ಅಮೆರಿಕ: ಅಕ್ರಮವಾಗಿ ಗಡಿದಾಟಿದ ಇಬ್ಬರು ಭಾರತೀಯರ ಬಂಧನ

ವಾಷಿಂಗ್ಟನ್, ಆ.7: ಕೆನಡಾದ ಗಡಿಭಾಗದ ಮೂಲಕ ಅಮೆರಿಕವನ್ನು ಅಕ್ರಮವಾಗಿ ಪ್ರವೇಶಿಸಿದ್ದ ಇಬ್ಬರು ಭಾರತೀಯ ಪ್ರಜೆಗಳನ್ನು ಮೆಯ್ನ್ ರಾಜ್ಯದ ಬ್ರಿಜ್ವಾಟರ್ ನಗರದ ಬಳಿ ಗಡಿ ಗಸ್ತು ಪಡೆ ಬಂಧಿಸಿರುವುದಾಗಿ ವರದಿಯಾಗಿದೆ.
ಕೆನಡಾದಿಂದ ಕಾಲ್ನಡಿಗೆ ಮೂಲಕ ಅಮೆರಿಕಾ ಗಡಿ ದಾಟಿದ ಇಬ್ಬರನ್ನು ಆಗಸ್ಟ್ 1ರಂದು ಬಂಧಿಸಲಾಗಿದ್ದು ಕಸ್ಟಡಿಗೆ ಪಡೆಯಲಾಗಿದೆ. ಇವರು ವಲಸೆ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಲಿದ್ದಾರೆ ಎಂದು ಗಡಿ ಗಸ್ತುಪಡೆ ಅಧಿಕಾರಿಗಳು ಹೇಳಿದ್ದಾರೆ.
Next Story





