ರಶ್ಯದ ಬೆಲ್ಗೊರೊಡ್ ಮೇಲೆ ಉಕ್ರೇನ್ ನಿಂದ ಡ್ರೋನ್ ದಾಳಿ: ಮೂವರು ಮೃತ್ಯು

Photo Credit : themoscowtimes
ಮಾಸ್ಕೊ, ಆ. 9: ರಶ್ಯದ ಬೆಲ್ಗೊರೊಡ್ ನಗರದ ಮೇಲೆ ಉಕ್ರೇನ್ ಶನಿವಾರ ತಡರಾತ್ರಿ ನಡೆಸಿದ ಡ್ರೋನ್ ದಾಳಿಯಲ್ಲಿ ಮೂವರು ಮೃತಪಟ್ಟಿದ್ದು, 25 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.
ದಾಳಿಯಿಂದಾಗಿ ಎರಡು ಅಪಾರ್ಟ್ಮೆಂಟ್ ಕಟ್ಟಡಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಪಾರ ಸಂಖ್ಯೆಯ ವಸತಿ ಮತ್ತು ವಸತಿಯೇತರ ಕಟ್ಟಡಗಳು ಹಾನಿಗೊಳಗಾಗಿವೆ. ಬಶ್ಕೋರ್ಟೊಸ್ಟಾನ್ ಪ್ರದೇಶದ ಉಫಾ ನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಮತ್ತು ಕ್ರೇನ್ಗೆ ಡ್ರೋನ್ ಅಪ್ಪಳಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸರಕಾರಿ ಸ್ವಾಮ್ಯದ `ಆರ್ಐಎ' ಸುದ್ದಿಸಂಸ್ಥೆ ವರದಿ ಮಾಡಿದೆ. ಶನಿವಾರ ತಡರಾತ್ರಿಯಿಂದ 150ಕ್ಕೂ ಹೆಚ್ಚು ಉಕ್ರೇನಿಯನ್ ಡ್ರೋನ್ ಗಳನ್ನು ಹೊಡೆದುರುಳಿಸಿರುವುದಾಗಿ ರಶ್ಯದ ರಕ್ಷಣಾ ಸಚಿವಾಲಯ ತಿಳಿಸಿದೆ.
ಮತ್ತೊಂದೆಡೆ, ಉಕ್ರೇನ್ ನ ಕಪ್ಪು ಸಮುದ್ರದ ಬಂದರು ಮೂಲಸೌಕರ್ಯಗಳ ಮೇಲೆ ರಶ್ಯ ಶನಿವಾರ ತಡರಾತ್ರಿ ದಾಳಿ ನಡೆಸಿರುವುದಾಗಿ ವರದಿಯಾಗಿದೆ.
Next Story




