನಾ ನಮ್ಮನ್ನು ತುಂಬಾ ಗೌರವಿಸುತ್ತಿದೆ ಎಂದು ನಾನು ಭಾವಿಸುತ್ತೇನೆ. ಅವರು ಸುಂಕದ ರೂಪದಲ್ಲಿ ನಮಗೆ ಅಪಾರ ಪ್ರಮಾಣದ ಹಣವನ್ನು ಪಾವತಿಸುತ್ತಿದ್ದಾರೆ. ನಿಮಗೆ ತಿಳಿದಿರುವಂತೆ, ಅವರು 55% ಸುಂಕ ಪಾವತಿಸುತ್ತಿದ್ದಾರೆ. ಅವರು ಸುಂಕದ ರೂಪದಲ್ಲಿ ನಮಗೆ ಅಪಾರ ಪ್ರಮಾಣದ ಹಣವನ್ನು ಪಾವತಿಸುತ್ತಿದ್ದಾರೆ. ನ್ಯಾಯಯುತ ವ್ಯಾಪಾರ ಒಪ್ಪಂದಕ್ಕೆ ಬರದಿದ್ದರೆ ನವೆಂಬರ್ 1ರಿಂದ ಚೀನಾದ ಸರಕುಗಳ ಮೇಲೆ ಶೇ.155 ರಷ್ಟು ಸುಂಕ ವಿಧಿಸಲಾಗುತ್ತದೆ" ಎಂದು ಹೇಳಿದ್ದಾರೆ.
ಈ ಹಿಂದೆ ಹಲವು ದೇಶಗಳು ಅಮೆರಿಕದ ಲಾಭ ಪಡೆದಿದೆ. ಇನ್ನು ಮುಂದೆ ಲಾಭ ಪಡೆಯಲು ಬಿಡುವುದಿಲ್ಲ. ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ನ್ಯಾಯಯುತ ವ್ಯಾಪಾರ ಒಪ್ಪಂದಕ್ಕೆ ಬರುತ್ತಾರೆ ಎಂದು ನಾನು ನಿರೀಕ್ಷಿಸುತ್ತೇನೆ ಎಂದು ಟ್ರಂಪ್ ಹೇಳಿದ್ದಾರೆ.







