Canada | ವಸತಿ ಪ್ರದೇಶದಲ್ಲಿ ಶೂಟೌಟ್ ಘಟನೆ; ಮೂವರು ಭಾರತೀಯರ ಬಂಧನ

Photo: X/@surreyps
ಟೊರಾಂಟೊ, ಫೆ.3: ಕೆನಡಾದ ಸರ್ರೆ ರಾಜ್ಯದಲ್ಲಿರುವ ಕ್ರಿಸೆಂಟ್ ಬೀಚ್ನ ವಸತಿ ಪ್ರದೇಶವೊಂದರಲ್ಲಿ ಜ. 31ರ ತಡರಾತ್ರಿ ನಡೆದ ಶೂಟೌಟ್ ಘಟನೆಗೆ ಸಂಬಂಧಿಸಿ ಮೂವರು ಭಾರತೀಯ ಮೂಲದ ವ್ಯಕ್ತಿಗಳನ್ನು ಕೆನಡಿಯನ್ ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಸರ್ರೆ ಪೊಲೀಸರು ಹೇಳಿಕೆ ನೀಡಿದ್ದು ಆರೋಪಿಗಳ ವಿರುದ್ಧ ಕೆನಡಿಯನ್ ಕ್ರಿಮಿನಲ್ ಸಂಹಿತೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಕ್ರಿಸೆಂಟ್ ಬೀಚ್ ರಸ್ತೆಯ ವಸತಿ ಪ್ರದೇಶದಲ್ಲಿ ಗುಂಡು ಹಾರಾಟ ನಡೆದಿರುವ ಬಗ್ಗೆ ವರದಿಯಾದ ಬಳಿಕ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದರು. ಬಂಧಿತ ಆರೋಪಿಗಳನ್ನು ಹರಜೋತ್ ಸಿಂಗ್ (21), ತರಣ್ವೀರ್ ಸಿಂಗ್ (19) ಹಾಗೂ ದಯಾಜೀತ್ (21) ಎಂದು ಗುರುತಿಸಲಾಗಿದೆ.
ಈ ಶೂಟೌಟ್ ಪ್ರಕರಣದ ಆರೋಪಿಗಳ ಬಗ್ಗೆ ಸುಳಿವು ನೀಡುವ ವ್ಯಕ್ತಿಗಳಿಗೆ ಸರ್ರೆ ಸುಲಿಗೆ ವಿರೋಧಿ ನಿಧಿಯಿಂದ ಬಹುಮಾನ ಘೋಷಿಸಲಾಗಿತ್ತು ಎಂದು ಸರ್ರೆ ರಾಜ್ಯ ಪೊಲೀಸರ ಹೇಳಿಕೆ ತಿಳಿಸಿದೆ.
Next Story





