9/11ರ ಉಗ್ರರ ದಾಳಿಗೆ 22 ವರ್ಷ
ಅಮೆರಿಕದ ವಿವಿಧೆಡೆ ಸ್ಮರಣೆ

Photo- PTI
ವಾಷಿಂಗ್ಟನ್ : ನ್ಯೂಯಾರ್ಕ್ನ ವಲ್ಡ್ ಟ್ರೇಡ್ ಸೆಂಟರ್ ನ ಅವಳಿ ಕಟ್ಟಡಕ್ಕೆ ಹಾಗೂ ಪೆಂಟಗಾನ್ ಕಟ್ಟಡಕ್ಕೆ ಉಗ್ರರು ವಿಮಾನವನ್ನು ಡಿಕ್ಕಿಹೊಡೆಸಿ ನಡೆಸಿದ ಕೃತ್ಯ 9/11ರ ದಾಳಿ ಎಂದೇ ಹೆಸರಾಗಿದ್ದು, ಈ ದುರಂತದ 22ನೇ ವಾರ್ಷಿಕ ದಿನದ ಸಂದರ್ಭ ಸೋಮವಾರ ಅಮೆರಿಕದ ವಿವಿಧೆಡೆ ಕಾರ್ಯಕ್ರಮ ನಡೆಸಿ ಅಗಲಿದವರಿಗೆ ಪುಷ್ಪನಮನ ಸಲ್ಲಿಸಲಾಯಿತು.
ಸೇನಾನೆಲೆ ಆಂಕರೇಜ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಪಾಲ್ಗೊಂಡಿದ್ದರು. ಅಮೆರಿಕ ಮಿಲಿಟರಿಯ ಪ್ರಧಾನ ಕಚೇರಿಯಲ್ಲಿ ಪೆಂಟಗಾನ್ ಅಧಿಕಾರಿಗಳು ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು.
ಅವಳಿ ಕಟ್ಟಡ ನೆಲಸಮಗೊಂಡ ಪ್ರದೇಶದಲ್ಲಿ ನಿರ್ಮಿಸಲಾಗಿರುವ 9/11 ಸ್ಮಾರಕ ಸ್ಥಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತಿತರ ಉನ್ನತ ಅಧಿಕಾರಿಗಳು, ದುರಂತದಲ್ಲಿ ಮೃತಪಟ್ಟವರ ಕುಟುಂಬದವರು ಭಾಗವಹಿಸಿ ಪುಷ್ಪನಮನ ಸಲ್ಲಿಸಿದರು. 2001ರ ಸೆಪ್ಟಂಬರ್ 11ರಂದು ನಡೆದಿದ್ದ ಭಯೋತ್ಪಾದಕ ದಾಳಿಯಲ್ಲಿ 3,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.